
29th July 2025
ಬಳ್ಳಾರಿ ಜುಲೈ 26. ಮುಂದಿನ ತಿಂಗಳು ಅಂದರೆ ಆಗಸ್ಟ್ ಮೂರರಂದು ನಗರದಲ್ಲಿ ಸ್ಟೀಲ್ ಸಿಟಿ ರನ್ 2025ನ್ನು ಹಮ್ಮಿಕೊಳ್ಳಲಾಗಿದೆ ಆಸಕ್ತರು ಈ ಓಟದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಸಿಕೊಳ್ಳಬೇಕೆಂದು ಸ್ಟೀಲ್ ಸಿಟಿ ರನ್ ಕಾರ್ಯಕ್ರಮ ಅಧ್ಯಕ್ಷರಾದ ಡಾಕ್ಟರ್ ಸೋಮನಾಥ್ ತಿಳಿಸಿದರು.
ಅವರು ನಗರದ ಬಾಲ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ನಾವು ಈ ಹಿಂದೆ ಆರೋಗ್ಯ ಮತ್ತು ದೈಹಿಕ ದೃಢತೆಗಾಗಿ ಸ್ಟೀಲ್ ಸಿಟಿ ರನ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೆವು ಆದರೆ ಕಳೆದ ಮೂರು ವರ್ಷದಿಂದ ಸ್ಟೀಲ್ ಸಿಟಿ ರನ್ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸುವುದರಿಂದ ಇದನ್ನು ಸಾರ್ವಜನಿಕ ಗೊಳಿಸುವ ಉದ್ದೇಶದಿಂದ 3 ಕಿ.ಮೀ 5 ಕಿ.ಮೀ ಮತ್ತು 10 ಕಿ.ಮೀ ದೂರದ ಓಟದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವು ಸಂಗನಕಲ್ಲು ರಸ್ತೆಯ ವಿಜಿಡಂ ಸ್ಕೂಲ್ ಇಂದ ಆರಂಭವಾಗಿ ಅಲ್ಲಿಂದ ಒಂದುವರೆ ಕಿಲೋ ಮೀಟರ್ ಎರಡುವರೆ ಮತ್ತು 5 ಕಿ.ಮೀಗಳ ಅಂತರವನ್ನು ಕ್ರಮಿಸಬೇಕಾಗುತ್ತದೆ.
ವಿಜಯ್ ಶಾಲಿ ಗಳಿಗಾಗಿ ಸುಮಾರು 5.25 ಲಕ್ಷದ ಬಹುಮಾನವನ್ನು ವಿತರಿಸಲಾಗುವುದು ನಗರದ ಸಾರ್ವಜನಿಕರು ಒಂದು ಎರಡು ಮತ್ತು ಮೂರನೇ ಬಹುಮಾನವನ್ನು ಪಡೆಯದೆ ಹೋದಲ್ಲಿ ಅವರಿಗೆ ನಾಲ್ಕು ಮತ್ತು 5ನೇ ಬಹುಮಾನ ಖಚಿತವಾಗಿರುತ್ತದೆ ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್ ಗಾಗಿ ಎಲ್ಲರೂ ಈ ಓಟದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ನೊಂದಣಿ ಶುಲ್ಕ 10 ಕಿ.ಮೀ ಗೆ 500 ರೂಪಾಯಿ, ಐದು ಕಿಲೋಮೀಟರ್ ಗೆ ನನ್ನೂ400 ರೂಪಾಯಿ ಮತ್ತು ಮೂರು ಕಿಲೋಮೀಟರ್ ಸ್ಪರ್ಧೆಗೆ 350 ರೂಪಾಯಿಗಳನ್ನು ನಿಗದಿಗೊಳಿಸಲಾಗಿದೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಒಂದು ಟೀ ಶರ್ಟ್, ಮುಂಜಾನೆಯ ಉಪಹಾರ ಮತ್ತು ಮಧ್ಯ ಮಧ್ಯದಲ್ಲಿ ಹೆಲ್ತ್ ಚೆಕ್ ಅಪ್ ಕ್ಯಾಂಪ್ ಗಳನ್ನು ಸಹ ಅಳವಡಿಸಲಾಗುವುದು. ನಗರದ ಸಾರ್ವಜನಿಕರು ಈ ಸ್ಟೀಲ್ ಸಿಟಿ ರನ್ ಓಟದ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯವಂತರಾಗಿರಿ ಎಂದು ಅವರು ಸಾರ್ವಜನಿಕರಿಗೆ ತಿಳಿಸಿದರು.
ಈ ಸ್ಪರ್ಧೆಯಲ್ಲಿ ಸುಮಾರು 14 ರಾಜ್ಯಗಳ 4000 ಅಧಿಕ ಜನ ಪಾಲ್ಗೊಳ್ಳುವ ನೀರಿಕ್ಷೆ ಇದೆ ಈಗಾಗಲೇ 1000 ಜನ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಇದು ಹೆಮ್ಮೆಯ ವಿಷಯ, ಅತ್ಯಂತ ಮುಖ್ಯವಾಗಿ ಈ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಅಥ್ಲೆಟ್ ನಗರದ ಸುದೀಸ್ಟ್ನ ರೆಡ್ಡಿ ಉದ್ಘಾಟಿಸುವರು. ಈ ಕಾರ್ಯಕ್ರಮವನ್ನು ಜೆಎಸ್ಡಬ್ಲ್ಯೂ ಸೇರಿದಂತೆ ವಿವಿಧ ಸಂಸ್ಥೆಗಳು ಪ್ರಾಯೋಜಕತ್ವವನ್ನು ಹೊಂದಿವೆ. ಆಸಕ್ತರು ಅದೇ ದಿನ ಕೂಡ ನೋಂದಣಿಯನ್ನು ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್, ರವಿಶಂಕರ್, ವಿನೋದ್ ಜೈನ್, ಡಾಕ್ಟರ್ ಶಶಿಧರ್, ಡಾಕ್ಟರ್ ಸುಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ* *ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ*
ಕೆಎಂಎಫ್ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧ ಆಯ್ಕೆ