
1st August 2025
ಬಳ್ಳಾರಿ ಆ 01. ದಿನಾಂಕ: 01/08/2025 ರಂದು ಬಳ್ಳಾರಿ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಶ್ರೀನಂದ ವಸತಿ ಶಾಲೆ ವಿದ್ಯಾನಗರ. ಈ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಶಾಲೆಯ ಗುರುಗಳಿಗೆ ಶುಭ ಶ್ರಾವಣ ಮಾಸದಲ್ಲಿ ಶುಕ್ರವಾರದಂದು ಪ್ರತಿವರ್ಷದಂತೆ ಈದಿನ ಭಾರತೀಯ ಸಂಪ್ರದಾಯ, ಸಂಸ್ಕೃತಿಯಂತೆ ಗುರುಮಾತೆಯರಿಗೆ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಿಗೆ ಹರಿಶಿಣ ಕುಂಕುಮದೊಂದಿಗೆ ಶಾಲೆಯ ಅಧ್ಯಕ್ಷರಾದ ಗಾಂಧಿರವರು ನೂತನ ಸಮವಸ್ತ್ರಗಳನ್ನು ಕೊಡುವುದರ ಮೂಲಕ ಗೌರವಿಸಿದರು. ಇಂತಹ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷರಾದ ವಿ.ಮುರಳಿಕೃಷ್ಣ ಮತ್ತು ಕಾರ್ಯದರ್ಶಿಗಳಾದ ವಿ.ರಮಣಕುಮಾರ್ರವರು ಭಾಗವಹಿಸಿದರು.
ಡಂಬಳ ಗ್ರಾಮದಲ್ಲಿ ಆಹಾರ ಸಂರಕ್ಷಣಿಯ ಮೇಲ್ವಿಚಾರಣೆ ಕುರಿತು ತರಬೇತಿ ಕಾರ್ಯಕ್ರಮ