
1st August 2025
ಬಳ್ಳಾರಿ : ಆ 01 .ರಾಘವರ 145ನೇ ಜಯಂತಿಯ ಅಂಗವಾಗಿ ರಾಘವ ಕಲಾಮಂದಿರದಲ್ಲಿ ಆಗಷ್ಟ್ 2 ಶನಿವಾರ ಸಂಜೆ 6 ಗಂಟೆಗೆ ನಡೆಯುವ
ರಾಘವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಸಿದ್ದರಾಮ ಕಲ್ಮಠ ವೀರಚಿತ ರಂಗಭೂಮಿಯ ಅನರ್ಘ್ಯ ರತ್ನ ಬಳ್ಳಾರಿ ರಾಘವ ಕೃತಿಯು ಬಿಡುಗಡೆಯಾಗಲಿದೆ ಎಂದು ರಾಘವ ಕಲಮಂದಿರದ ವ್ಯವಸ್ಥಾಪಕರಾದ ರಮಣಪ್ಪ ಬಜಂತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ ದಿನ ಸನಾರಂಭವನ್ನು ಉದ್ಘಾಟಿಸಲಿರುವ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ
ಸಿ.ನಾಗರಾಜ್ ಅವರು ಕೃತಿ ಲೋಕಾರ್ಪಣೆ ಮಾಡುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ದ ಜನಪದ ಗಾಯಕರು, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ
ಪಿಚ್ಚಳ್ಳಿ ಶ್ರೀನಿವಾಸ ಅವರು ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ
ಕೆ ಚನ್ನಪ್ಪ ವಹಿಸುವರು.
ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿರುವರು.
ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿಯನ್ನು
ಡಿಂಗ್ರಿ ನಾಗರಾಜ್, ಬೆಂಗಳೂರು
ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು.
ಕಲಾ ಸಂಗಮ ಸಂಸ್ಥೆ, ಧಾರವಾಡ ಇವರ
"ಸಮರ ಸಿಂಹ ಸಂಗೊಳ್ಳಿ ರಾಯಣ್ಣ"
ಕನ್ನಡ ಐತಿಹಾಸಿಕ ನಾಟಕದ ಪ್ರದರ್ಶನವಿದೆ.
ಕಲಾಸಕ್ತರು,ಸರ್ವರೂ ಆಗಮಿಸಿ ಸಮಾರಂಭವನ್ನು ಯಶಸ್ವಿ ಗೊಳಿಸಬೇಕೆಂದು ಅವರು ಕಲಾ ಪೋಷಕರು ಮತ್ತು ಕಲಾಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಡಂಬಳ ಗ್ರಾಮದಲ್ಲಿ ಆಹಾರ ಸಂರಕ್ಷಣಿಯ ಮೇಲ್ವಿಚಾರಣೆ ಕುರಿತು ತರಬೇತಿ ಕಾರ್ಯಕ್ರಮ