
2nd August 2025
ಬಳ್ಳಾರಿ:ಆ,02; ಕಳೆದೆ ಬಾರಿಯ ಹೋರಾಟದಲ್ಲಿ ಭಾಗವಹಿಸಿದ ಇಲಾಖೆಯ ನೌಕರರ ಅಮಾನತು ರದ್ದುಪಡಿಸಿ ಪುನಃ ಸೇವೆಗೆ ತೆಗೆದುಕೊಳ್ಳುವುದು, 38 ತಿಂಗಳ ಹಿಂಬಾಕಿ ಪಾವತಿ, 2024ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ರಾಜ್ಯದಾದ್ಯಂತ ಆ.5 ರಿಂದ ಬಸ್ ಸಂಚಾರ ಬಂದ್ ಮಾಡಿ ಅನಿರ್ದಿಷ್ಟಾವದಿ ಮುಷ್ಕರವನ್ನು ನಡೆಸಲಿದ್ದೇವೆ ಎಂದು ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹೆಚ್.ಎ.ಆದಿಮೂರ್ತಿ ಹೇಳಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಸರ್ಕಾರ ಆಗಸ್ಟ್ 4ರೊಳಗೆ ಬೇಡಿಕೆ ಈಡೇರಿಸದಿದ್ದರೆ, ಆಗಸ್ಟ್ 5 ರಿಂದ ಸಾರಿಗೆ ಇಲಾಖೆಯ ಎಲ್ಲಾ ನಿಗಮಗಳ ಬಸ್ ಸಂಚಾರ ರದ್ದುಪಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸಮಿತಿಯ ಮುಖಂಡರು ಸರ್ಕಾರಕ್ಕೆ
ಎಚ್ಚರಿಕೆ ನೀಡಿದರು.
2020ರ ಜನವರಿ 1ರಿಂದ ಸಾರಿಗೆ ನೌಕರರ ವೇತನ ಶೇ 15ರಷ್ಟು ಹೆಚ್ಚಳವಾಗಿತ್ತು. ಪರಿಷ್ಕರಣೆ ನಂತರದ 38 ತಿಂಗಳ ಹಣ ನೀಡುವುದು ಬಾಕಿ ಇದೆ. 2023ರ ಡಿಸೆಂಬರ್ 31ರಂದು ಇದ್ದ ಮೂಲ ವೇತನದಲ್ಲಿ ಶೇ 31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ, 2024ರ ಜನವರಿ 1ರಿಂದ ಅನ್ವಯವಾಗುವಂತೆ ಶೇ 25ರಷ್ಟು ವೇತನ ಹೆಚ್ಚಿಸಬೇಕು.
ಏಪ್ರಿಲ್ 15ರಂದು ಕರೆದಿದ್ದ ಸಭೆಯಲ್ಲಿ ‘ನಮ್ಮ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಜುಲೈ 4ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನಿಗಮಗಳ ನೌಕರರಿಗೆ 38 ತಿಂಗಳ ಹಿಂಬಾಕಿ ಕೊಡಲು ಆಗುವುದಿಲ್ಲ . 2027ರವರೆಗೆ ವೇತನ ಪರಿಷ್ಕರಣೆ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಮುಷ್ಕರದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ’ ಎಂದು ಅವರು ತಿಳಿಸಿದರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲನೆ ಗ್ಯಾರಂಟಿಯಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತು. ನೌಕರರ ಹಾಗೂ ವಾಹನಗಳ ಸಂಖ್ಯೆ ಕಡಿಮೆ ಇದ್ದರೂ ನಾವು ಕಷ್ಟ ಪಟ್ಟು ಕೆಲಸ ಮಾಡಿ ಶಕ್ತಿ ಯೋಜನೆಯನ್ನು ಯಶಸ್ವಿ ಮಾಡಿದೆವು. ಈಗಾಗಲೇ 500 ಕೋಟಿಯಷ್ಟು ಸಾರಿಗೆ ಸಂಚಾರವನ್ನು ಮಹಿಳಾ ಪ್ರಯಾಣಿಕರು ನಮ್ಮ ಸೇವೆಯನ್ನು ಪಡೆದಿದ್ದಾರೆ. ಇದನ್ನು ಜಾರಿ ಮಾಡುವುದರಲ್ಲಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಇತರ ಎಲ್ಲಾ ಸಿಬ್ಬಂದಿಗಳೂ ಹೈರಾಣಾಗಿದ್ದಾರೆ. ಈ ನಮ್ಮ ಸೇವೆ ಮತ್ತು ಅದರ ಹಿಂದಿರುವ ಪರಿಶ್ರಮವನ್ನು ಸರ್ಕಾರವು ಗುರುತಿಸದೆ ಸಾರಿಗೆ ನೌಕರರಿಗೆ ವಿಶ್ವಾಸ ದ್ರೋಹವೆಸಗಿದೆ ಶಕ್ತಿ ಯೋಜನೆಯ ಬಾಕಿ 3500 ಕೋಟಿ ನೀಡಿದರು ಸಾಕು ನಮಗೆ ಅನುಕೂಲವಾಗುತ್ತದೆ ಈ ಮುಷ್ಕರವನ್ನು ರದ್ದು ಪಡಿಸುತ್ತೇವೆ ಎಂದರು
ಇದೇ ಸಿಎಂ ಸಿದ್ದರಾಮಯ್ಯ ನವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಕೆ.ಎಸ್.ಆರ್.ಟಿ.ಸಿ. ನೌಕರರ ಸಮಸ್ಯೆ ಕೇಳಲಿಲ್ಲ, ಇವತ್ತು ಅವರನ್ನ ಹೆದರಿಸಿ, ಬೆದರಿಸಿ ಎಸ್ಮಾ ತರ್ತೀವಿ, ಖಾಸಗಿ ಬಸ್ಗಳನ್ನು ಓಡಿಸ್ತೀವಿ ಸರ್ಕಾರಿ ಬಸ್ಗಳನ್ನು ನಿಲ್ಲಿಸಬಿಡ್ತೀವಿ, ವರ್ಗಾಮಾಡ್ತೀವಿ, ಡಿಸ್ ಮಿಸ್ ಮಾಡ್ತೀವಿ, ಅಂತಾ ಹೇಳಿ ಹೆದರಿಸ್ತೀಯೇನಪ್ಪಾ? ಕುರ್ಚಿ ಶಾಶ್ವತ ಅಂತ ತಿಳಿದುಕೊಂಡಿದ್ದೀಯ ಯಡ್ಯೂರಪ್ಪ?" ಎಂದು ಹೇಳಿದ್ದರು ಆದರೆ ಇವತ್ತು ಅವರು ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದ ಕಾರ್ಮಿಕ ಮುಖಂಡ ಆದಿಮೂರ್ತಿ ನಮ್ಮ ಕಾರ್ಮಿಕರಿಗೆ ಬಸ್ ಸ್ಟಾಂಡ್ ಗಳಲ್ಲಿ ಹಾಗೂ ಡಿಪೋಗಳಲ್ಲಿ ವಿಶ್ರಾಂತಿ ಕೊಠಡಿ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಭ್ಯಗಳಿಲ್ಲದೇ ಇದ್ದರು ಸಹ ನಾವು ಸಂಚಾರದಲ್ಲಿ ಯಾವುದೇ ತೊಂದರೆ ಇಲ್ಲದಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ಈಗಲೂ ಕೂಡ ಸರ್ಕಾರವು ಮರು ಆಲೋಚನೆ ಮಾಡಿ ಮುಕ್ತಮನಸ್ಸಿನಿಂದ ನಮ್ಮ ಬೇಡಿಕೆಗಳನ್ನು ಸಂಧಾನದ ಮೂಲಕ ಬಗೆಹರಿಸುವ ಅವಕಾಶವಿದೆ. ಹಾಗೂ ಎಸ್ಮಾ ಮತ್ತಿತರ ಕಾರ್ಮಿಕ ವಿರೋಧಿ ಕ್ರಮಗಳಿಂದ ನಮ್ಮ ಹೋರಾಟದ ಕೆಚ್ಚನ್ನು ನಂದಿಸಲು ಸಾಧ್ಯವಿಲ್ಲ. ನಾವು ಸಂಧಾನಕ್ಕೆ ಸಿದ್ಧರಿದ್ದೇವೆ. ಸಂಘರ್ಷಕ್ಕೂ ಸಿದ್ಧರಿದ್ದೇವೆ. ಆಯ್ಕೆ ಸರ್ಕಾರಕ್ಕೆ ಸೇರಿದ್ದು, ಎಂದು ಕಾರ್ಮಿಕ ಮುಖಂಡರು ಎಚ್ಚರಿಸಿದ್ದಾರೆ.
ಇನ್ನು ನಮ್ಮ ಮುಷ್ಕರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಾಹ್ಯ ಬೆಂಬಲ ನೀಡಿದ್ದಾರೆ.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5 ರಂದು ಕರೆ ನೀಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ಮಜ್ದೂರ್ ಸಂಘವು ಸಹ ತಿಳಿಸಿದೆ. ಅಂದು ರಾಜ್ಯಾದ್ಯಂತ ಎಲ್ಲಾ ಬಸ್ ಸಂಚಾರ ಸ್ಥಗಿತವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಟಿ.ಚನ್ನಪ್ಪ, ಶಿವಕುಮಾರ್, ಶಫೀ, ಗಾಂದಿಲಿಂಗಪ್ಪ, ಬಸವರಾಜ್, ಹನುಮಂತಪ್ಪ, ಬಸವರಾಜ್, ಹನುಮಂತರೆಡ್ಡಿ, ಹನುಮನಾಯ್ಕ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಒಳ ಮೀಸಲಾತಿ ಹೊರಾಟಕ್ಕಿಲ್ಲ ಸ್ಪಂದನೆ- ಶಾಸಕ ರೆಡ್ಡಿ ಮತ್ತು ಬಿಜೆಪಿ ಅಧ್ಯಕ್ಷರ ಬಗ್ಗೆ- ಬಿಜೆಪಿ ಎಸ್.ಸಿ ಮೋರ್ಚಾ ಅಸಮಾಧಾನ
ಬಳ್ಳಾರಿ ಮಹಾನಗರ ಪಾಲಿಕೆ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಮನವಿ-ಆಯುಕ್ತ ಖಲೀಲ್ ಸಾಬ್
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಕಳ್ಳರ ಸಂತೆ!!. ಕೋಟಿ ಕೋಟಿ ಟಾಕ್ಸ್ ವಂಚನೆ!!. •ಬ್ಲಾಕ್ ಮನಿ ವೈಟ್!! 25 ಲಕ್ಷ ಮಾಮೂಲಿ ತೆರಿಗೆ ಅಧಿಕಾರಿಗಳಿಗೆ!!