
2nd August 2025
ಬಳ್ಳಾರಿ ಆ. 02: ರಾಜ್ಯ ರೈತ ಸಂಘ ಸಂಘ ಹಾಗೂ ಹಸಿರುಸೇನೆ, ಬಳ್ಳಾರಿ ಜಿಲ್ಲಾ ವತಿಯಿಂದ ಎ.ಪಿ.ಎಂ.ಸಿ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ , ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಕ್ಕಿ ಕೃಷ್ಣಮೂರ್ತಿ, 2025 ಜನವರಿ ತಿಂಗಳ ಆಂಧ್ರ ರೈತರಿಗೆ 5000 ಸಾವಿರ ರೂಪಾಯಿ ಟೆಂಡರ್ ಹಾಕಿ 4000 ಸಾವಿರ ರೂಪಾಯಿಗಳು ಕೊಟ್ಟಿರುತ್ತಾರೆ.
ಮೆಕ್ಕೆಜೋಳ ರೂ.2300, ಇದು ರೂ.1800 ನೂರು ರೂಪಾಯಿ ನೀಡಿರುತ್ತಾರೆ ಮತ್ತು ತೊಗರಿಯನ್ನು
ರೂ.6500/-ಯನ್ನು ರೂ.5000 ಇಂದು ಸಾವಿರ ರೂಪಾಯಿಗಳು ನೀಡುತ್ತಿದ್ದು, ರೈತರಿಗೆ ತುಂಬಾ
ಮೋಸ ಮಾಡುತ್ತಿದ್ದಾರೆ, ರೈತರಿಗೆ ಎ.ಪಿ.ಎಂ.ಸಿ. ಮೂರು ದಿನ ಬಂದ್ ಆಗಿದೆ ಎಂದು ಸುಳ್ಳು ಹೇಳಿ ವರ್ತಕರು ಮತ್ತು ದಳ್ಳಾಳಿ ಅಂಗಡಿಯವರು ರೈತರಿಗೆ ಅನ್ಯಾಯ ಮಾಡಿರುತ್ತಾರೆ ಕೂಡಲೇ ಎಪಿಎಂಸಿ ವರ್ತಕರು ಮತ್ತು ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಪಿಎಂಸಿ ಕಾರ್ಯದರ್ಶಿಯವರಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಿದರು.
ರೈತಸಂಘಕ್ಕೆ ತಿಳಿದಾಗ ರೈತರು ಸಂಘ ಪ್ರತಿಭಟನೆ ಮಾಡಿದಾಗ, ಅಲ್ಲಿರುವ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯ
ಸಿ.ಪಿ.ಐ ಯವರು ಈ ರೀತಿಯಾಗದಂತೆ ಮುಂದಿನ ದಿನಗಳಲ್ಲಿ ಕ್ರಮವಹಿಸುವುದಾಗಿ ತಿಳಿಸಿರುತ್ತಾರೆ.
ಮತ್ತೆ ಈ ರೀತಿಯ ಮೋಸ ಕಂಡು ಬಂದಲ್ಲಿ ರೈತ ಸಂಘದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವಿ ಎಸ್ ಶಿವಶಂಕರ್, ಮಾರಣ್ಣ ವೀರೇಶ್, ಕೊಳಗಲ್ಲು ಎರಿಸ್ವಾಮಿ ಸೇರಿದಂತೆ ಸಂಘದ ಮುಖಂಡರು ಹಾಗೂ ಹಲವು ರೈತರಿದ್ದರು.
ಒಳ ಮೀಸಲಾತಿ ಹೊರಾಟಕ್ಕಿಲ್ಲ ಸ್ಪಂದನೆ- ಶಾಸಕ ರೆಡ್ಡಿ ಮತ್ತು ಬಿಜೆಪಿ ಅಧ್ಯಕ್ಷರ ಬಗ್ಗೆ- ಬಿಜೆಪಿ ಎಸ್.ಸಿ ಮೋರ್ಚಾ ಅಸಮಾಧಾನ
ಬಳ್ಳಾರಿ ಮಹಾನಗರ ಪಾಲಿಕೆ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಮನವಿ-ಆಯುಕ್ತ ಖಲೀಲ್ ಸಾಬ್
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಕಳ್ಳರ ಸಂತೆ!!. ಕೋಟಿ ಕೋಟಿ ಟಾಕ್ಸ್ ವಂಚನೆ!!. •ಬ್ಲಾಕ್ ಮನಿ ವೈಟ್!! 25 ಲಕ್ಷ ಮಾಮೂಲಿ ತೆರಿಗೆ ಅಧಿಕಾರಿಗಳಿಗೆ!!