
2nd August 2025
ಗಂಗಾವತಿ.
ದೆಹಲಿಯ ಕೆಂಪುಕೋಟೆಯಲ್ಲಿ ಆ.೧೫ ರಂದು ನಡೆಯಲಿರುವ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೇಮ್ಮ ಹೊನ್ನಪ್ಪ ನಾಯಕ ಅವರನ್ನು ವಿಶೇಷ ಅತಿಥಿಯಾಗಿ ಭಾಗವಹಿಸಲು ಅಹ್ವಾನ ನೀಡಲಾಗಿದೆ.
ಈ ಕುರಿತು ಕರ್ನಾಟಕ ಪಂಚಾಯತ್ರಾಜ್ ಆಯುಕ್ತಾಲಯದ ನಿರ್ದೇಶಕರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಆ.೧೫ ರಂದು ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವ ಸಮಾರಂಭವನ್ನು ಕೇಂದ್ರ ಸರಕಾರ ಅದ್ದೂರಿಯಾಗಿ ಆಯೋಜಿಸುತ್ತದೆ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ನಂತರ ದೇಶದ ವಿವಿಧ ಭಾಗದಿಂದ ಬಂದಂತಹ ಮತ್ತು ಭಾರತೀಯ ಸೇನೆಯಿಂದ ಪೆರೇಡ್ ನಡೆಯುತ್ತದೆ. ಜೊತೆಗೆ ವಿದೇಶಿ ಗಣ್ಯರು ಕೂಡಾ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಯ ಏಳು ಜನ ಗ್ರಾಪಂ ಅಧ್ಯಕ್ಷರನ್ನು ಅಹ್ವಾನಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ತಾಲೂಕಿನ ಐತಿಹಾಸಿಕ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೇಮ್ಮ ಹೊನ್ನಪ್ಪ ನಾಯಕ ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಹ್ವಾನ ನೀಡಿರುವುದು ಕೇವಲ ಆನೆಗೊಂದಿ ಗ್ರಾಪಂಗಷ್ಟೆ ಅಲ್ಲ ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯಲ್ಲಿ ಆನೆಗೊಂದಿ ಐತಿಹಾಸಿಕ ತಾಣವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿಯ ಐತಿಹಾಸಿ ಸ್ಥಳಗಳು ಯುನೆಸ್ಕೋ ಪಟ್ಟಿಯಲ್ಲಿವೆ. ಜೊತೆಗೆ ಇಲ್ಲಿ ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ, ಒಂಬತ್ತು ಯತಿಗಳ ಮೂಲ ವೃಂದಾವನ ಇರುವ ನವವೃಂದಾವನ ಗಡ್ಡೆ, ವಾಲಿ ಕಿಲ್ಲಾ, ದುರ್ಗಾಬೆಟ್ಟ, ಸೇರಿದಂತೆ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಹಲವು ಕುರುಗಳು ಇಂದಿಗೂ ಆಕರ್ಷಣೀಯವಾಗಿವೆ. ಮತ್ತು ವಿಜಯನಗರ ಸಾಮ್ರಾಜ್ಯದ ವಂಶಸ್ಥರು ನೆಲೆಸಿದ್ದಾರೆ. ಇಂತಹ ಐತಿಹಾಸಿಕ ತಾಣದ ಕೇಂದ್ರ ಸ್ಥಾನವಾಗಿರುವ ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೇಮ್ಮ ನಾಯಕ ಅವರಿಗೆ ದೆಹಲಿ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿರುವ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ದೆಹಲಿ ಕೆಂಪುಕೋಟೆಯಲ್ಲಿ ಆ.೧೫ ರಂದು ನಡೆಯಲಿರುವ ಸ್ವಂತಂತ್ರೋತ್ಸವ ಸಮಾರಂಭದಲ್ಲಿ ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೇಮ್ಮ ಸೇರಿದಂತೆ ರಾಜ್ಯದ ಶ್ರೀಂಗೇರಿ ತಾಲೂಕಿನ ಕೆರೆ ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಗೋಪಾಲ್, ಕೊಡುಗೆ ಜಿಲ್ಲೆಯ ಹುಡುಕೇರಿ ಗ್ರಾಪಂ ಕಾವೇರೆಮ್ಮ, ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ, ತುಮಕುರ ತಾಲೂಕಿನ ಮ್ಯಾಡಾಳ ಗ್ರಾಪಂ ಅಧ್ಯಕ್ಷ ಉಮೇಶ, ಖಾನಾಪುರ ತಾಲೂಕಿನ ನಂದಗಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪ, ಚಿತ್ತಾಪುರ ತಾಲೂಕಿನ ಕರಡಾಳ ಗ್ರಾಪಂ ಅಧ್ಯಕ್ಷೆ ಮೆಮ್ತಾಜ್ಬೇಗಂ ಅವರಿಗೆ ಅಹ್ವಾನ ನೀಡಿದ್ದು, ಇವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಲು ಕೆಲವು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಒಳ ಮೀಸಲಾತಿ ಹೊರಾಟಕ್ಕಿಲ್ಲ ಸ್ಪಂದನೆ- ಶಾಸಕ ರೆಡ್ಡಿ ಮತ್ತು ಬಿಜೆಪಿ ಅಧ್ಯಕ್ಷರ ಬಗ್ಗೆ- ಬಿಜೆಪಿ ಎಸ್.ಸಿ ಮೋರ್ಚಾ ಅಸಮಾಧಾನ
ಬಳ್ಳಾರಿ ಮಹಾನಗರ ಪಾಲಿಕೆ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಮನವಿ-ಆಯುಕ್ತ ಖಲೀಲ್ ಸಾಬ್
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಕಳ್ಳರ ಸಂತೆ!!. ಕೋಟಿ ಕೋಟಿ ಟಾಕ್ಸ್ ವಂಚನೆ!!. •ಬ್ಲಾಕ್ ಮನಿ ವೈಟ್!! 25 ಲಕ್ಷ ಮಾಮೂಲಿ ತೆರಿಗೆ ಅಧಿಕಾರಿಗಳಿಗೆ!!