

4th August 2025

ಕೊಪ್ಪಳ.
ನಗರದ ೩ನೇ ವಾರ್ಡ್ನ ನಿರ್ಮಿತಿ ಕೇಂದ್ರದ ಹತ್ತಿರವಿರುವ ಮಸೀದಿ ಎದುರ ೨೬ ವರ್ಷದ ಗವಿ ನಾಯಕ ಎಂಬ ಹಿಂದು ಯುವಕನನ್ನು ಮುಸ್ಲಿಂ ಯುವಕರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಕೊಲೆ ಮಾಡಿರುವ ಸಾದಿಕ್ ಎಂಬ ಯುವಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಇನ್ನುಳಿದವರನ್ನು ಪತ್ತೆ ಹೆಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕರ ನಡುವೆ ಜಗಳವಾಗಿ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಭಾನುವಾರ ರಾತ್ರಿ ಘಟನೆ ನಡೆದಿದ್ದು, ಕೊಲೆಯಾದ ಸ್ಥಳದಲ್ಲಿ ರಕ್ತದ ಕಲೆಗಳಿದ್ದು, ಮಚ್ಚುಗಳು ದೊರೆತಿವೆ. ಕೊಲೆಯಾದ ಯುವಕ ಗವಿಸಿದ್ದಪ್ಪ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಯುವತಿಯ ಪಾಲಕರು ಯುವಕನಿಗೆ ತಿಳಿ ಹೇಳಿದ್ದಾರೆ. ಆದರೂ ಗವಿಸಿದ್ದಪ್ಪ ಯುವತಿಯೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದು, ಇನ್ನೊಬ್ಬ ಮುಸ್ಲಿಂ ಯುವಕ ಕೂಡಾ ಮೊದಲು ಅದೇ ಯುವತಿಯನ್ನು ಪ್ರೀತಿಸುತ್ತಿದ್ದು, ಇಬ್ಬರು ಯುವಕರ ನಡುವೆ ಜಗಳವಾಗಿದ್ದು, ಭಾನುವಾರ ರಾತ್ರಿ ಬೈಕ್ ಮೇಲೆ ಬರುತ್ತಿದ್ದ ಗವಿಸಿದ್ದಪ್ಪನ್ನು ಸಾದಿಕ್ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ಮೂಲಗಳ ಪ್ರಕಾರ ನಾಲ್ಕೈದು ಜನ ಸೇರಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯಿಂದ ಸ್ಪಷ್ಟ ಮಾಹಿತಿ ಹೊರಬರಲಿದೆ. ಕೊಲೆಯಾದ ಯುವಕನ ಪಾಲಕರ ಆಕ್ರಂದನ ಜೋರಾಗಿತ್ತು. ರಾತ್ರಿ ೮ ಗಂಟೆ ಸುಮಾರಿಗೆ ಜನರು ಓಡಾಡುವ ಸ್ಥಳದಲ್ಲಿ ಕೊಲೆಯಾಗಿದ್ದರಿಂದ ನಗರದಲ್ಲಿ ಜನ ಭಯಭೀತರಾಗಿದ್ದು, ಕೆಲವು ಪ್ರದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಪೊಲೀಸರು ಎಲ್ಲಾ ಕಡೆಗಳಲ್ಲಿ ಕಟ್ಟೆಚ್ಚರವಹಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಎಸ್ಪಿ ಡಾ|| ರಾಮ ಅರಸಿದ್ದಿ ಪ್ರಕರಣದ ತನಿಖೆ ನಡೆಯುತ್ತಿದೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದಿಲ್ಲ. ಆದರೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿಡಿಗೊಡಬಾರದು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ