
6th August 2025
ಬಳ್ಳಾರಿ, ಆ.06: ಜನರ ಕಲ್ಯಾಣಕ್ಕಾಗಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ನಗರದ ವಿವಿಧ ವಾರ್ಡುಗಳಲ್ಲಿ ಏರ್ಪಡಿಸಿದ್ದ ಭೂಮಿ ಪೂಜೆಗಳಲ್ಲಿ ಭಾಗವಹಿಸಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಗರ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯಾವುದೇ ಕಾಮಗಾರಿ ಅನಗತ್ಯ ವಿಳಂಬ ಆಗಬಾರದು, ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ, ಅಭಿವೃದ್ಧಿ ಕಾಮಗಾರಿ ಯಾವುದೇ ಕಾರಣಕ್ಕೂ ಜನರಿಗೆ ಸಮಸ್ಯೆ ಎನಿಸಬಾರದು ಎಂದರು.
ವಾರ್ಡ್ ಸಂಖ್ಯೆ 35ರ ಸತ್ಯವಾಣಿ ನಗರದಲ್ಲಿ ಅಂದಾಜು 20 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ 1 ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಯಿತು. ಅದೇ ರೀತಿ ಕರಿಮಾರೆಮ್ಮ ಕಾಲೋನಿಯಲ್ಲಿ ಅಂದಾಜು 20 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭ ಪಾಲಿಕೆಯ ಸದಸ್ಯ ಮಿಂಚು ಸೀನಾ, ಎಂ.ಪ್ರಭಂಜನಕುಮಾರ್, ವಿ.ಕುಬೇರಾ, ಕಾಂಗ್ರೆಸ್ ಮುಖಂಡರಾದ ಎಲ್ ಮಾರೆಣ್ಣ, ಎರಕುಲಸ್ವಾಮಿ, ಸಿದ್ಧೇಶ್, ಗುಡ್ಲೂರು ರವಿ, ಲಾರಿ ಮಾಲೀಕರ ಸಂಘದ ಶ್ರೀನಿವಾಸ್, ಸಂತೋಷ, ಸ್ಥಳೀಯ ಮುಖಂಡರಾದ ಬಾನು ಮತ್ತಿತರರು ಹಾಜರಿದ್ದರು.
ತದ ನಂತರ ವಾರ್ಡ್ ಸಂಖ್ಯೆ 36ರ ರಾಜೇಶ್ವರಿ ನಗರದಲ್ಲಿ ಅಂದಾಜು 40 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ 1 ಮತ್ತು 2ರ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಅದೇ ರೀತಿ ಭತ್ರಿ ಗುಡ್ಡದ ಬಳಿ ಅಂದಾಜು ವೆಚ್ಚ 20 ಲಕ್ಷ ರೂ.ಗಳ ವೆಚ್ಚದ ಅಂಗನವಾಡಿ ಕೇಂದ್ರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಲೋಕೇಶ್, ಭತ್ರಿ ವಾಸು, ಗಂಗಾಧರ್ ಮತ್ತಿತರರು ಹಾಜರಿದ್ದರು.
ಮಧ್ಯಾಹ್ನದ ನಂತರ ಕೋಲಾಚಲಂ ಕಂಪೌಂಡ್ ರಸ್ತೆ ಹಾಗೂ ಬೀದಿ ದೀಪ ಅಳವಡಿಕೆಯ ಅಂದಾಜು ವೆಚ್ಚ 1 ಕೋಟಿ 2 ಲಕ್ಷ ರೂ.ಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಡಾ.ಶ್ರೀಧರ್ ಗಡ್ಡಿ, ಡಾ.ರಾಜೇಶ್, ಥಿಯೇಟರ್ ಶಿವು ಸೇರಿದಂತೆ ಹಲವರು ಹಾಜರಿದ್ದರು.
undefined
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ
ಆದರ್ಶ ಪ್ರೇಮ ಸಾಮಾಜಿಕ ನಾಟಕ, ನಾಳೆ ಕೇವಲ ಎರಡು ಪ್ರಯೋಗಗಳು ಮಾತ್ರ ಪ್ರದರ್ಶನ