
7th August 2025
ಬೆಂಗಳೂರು.
ಕೊಪ್ಪಳದ ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಹಿಂದೂ ವಾಲ್ಮೀಕಿ ನಾಯಕ ಸಮಾಜದ ಯುವಕ ಗವಿಸಿದ್ಧಪ್ಪ ನಾಯಕ ಕೊಲೆಯ ಹಿಂದೆ ಕೇವಲ ಒಬ್ಬ ವ್ಯಕ್ತಿಯಲ್ಲ, ಹತ್ತಾರು ಜನರು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರ ಹನುಂತುಪ್ರಕರಣ ತನಿಖೆಯನ್ನು ಎನ್ ಐಎಗೆ ವುಹಿಸುವಂತೆ ಅಗ್ರಹಿಸಿದ್ದಾರೆ.
ಬುಧವಾರ ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಕೊಪ್ಪಳ ಪೊಲೀಸ್ ಅಧಿಕಾರಿಯ ನಡೆಯನ್ನು ಖಂಡಿಸಿದ್ದಾರೆ. ಕೊಪ್ಪಳದ ಯುವಕನ ಕೊಲೆ ಪ್ರಕಣದಲ್ಲಿ ಪೊಲೀಸ್ ಅಧಿಕಾರಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕೊಲೆಯ ಆರೋಪಿಗಳಾದ ಸಾದೀಕ್ ಮತ್ತವನ ಸಹಚಚರಿಗೆ ಹಾಗೂ ಪ್ರಿತಿಸಿದ ಯುವತಿ ಭಾನುಗೆ ಪಿಎಫ್ಐ ನಂಟು ಇರುವ ಸಾಧ್ಯತೆ ಇದೆ ಎಂದಯ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಇದೆಲ್ಲವನ್ನೂ ಪೊಲೀಸರು ಬಯಲಿಗೆಳೆಯಬೇಕು ಹಾಗು ಸರ್ಕಾರ NIA ತನಿಖೆ ಮಾಡಬೇಕೆಂದು ಒತ್ತಾಯಿಸದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಹೆಚ್.ಎನ್ .ಚಂದ್ರಶೇಖರ್ ಇದ್ದರು.
undefined
ಒಳ ಮೀಸಲಾತಿ ಹೊರಾಟಕ್ಕಿಲ್ಲ ಸ್ಪಂದನೆ- ಶಾಸಕ ರೆಡ್ಡಿ ಮತ್ತು ಬಿಜೆಪಿ ಅಧ್ಯಕ್ಷರ ಬಗ್ಗೆ- ಬಿಜೆಪಿ ಎಸ್.ಸಿ ಮೋರ್ಚಾ ಅಸಮಾಧಾನ
ಬಳ್ಳಾರಿ ಮಹಾನಗರ ಪಾಲಿಕೆ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಮನವಿ-ಆಯುಕ್ತ ಖಲೀಲ್ ಸಾಬ್
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಕಳ್ಳರ ಸಂತೆ!!. ಕೋಟಿ ಕೋಟಿ ಟಾಕ್ಸ್ ವಂಚನೆ!!. •ಬ್ಲಾಕ್ ಮನಿ ವೈಟ್!! 25 ಲಕ್ಷ ಮಾಮೂಲಿ ತೆರಿಗೆ ಅಧಿಕಾರಿಗಳಿಗೆ!!