
8th August 2025
ಬಳ್ಳಾರಿ ಆ 07. ಸುಪ್ರೀಮ್ ಕೋರ್ಟ್ ಆದೇಶವಾಗಿ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಮತ್ತು ಇತರೆ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸದೇ ವೃಥಾ ಕಾಲಹರಣ ಮಾಡುತ್ತಿದೆ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮತ್ತು ಕಾಂತರಾಜ್ ವರದಿಯ ಅಂಕಿ ಅಂಶಗಳನ್ನು ಪಡೆದುಕೊಂಡು ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಹಿರಿಯ ಸಾಹಿತಿ ಎನ್.ಡಿ ವೆಂಕಮ್ಮ ಸರ್ಕಾರವನ್ನು ಒತ್ತಾಯಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಸರ್ಕಾರಕ್ಕೆ ಮಾತೃ ಹೃದಯವಿರಬೇಕು ಸಮ ಸಮಾಜವನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು ಒಳ ಮೀಸಲಾತಿಯಿಂದ ಮಾತ್ರ ಸಮಾದಲ್ಲಿ ಎಲ್ಲರನ್ನು ಮುನ್ನೆಲೆಗೆ ತರಲು ಸಾಧ್ಯ, ಇದು ಸರ್ಕಾರದ ಮುಖ್ಯಮಂತ್ರಿಗಳಿಗೆ ವಿಶಾಲವಾದ ಮಾತೃ ಹೃದಯವಿದ್ದಲ್ಲಿ ಮಾತ್ರ ಇದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ ಮಾತನಾಡಿ, ಒಳ ಮೀಸಲಾತಿ ಹೋರಾಟವನ್ನು ಇದೇ ತಿಂಗಳು 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಾಷ್ಟವಾಧಿ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ, ಈ ಹೋರಾಟಕ್ಕೆ ಮನೆಗೊಬ್ಬ ವ್ಯಕ್ತಿ ಜೊತೆಯಲ್ಲಿ ಪ್ರತಿಯೊಬ್ಬರು ಕೈಯಲ್ಲಿ ಬುತ್ತಿ ಹಿಡಿದುಕೊಂಡು ಹೋರಾಟಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು. ಪ್ರತಿಪಕ್ಷಗಳು ನಮ್ಮ ಹೋರಾಟವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳ ಮುಖಂಡರ ವಿರುದ್ಧ ಕಿಡಿಕಾರಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಬಸವರಾಜ್ ಕೌತಾಳ್, ಅಂಬಣ್ಣ ಆರೋಲಿಕರ್ , ಸಣ್ಣ ಮಾರೆಪ್ಪ , ಗೆಸ್ಟ್ ಹಾಸ್ ಈಶ್ವರಪ್ಪ, ರಾಮಕೃಷ್ಣ, ಆಂಜಿನೇಯ, ಹುಸೇನಪ್ಪ, ಸೇರಿದಂತೆ ಹಲವರಿದ್ದರು.
ಡಂಬಳ ಗ್ರಾಮದಲ್ಲಿ ಆಹಾರ ಸಂರಕ್ಷಣಿಯ ಮೇಲ್ವಿಚಾರಣೆ ಕುರಿತು ತರಬೇತಿ ಕಾರ್ಯಕ್ರಮ