
8th August 2025
ಬಳ್ಳಾರಿ,ಆ.07: ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಾಗನೂರು ಗ್ರಾಮದಲ್ಲಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚಾಗನೂರು ಗ್ರಾಮದ ನಿವಾಸಿ ಸಿ.ಜಯಲಕ್ಷ್ಮಿ ಹಾಗೂ ರಾಘವ ರೆಡ್ಡಿ ದಂಪತಿಗಳು ಮತ್ತು ಅವರ ಮಕ್ಕಳಾದ ಮಲ್ಲಿಕಾರ್ಜುನ ರೆಡ್ಡಿ, ಶ್ರೀನಿವಾಸ್ ರೆಡ್ಡಿಯವರು ಸೇರಿ ಮಕ್ಕಳ ಶಿಕ್ಷಣಕ್ಕಾಗಿ ಶಾಲಾ ಕಟ್ಟಡಕ್ಕೆ ಒಂದುವರೆ ಎಕ್ಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಇದರ ಹಿನ್ನೆಲೆಯಲ್ಲಿ ಚಾಗನೂರು ಗ್ರಾಮದ ಹಿರಿಯ ಮುಖಂಡರಾದ ಕರಡಿ ತಿಪ್ಪಯ್ಯ ಮತ್ತು ಅವರ ಮಕ್ಕಳು ಸೇರಿ ಸಿ.ಜಯಲಕ್ಷ್ಮಿ, ರಾಘವ ರೆಡ್ಡಿ ದಂಪತಿಗಳವರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅಭಿನಂದಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಚಿತವಾಗಿ ಏನೇಕೊಡಬೇಕಾದರೆ ಇನ್ನೊಬ್ಬರಿಂದ ಲಾಭ ಬಯಸುವುದನ್ನು ಆಲೋಚಿಸಿ ಕೊಡುತ್ತಾರೆ. ಅಂತಾದರಲ್ಲಿ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು, ಮಕ್ಕಳು ಒಳ್ಳೆ ವಿದ್ಯಾವಂತರಾಗಿ ಊರಿಗೆ, ದೇಶಕ್ಕೆ ಒಳ್ಳೆ ಹೆಸರು ತರಬೇಕೆಂಬ ಕಲ್ಪನೆಯೊಂದಿಗೆ ಗ್ರಾಮಕ್ಕೆ ಉಚಿತವಾಗಿ ಅದೂ ದಾನವಾಗಿ ಚಾಗನೂರು ಗ್ರಾಮದ ರಾಘವ ರೆಡ್ಡಿ ಕುಟುಂಬದವರು ಶಾಲಾ ಕಟ್ಟಡಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಆದ್ದರಿಂದ ಗ್ರಾಮದಲ್ಲಿ ಇಡೀ ಗ್ರಾಮಸ್ಥರು ಸೇರಿ ನೂತನ ಕಟ್ಟಡವನ್ನು ಉದ್ಘಟಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊನೆಯಲ್ಲಿ ಕರಡಿ ತಿಪ್ಪಯ್ಯ ಮತ್ತು ಅವರ ಮಕ್ಕಳು ಸೇರಿ ಸಿ.ಜಯಲಕ್ಷ್ಮಿ ರಾಘವ ರೆಡ್ಡಿ ಕುಟುಂಬದವರಿಗೆ ಸಮಾಜ ಸೇವೆ ಶಕ್ತಿಯನ್ನು ಇನ್ನು ಎತ್ತರಕ್ಕೆ ಬೆಳೆದು ನೂರಾರು ಜಾರಿಗೆ ಆಸರೆಯಾಗಲಿ ಎಂದು ಶುಭ ಹಾರೈಸಿದರು.
undefined
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ
ಆದರ್ಶ ಪ್ರೇಮ ಸಾಮಾಜಿಕ ನಾಟಕ, ನಾಳೆ ಕೇವಲ ಎರಡು ಪ್ರಯೋಗಗಳು ಮಾತ್ರ ಪ್ರದರ್ಶನ