

10th August 2025

ಬಳ್ಳಾರಿ ಆ 09. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬಳ್ಳಾರಿ ವತಿಯಿಂದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಅಂಗವಾಗಿ ಇಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಾನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ ನಾಗರಾಜ್, ಡಾ. ಗಂಗಾಧರ ಎಲ್, ಸಮುದಾಯದ ಮುಖಂಡರಾದ ಶ್ರೀರಾಮುಲು, ಶಂಕ್ರಪ್ಪ ಹಾಗೂ ಮತ್ತಿತರು ಹಾಜರಿದ್ದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ ಕಾಯಕಯೋಗಿ ನುಲಿಯ ಚಂದಯ್ಯ 12 ನೇ ಶತಮಾನದ ಬಸವಣ್ಣರ ಕಾಲದ ಅನುಭವ ಮಂಟಪದಲ್ಲಿನ 770 ಶರಣರಲ್ಲಿ ಒಬ್ಬರಾಗಿದ್ದರು. ಇಂದಿನ ಸಂಸತ್ ಪರಿಕಲ್ಪನೆಯೇ ಅಂದಿನ ಅನುಭವ ಮಂಟಪ. ಅಂದಿನ ಕಾಲದಲ್ಲಿ ನುಲಿಯ ಚಂದಯ್ಯ ಹಗ್ಗ ಹೆಣೆಯುವ ಕಾಯಕದಲ್ಲಿ ತೊಡಗಿ ಅತಿಯಾಸೆ ಪಡದೆ, ಕಾಯಕ ಮಾಡಿದಷ್ಟೆ ಫಲಾಪೇಕ್ಷೆ ಭಯಸುವ ನಿಜಶರಣರಾಗಿದ್ದರು. ಇಂದಿನ ಜನತೆ ನುಲಿಯ ಚಂದಯ್ಯರವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ಸಮಾಜ ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರಲ್ಲದೆ ಸಮುದಾಯದ ಮಹಿಳೆಯರು ವಿಶೇಷವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವತ್ತ ಹೆಜ್ಜೆ ಹಾಕಬೇಕೆಂದು ಮನವಿ ಮಾಡಿದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ