

10th August 2025

ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸುಗೂರು ನೂತನ ರೈಲ್ವೆ ಮಾರ್ಗದ ರಚನೆಯಿಂದ
ಈಗಾಗಲೇ ಕಾಮಗಾರಿ ಆರಂಭವಾಗಿ ಸಿಂಧನೂರು ವರೆಗೆ ರೈಲು ಸಂಚಾರ ಆರಂಭವಾಗಿರುವ ಮುನಿರಾಬಾದ್ ಮೆಹಬೂಬ್ ನಗರ ರೈಲ್ವೆ ಮಾರ್ಗಕ್ಕೆ ಸಿಂಧನೂರಿನಲ್ಲಿ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ ಬಳ್ಳಾರಿಯಿಂದ ಸಿಂಧನೂರು ರೈಲ್ವೆ ಮಾರ್ಗ ಕೇವಲ 75km ಅಂತರದಲ್ಲಿ ಇರುತ್ತದೆ ಈ ಮಾರ್ಗದ ಸಂಪರ್ಕದಿಂದ ಬಳ್ಳಾರಿಯಿಂದ ಮೆಹಬೂಬ್ ನಗರಕ್ಕೆ ಸಂಪರ್ಕ ದೊರೆಯುತ್ತದೆ.
ಗದಗ ವಾಡಿ ನೂತನ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು ಲಿಂಗಸೂರಿನಲ್ಲಿ ಬಳ್ಳಾರಿ ಲಿಂಗಸುಗೂರು ನೂತನ ರೈಲು ಮಾರ್ಗದ ಸಂಪರ್ಕದಿಂದ ಬಳ್ಳಾರಿಯಿಂದ ವಾಡಿವರೆಗೆ ರೈಲು ಸಂಪರ್ಕ ದೊರೆಯುತ್ತದೆ .
ಸಿರುಗುಪ್ಪ ತಾಲೂಕು ತುಂಗಭದ್ರಾ ನೀರಾವರಿಯ ವ್ಯಾಪ್ತಿಗೆ ಬರುತ್ತಿದ್ದು ಇಲ್ಲಿ ರೈತರ ಬೆಳೆಯುವ ಭತ್ತ ಉತ್ತಮ ಗುಣಮಟ್ಟದ್ದಾಗಿದ್ದು ಸಿರುಗುಪ್ಪ ದಲ್ಲಿ ಸಾಕಷ್ಟು ಅಕ್ಕಿ ಮಿಲ್ ಗಳು ಇರುತ್ತವೆ
ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸೂರು ರೈಲು ಮಾರ್ಗದಿಂದ ರೈತರ ಬೆಳೆದ ಬತ್ತ ದೇಶದ ನಾನಾ ಮೂಲೆಗೆ ಸಾಗಾಣಿಕೆ ಮಾಡಬಹುದಾಗಿದೆ ಇದರಿಂದ ರೈಲ್ವೆ ಇಲಾಖೆಗೆ ಸಾಗಾಣಿಕೆ ವರಮಾನದ ಜೊತೆಗೆ ಪ್ರಯಾಣಿಕರು ಸಂಚರಿಸುವ ವರಮಾನ ದೊರೆಯುತ್ತದೆ.
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಕೇಂದ್ರ ಸರ್ಕಾರ 371ರ ವಿಶೇಷ ಸ್ಥಾನಮಾನ ನೀಡಿದ್ದು ಈ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ಜಿಲ್ಲೆ ರಾಯಚೂರು ಜಿಲ್ಲೆ ಯಾದಗಿರಿ ಕಲ್ಬುರ್ಗಿ ಜಿಲ್ಲೆಗಳಿಗೆ ನೂತನ ರೈಲಿನ ಸಂಪರ್ಕ ಒದಗಿಸಿದಂತಾಗುತ್ತದೆ.
ನೈರುತ್ಯ ರೈಲ್ವೆ ವಲಯದವರು ಸಲ್ಲಿಸಿದ ಎರಡು ಸರ್ವೆಗಳು ಸಕಾರಾತ್ಮಕವಾಗಿರದಿದ್ದಲ್ಲಿ ವರದಿಯನ್ನು ಪುನರ್ ಪರಿಶೀಲಿಸಿ
ರೈತರ ಹಾಗೂ ಜನತೆಯ ಹಿತದೃಷ್ಟಿಯಿಂದ ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸುಗೂರು ನೂತನ ರೈಲು ಮಾರ್ಗದ ಯೋಜನೆಯನ್ನು ಆರಂಭಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷರಾದ ಕುಂಟನಲ್ ಮಲ್ಲಿಕಾರ್ಜುನ ಸ್ವಾಮಿ ಮಹೇಶ್ವರ ಸ್ವಾಮಿ, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜಪ್ಪ, ಬಿಈ ದೊಡ್ಡಯ್ಯ, ಯುಗಾರಾಜ, ಸಾಹುಕಾರ್ ಕಿರಣ್ ಕುಮಾರ್, ಜೈನ್ ನಟರಾಜ, ಶ್ರೀರಾಮ, ಭಾಷಾ ,ಶಂಭುಲಿಂಗಯ್ಯ, ಲಿಂಗನ ಗೌಡ, ಮತ್ತು ಸಿರುಗುಪ್ಪದ ಹಿರಿಯ ಮುಖಂಡರು ಭಾಗವಹಿಸಿದ್ದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ