

12th August 2025

ಬಳ್ಳಾರಿ ಆ 12. ಬೀದರ್ ನಿಂದ ಚಾಮರಾಜನಗರದವರೆಗೆ ಅಖಂಡ ಕರ್ನಾಟಕದ 31 ಜಿಲ್ಲೆಗಳ ಮತ್ತು ಕಲ್ಯಾಣ ಕರ್ನಾಟಕದ 49 ತಾಲೂಕುಗಳಲ್ಲಿ ಪ್ರೇರಣಾ ಚೈತ್ರಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಅನಾಥ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಲು ಹಗಲಿರುಳು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೂರಾರು ಮಕ್ಕಳಿಗೆ ತಮ್ಮ ನಿವೃತ್ತಿಯ ನಂತರವೂ ತಮ್ಮ ಕೈಲಾದಷ್ಟು ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಶಿಕ್ಷಕ ಗಾದಿಲಿಂಗಪ್ಪನವರು.
ಹೌದು ನಿವೃತ್ತ ಶಿಕ್ಷಕ ಗಾದಿಲಿಂಗಪ್ಪನವರು ತಮ್ಮ ನಿವೃತ್ತಿಯ ಅವದಿಯನ್ನುಅಲ್ಲಿ ಇಲ್ಲಿ ಕಾಲಹರಣ ಮಾಡದೇ ಹತ್ತನೇ ತರಗತಿಯಲ್ಲಿ ಹೇಗೆ ಹೆಚ್ಚು ಅಂಕ ಗಳಿಸಬೇಕು ಎಂಬುದು ಸೇರಿದಂತೆ ಶಿಕ್ಷಣದಲ್ಲಿ ಹೇಗೆ ಪ್ರಗತಿ ಕಾಣಬೇಕು ಎಂಬ ವಿಷಯವನ್ನು ಇಟ್ಟುಕೊಂಡು ಬೀದರ್ ನಿಂದ ಚಾಮರಾಜನಗರದವರೆಗೆ ಕನ್ನಡ ಶಾಲೆಯಲ್ಲಿ ಪಾಠ ಮಾಡುತ್ತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೆ ಒಂದು ಸರ್ಕಾರ ಕನ್ನಡ ಶಾಲೆಯಲ್ಲಿ ಒಂದನ್ನು ಆಯ್ದುಕೊಂಡು ಅಲ್ಲಿನ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣದ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದಾರೆ. ಹಾಗೆ ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕದ ಕಂದೀಲು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಮಕ್ಕಳಿಗೆ ಪಾಠ ಮಾಡುತ್ತಾ ತಮ್ಮ ನಿವೃತ್ತಿ ಮತ್ತು ಇಳಿ ವಯಸ್ಸನ್ನು ಸಮಾಜ ಸೇವೆಯನ್ನು ಮಾಡುವ ಮೂಲಕ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರ ಕೈಯಲ್ಲಿ ಕಲಿತ ಹಲವಾರು ಜನ ವಿದ್ಯಾರ್ಥಿಗಳು ವಿದೇಶಗಳಲ್ಲಿ ನೆಲಸಿ ಸುಖ ಜೀವನವನ್ನು ಕಂಡುಕೊಂಡಿದ್ದಾರೆ.
ಇವರ ಸೇವಾವದಿಯಲ್ಲಿ ಸಹ ತಮ್ಮ ಹುದ್ದೆಗೆ ನ್ಯಾಯ ಒದಗಿಸುತ್ತಾ ಶಾಲೆ ಮತ್ತು ಶಾಲಾ ಮಕ್ಕಳ ಶ್ರೇಯೋಭಿಲಾಷಿಯಾಗಿ ಕೆಲಸ ಮಾಡುತ್ತಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ಇಸಿ.ಒ ಆಗಿ ಕೆಲಸ ಮಾಡಿ ಸಾರ್ಥಕತೆಯ ಕೆಲಸ ಮಾಡಿರುತ್ತಾರೆ.
ಅಷ್ಟೆ ಅಲ್ಲದೆ ಪ್ರತಿವರ್ಷ ಅಕ್ಟೋಬರ್ ರಜೆಯ ದಿನಗಳಲ್ಲಿ ಹತ್ತಿಪ್ಪತ್ತು ಬಡ ಮತ್ತು ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ತಮ್ಮ ಮನೆಯಲ್ಲೇ ಊಟ ವಸತಿಯನ್ನು ನೀಡಿ ಅವರಿಗೆ ಪ್ರತ್ಯೇಕವಾದ ತರಗತಿಗಳನ್ನು ನಡೆಸಿಕೊಂಡು ಹೋಗುತ್ತಾ ಸಿ.ಇ.ಟಿ ಮತ್ತು ಕೆ.ಇ.ಎ ಪರೀಕ್ಷೆಯಲ್ಲಿ ಹೇಗೆ ಹೆಚ್ಚಿನ ಅಂಕಗಳಿಸಬೇಕೆಂದು ತಿಳಿಸಿಕೊಟ್ಟು ಅವರನ್ನು ಪರೀಕ್ಷೆಗಳಿಗೆ ತಯಾರು ಮಾಡುತ್ತಾರೆ. ಅಷ್ಟೆ ಅಲ್ಲದೆ ಅವರ ಊರು ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳ್ ಗ್ರಾಮದಲ್ಲಿ ಸಾವಿರಾರು ಗಿಡ ಮರಗಳನ್ನು ನೆಟ್ಟು ಪೋಷಿಸಿ ಬೆಳೆಸುವ ಮೂಲಕ ಸಮಾಜದಲ್ಲಿ ಪರಿಸರದ ಬಗ್ಗೆ ಸಹ ಜಾಗೃತಿಯನ್ನು ಮೂಡಿಸಿರುತ್ತಾರೆ.
ತಮ್ಮ ಪಿಂಚಣಿಯಿಂದ ಬರುವ ಹಣದಲ್ಲಿ ಅಲ್ಪ ಸ್ವಲ್ಪ ಹಣವನ್ನು ಹೀಗೆ ಸಮಾಜ ಸೇವೆಗೆ ವಿನಿಯೋಗಿಸುತ್ತಿರುವ ಇವರ ಈ ಸಮಾಜ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಡಾ.ರಾಧಕೃಷ್ಣ ಪ್ರಶಸ್ತಿ, ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ, ಸಮಾಜ ಸೇವೆಗೆ ಸಮಾಜ ಸೇವಾ ಸೇತು ಪ್ರಶಸ್ತಿ, ಕನಕ ಶ್ರೀ, ಕನ್ನಡ ಸಾಹಿತ್ಯ ಕಣ್ಮಣಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿ ಸನ್ಮಾನಿಸಲಾಗಿದೆ.
ಇಂತಹ ಅಪರೂಪದ ಸಮಾಜ ಸೇವಕ ಗಾದಿಲಿಂಗಪ್ಪ ಇವರ ಸೇವೆಯನ್ನು ಸರ್ಕಾರ ಮತ್ತು ಸಮಾಜ ಗುರುತಿಸಬೇಕಿದೆ. ಮತ್ತು ಇವರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಬೇಕಿದೆ. ತಮ್ಮ ಮಗನ ಅನಾರೋಗ್ಯದ ದಿನಗಳಲ್ಲೂ ಸಹ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದನ್ನು ಮಾದ್ಯಮ ವರದಿಗಾರರಿಗೆ ತಿಳಿಸುತ್ತಾ ಭಾವುಕರಾದ ಸಂದರ್ಭದ ಪತ್ರಿಕಾಗೋಷ್ಠಿಯಲ್ಲಿ ನಡೆಯಿತು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ