

12th August 2025

ಬಳ್ಳಾರಿ ಆ 12. ದಿನಾಂಕ 12.07.2025 ರಂದು ಕರ್ನಾಟ ರಾಜ್ಯ ಏಡ್ಸ್ ಪ್ರಾವಿಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಮೇಧಾ ಪದವಿ ಕಾಲೇಜು ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮೇಧಾ ಕಾಲೇಜಿನ ಪ್ರಾಂಶುಪಾಲರಾದ ರಾಮ ಕಿರಣ್ ರವರು ಹಾಗೂ ಏಆರ್ಟಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ದಿನೇಶ್ ಗುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿ ಗಿರೀಶ್ ಜಿಲ್ಲಾ ಮೇಲ್ವಿಚಾರಕರು ಪ್ರಸ್ತಾವಿಕವಾಗಿ ಮಾತನಾಡಿ ಶೇಖಡ 77 ರಷ್ಟು ಅನೌಪಚಾರಿಕವಾಗಿ ಉದ್ಯೋಗದಲ್ಲಿರುವ ಯುವಕರಿದ್ದಾರೆ. ಶೇಕಡ 20ರಷ್ಟು ಪ್ರತಿ ವರ್ಷ ಮಾನಸಿಕ ಆರೋಗ್ಯ ಸಮಸ್ಯೆ ಯುವಕರು ಎದುರಿಸುತ್ತಿದ್ದಾರೆ. 152 ಮಿಲಿಯನ್ ಬಡತನ ರೇಖೆಗಿಂತ ಕೆಳಗಿರುವ ಮನೆಗಳಲ್ಲಿ ವಾಸಿಸುವ ಯುವ ಕಾರ್ಮಿಕರಿದ್ದಾರೆ. ಯಾವುದೇ ದೇಶ ಪ್ರಗತಿ ಹೊಂದಬೇಕಾದರೆ ಆ ದೇಶದ ಯುವಕರ ಕೊಡುಗೆ ಅತ್ಯಂತ ಮಹತ್ವ, ಹಾಗಾಗಿ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯ ಕಾರ್ಯಕ್ಕೆ ಅವರ ಕೊಡುಗೆ ಮಹತ್ವ ಸಾರಲು ಪ್ರತಿವರ್ಷ ಆಗಸ್ಟ್ 12ರಂದು ಅಂತರಾಷ್ಟ್ರೀಯ ದಿನಾಚರಣೆ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ನಂತರ ಮೇಧ ಕಾಲೇಜಿನ ಪ್ರಾಂಶುಪಾಲರು ಮಾತನಾಡಿ ಯುವಕರು ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು, ಯುವಕರೆ ದೇಶದ ಸಂಪತ್ತು ಆಗಿರುವುದರಿಂದ ಎಚ್ಐವಿ ಎಂತಹ ಕಾಯಿಲೆಗಳಿಂದ ದೂರವಿರಲು ಮನವಿ ಮಾಡಿದರು .
ನಂತರ ಡಾಕ್ಟರ್ ದಿನೇಶ್ ಗುಡಿ ಮಾತನಾಡಿ ಇತ್ತೀಚಿಗೆ ಯುವಕರು ಮೊಬೈಲ್ಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದು ಇದರಿಂದ ಸರಿಯಾಗಿ ನಿದ್ರೆ ಮಾಡುವುದು ಆಗುವುದಿಲ್ಲ ಜ್ಞಾಪಕ ಶಕ್ತಿ ಕಡಿಮೆ ಯಾಗುತ್ತದೆ ಮೊಬೈಲನ್ನು ಶಿಕ್ಷಣಕ್ಕೆ ಉಪಯೋಗಿಸಿದರೆ ಒಳ್ಳೆಯದು ಎಂದು ತಿಳಿಸಿದರು.
ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಯಂಸೇವಾ ಸಂಸ್ಥೆಯವರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಸಿಟಿಸಿ ಸಿಬ್ಬಂದಿಗಳಿಗೆ ಗಾದಲಿಂಗ ಕಾರ್ಯಕ್ರಮ ಸಂಯೋಜಕರು ವಿಮುಕ್ತಿ ಏಡ್ಸ್ ತಡೆಗಟ್ಟುವ ತಡೆಗಟ್ಟುವ ಮಹಿಳಾ ಸಂಘ ಇವರು ವಂದನಾರ್ಪಣೆ ಮಾಡುವುದರ ಮುಖಾಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ