
14th August 2025
ಬಳ್ಳಾರಿ.ಆ.13 : ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರ ಶ್ರೀ ಮಂಜುನಾಥ ಸನ್ನಿಧಿಯ ಧರ್ಮಸ್ಥಳದ ವಿರುದ್ಧ ಯೂಟ್ಯೂಬರ್ ಮತ್ತು ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ಮತ್ತು ಸಮೀರ್ ಎಂ.ಡಿ ಇವರುಗಳು ನಿರಂತರವಾಗಿ ಯೂಟ್ಯೂಬ್ ಚಾನೆಲ್ಗಳ ಮೂಲಕ ಅಪಪ್ರಚಾರ ಮಾಡುತ್ತಾ ದೇವಸ್ಥಾನದ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಬಳ್ಳಾರಿ ನಗರದಲ್ಲಿ ಸಾವಿರಾರು ಭಕ್ತರುಗಳು ಭಾರಿ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಡಾ.ರಾಜ್ ಕುಮಾರ್ ರಸ್ತೆಯ ನಾರಾಯಣರಾವ್ ಪಾರ್ಕ್ ನಿಂದ ಪ್ರತಿಭಟನೆಯನ್ನು ನಡೆಸಿಕೊಂಡು ಬಂದು ಭಕ್ತ ಸಮೂಹ ರಾಯಲ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಕ್ಷೇತ್ರ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಧರ್ಮಸ್ಥಳವು ಹಿಂದು ದೇವಾಲಯಗಳಲ್ಲಿ ಒಂದು ಅತ್ಯಂತ ಪ್ರಮುಖವಾದ ದೇವಸ್ಥಾನವಾಗಿದೆ, ಮತ್ತು ರಾಜ್ಯ ಮತ್ತು ಹೊರರಾಜ್ಯದ ಸೇರಿ ದೇಶಾಧ್ಯಾಂತ ಕೋಟ್ಯಾಂತರ ಭಕ್ತರಿದ್ದಾರೆ. ಇಂತಹ ಪವಿತ್ರ ಕ್ಷೇತ್ರದ ಬಗ್ಗೆ ಯಾವುದೇ ದಾಖಲೆಗಳಿಲ್ಲದೆ ಸರಣಿ ಹತ್ಯೆಗಳನ್ನು ನಡೆಸಲಾಗಿದೆ ಎಂಬಂತ ಸುಳ್ಳು ಸುದ್ದಿಗಳನ್ನು ಹರಡಿಸಿ ಕ್ಷೇತ್ರದ ಬಗ್ಗೆ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ, ಒಂದು ವೇಳೆ ಅಂತಹ ಘಟನೆಗಳು ನಡೆದಿದೆ ಎಂದಾದಲ್ಲಿ ಕಾನೂನಿ ಪ್ರಕಾರ ತನಿಖೆಯನ್ನು ನಡೆಸಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿ ಅದು ಬಿಟ್ಟು ಸುಖಾ ಸುಮ್ಮನೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಾ ಧರ್ಮಸ್ಥಳದ ವಿರುದ್ಧ ಕಳೆದ 13 ವರ್ಷಗಳಿಂದ ನಿರಂತರವಾಗಿ ಷಡ್ಯಂತ್ರ ರೂಪಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತು ಸಮೀರ್ ಎಂ.ಡಿ ಇವರುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಗ್ರಹಿಸಿದರು.
ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮಾತನಾಡಿ, ಅನಾಮಿಕ ವ್ಯಕ್ತಿಯೋರ್ವನು ನೀಡಿದ ದೂರಿನ ಮೇರೆಗೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ನಡೆಸುತ್ತಿದೆ ಮತ್ತು ಅವನು ತೋರಿಸುತ್ತಿರುವ ಸಮಾದಿಗಳನ್ನು ಅಗೆಯಲಾಗುತ್ತಿದೆ, ಆ ವರದಿ ಬರುವ ಮುಂಚೆ ಇವರುಗಳು ಪ್ರಚೋಧನಾಕಾರಿ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದ ಧರ್ಮಕರ್ತರಾದ ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುತ್ತಿದ್ದಾರೆ ಇವರ ಮೇಲೆ ಕೇಸ್ ದಾಖಲಿಸಿ ಇವರ ಆದಾಯದ ಮೂಲಗ ಬಗ್ಗೆ ತನಿಖೆಯನ್ನು ನಡೆಸಬೇಕು, ಮತ್ತು ಕ್ಷೇತ್ರದ ವಿರುದ್ಧ ಈ ರೀತಿಯ ಸುಳ್ಳು ಸುದ್ದಿಗಳನ್ನು ಸಮಾಜಿಕ ಜಾಲತಾಣದಲ್ಲಿ ಹರಡುತ್ತಿರುವವರ ವಿರುದ್ಧ ತಡೆನೀಡಿ ಸೂಕ್ತ ಕ್ರಮಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದುರು.
ಈ ಪ್ರತಿಭಟನೆಯಲ್ಲಿ ಅನಿಲ್ ಕುಮಾರ್ ಮೋಕಾ , ಅಲ್ಲಂ ಪ್ರಶಾಂತ್, ವೀರಶೇಖರ್ ರೆಡ್ಡಿ, ಇಬ್ರಾಹೀಮ್ ಬಾಬು, ಗುಡಿಗಂಟಿ ಹನುಮಂತಪ್ಪ, ಮೊತ್ಕರ್ ಶ್ರೀನಿವಾಸ್, ರೂಪಶ್ರೀ, ಪುಷ್ಪಾ, ವಿರೂಪಾಕ್ಷ, ವಿ ಮಹೇಶ್, ರೈತ ಸಂಘದ ಸಿಂಧಿಗೇರಿ ಗೋವಿಂದಪ್ಪ, ಸಂಗನಕಲ್ಲು ಕೃಷ್ಣ, ವಿ.ಎಚ್.ಪಿ ಪದಾಧಿಕಾರಿಗಳು, ಶ್ರೀರಾಮಸೇನೆ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನ ಶ್ರೀ ಕ್ಷೇತ್ರದ ಭಕ್ತರು
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ ಅಂಗವಾಗಿ ಮೊದಲನೇ ದಿನ ಪುರಾಣದ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶ್ರೀಗಳವರಿಂದ ಚಾಲನೆ.
ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವ.