

14th August 2025

ಕೊಪ್ಪಳ
ಇತ್ತೀಚಿಗೆ ಕೊಪ್ಪಳ ನಗರದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ಧಪ್ಪ ನಾಯಕ ಭೀಕರ ಕೊಲೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾಗಿರುವ ಯುವಕ ಗವಿಸಿದ್ಧಪ್ಪನಿಂದ ನನ್ನ ಮಗಳ ಮೇಲೆ ನಿರಂತರ ಅತ್ಯಾಚಾರವಾಗಿದೆ. ಮೃತ ಯುವಕ ಗವಿಸಿದ್ಧಪ್ಪ ಮಗಳಿಗೆ ವಿಡಿಯೋ ಇದೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿರುವ ಅಪ್ರಾಪ್ತ ಬಾಲಕಿ ತಾಯಿ ತನ್ನ ಮಗಳಿಗೆ ಮತ್ತು ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ್ದಾಳೆ.
ಗುರುವಾರ ತಾಯಿ ಹಸೀನಾ ನೇರವಾಗಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಅಪ್ರಾಪ್ತ ಬಾಲಕಿ ತಾಯಿ ಅಂಬೇಡ್ಕರ್ ಮತ್ತು ಗಾಂಧೀಜಿ ಫೋಟೋ ಇಟ್ಟುಕೊಂಡು ಪೋಸ್ಟರ್ ಹಿಡಿದು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೆಲದಿನಗಳ ಹಿಂದೆ ಕೊಲೆಯಾದ ನಗರದಲ್ಲಿ ಗವಿಸಿದ್ದಪ್ಪ ನಾಯಕ್ ಭೀಕರ ಕೊಲೆಯಾಗಿರುವ ಘಟನೆಯಲ್ಲಿ ಈಗಾಗಲೇ ಪೊಲೀಸರು ನಾಲ್ಕು ಜನ ಮುಸ್ಲಿಂ ಯುವಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಕೊಲೆ ಖಂಡಿಸಿ ಮತ್ತು ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಮಹಾಸಭಾದಿಂದ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಎಲ್ಲಾ ಪಕ್ಷದ ನಾಯಕರು ಬೆಂಬಲಿಸಿದ್ದರು. ಕಳೆದ ದಿನ ಬಿಜೆಪಿ ರಾಜ್ಯಾಧ್ಯಕ್ಷರ ನಿಯೋಗ ರಾಜ್ಯಾಪಾಲರಿಗೆ ದೂರು ನೀಡಿ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಕೊಲೆ ಮುಸ್ಲಿಂ ಯುವತಿಯನ್ನು ಪ್ರೀತಿಸಿರುವ ಕಾರಣಕ್ಕೆ ಗವಿಸಿದ್ದಪ್ಪನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಎಸ್ಪಿ ಪ್ರಕರಣದ ಮಾಹಿತಿ ನೀಡಿದ್ದರು.
ಘಟನೆ ರಾಜ್ಯಾದ್ಯಂತ ನಿರಂತರ ಸುದ್ದಿಯಾಗುತ್ತಿದ್ದು, ಈಗ ಕೊಲೆಯಾದ ಯುವಕನನ್ನು ಪ್ರೀತಿಸಿದ್ದ ಯುವತಿಯ ತಾಯಿ ಹಸೀನಾ ದಿಡೀರ್ ಜಿಲ್ಲಾಡಳಿತ ಭವನಕ್ಕೆ ಬಂದು ಪ್ರತಿಭಟನೆ ನಡೆಸಿದ್ದು, ನನಗೆ ಮೂರು ಜನ ಹೆಣ್ಣು ಮಕ್ಕಳು ನನಗೆ ಗಂಡ ತೀರಿಕೊಂಡಿದ್ದು ನನಗೆ ಹಿಂದೆ ಮಂದೆ ಯಾರೂ ಇಲ್ಲದೆ ಇರುವ ಕಾರಣ ನನ್ನ ಮಕ್ಕಳನ್ನು ನಾನೆ ದುಡಿದು ಸಾಕಬೇಕು. ನನ್ನ ಕೈಯಿಂದ ಆದಷ್ಟು ಮಟ್ಟಿಗೆ ನಾನು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ. ೧೬ ವರ್ಷದ ನನ್ನ ಮಗಳು ಕಂಪ್ಯೂಟರ್ ತರಬೇತಿಗೆ ಹೋಗುತ್ತಿರುವಾಗ ಕೊಲೆಯಾದ ಗವಿಸಿದ್ದಪ್ಪ ತನ್ನನ್ನು ಪ್ರೀತಿ ಮಾಡು ಎಂದು ಹಿಂದೆ ಬಿದ್ದು ನನ್ನ ಮಗಳನ್ನು ಪುಸಲಾಯಿಸಿ ನನ್ನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ನಾನು ತಿಳಿ ಹೇಳಲು ಹೋದಾಗ ಬೆದರಿಕೆ ಹಾಕಿದ್ದ. ಯುವಕನ ತಂದೆ, ತಾಯಿ ಮತ್ತು ಅಕ್ಕನಿಗೆ ಈ ವಿಷಯ ತಿಳಿಸಿದರೆ ಅವರು ನಿನ್ನ ಮಗಳೆ ನಮ್ಮ ಹುಡುಗನ ಹತ್ತಿರ ಬರುತ್ತಾಳೆ ಹಾಗಾಗಿ ನೀನು ಸುಮ್ಮನೆ ಇದ್ದರೆ ಸರಿ ಇಲ್ಲಾ ಅಂದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಕಾರಣ ಮತ್ತು ಮರ್ಯಾದೆಗೆ ಅಂಜಿ ಹಾಗೂ ನಮಗೆ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ ಎಲ್ಲವನ್ನೂ ನಾವು ಸಹಿಸಿಕೊಂಡು ಮೌನವಾಗಿದ್ದೇವು. ಮೃತ ಗವಿಸಿದ್ದಪ್ಪ ನನ್ನ ಮಗಳಿಗೆ ನಿನ್ನ ವಿಡಿಯೋ ಇದೇ ಎಂದು ಬ್ಲಾಕ್ ಮೇಲ್ ಮಾಡುತ್ತಾ ನನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ. ಆದರೆ ಈಗ ಹೊರ ಪ್ರಪಂಚದಲ್ಲಿ ಪ್ರೀತಿ, ಪ್ರೇಮ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಇಷ್ಟೇಲ್ಲ ಘಟನೆ ನಡೆದ ನಂತರ ನಾನು ನ್ಯಾಯಕ್ಕಾಗಿ ಈಗ ಜಿಲ್ಲಾಧಿಕಾರಿಗಳ ಮುಂದೆ ಬಂದಿದ್ದೇನೆ. ಈ ಅತ್ಯಾಚಾರವೆಸಗಿ ಯುವಕ ಈಗ ಕೊಲೆಯಾಗಿದ್ದು, ಇದಕ್ಕೆ ಪ್ರಚೋದಿಸಿದ ವ್ಯಕ್ತಿಗಳಿಗೂ ಕಠಿಣ ಶಿಕ್ಷೆ ನೀಡಿ ನನ್ನ ಮಗಳು ಮತ್ತು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ತಾಯಿ ಹಸೀನಾ ಇನ್ನೊಬ್ಬ ಮಗಳು ಮನವಿ ಮಾಡಿದ್ದಾರೆ.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ