
18th August 2025
ಗಂಗಾವತಿ.
ಒಳ ಮೀಸಲಾತಿ ಹೊರಾಟಕ್ಕೆ ಕುರಿತಂತೆ ತಮಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಲ್ಲ ಎಂದು ಸ್ವತಃ ಬಿಜೆಪಿ ಎಸ್.ಸಿ ಮೋರ್ಚಾ ಪದಾಧಿಕಾರುಗಳಿಂದ ಅಸಮಾಧಾನ ಸ್ಪೋಟಗೊಂಡಿದೆ.
ಈ ಕುರಿತು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ಈಗ ಬಹಿರಂಗಾಲವಾಗಿಲುತ್ತಿದೆ. ನಾಳೆ ಒಳ ಮೀಸಲಾತಿಗಾಗಿ ಮಾದಿಗ ಸಮಾಜ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜನಾರ್ಧನರೆಡ್ಡಿ ಮತ್ತು ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರುಗಳು ಮಾದಿಗ ಸಮಾಜಕ್ಕೆ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ. ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಉಪಯೋಗಕ್ಕೆ ಸೀಮಿತರಾಗಿದ್ದಾರೆ. ನಾಳೆ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಎರಡು ಸರ್ಕಾರಿ ಬಸ್ಸುಗಳು ಮತ್ತು 10 ಟ್ರ್ಯಾಕ್ಸ್ ಬೇಡಿಕೆ ಇಟ್ಟಿದ್ದು ಶಾಸಕರು ಮತ್ತು ಬಿಜೆಪಿಯ ನಗರ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರು ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದು ಬಿಜೆಪಿ ಎಸ್ ಸಿ ಮೋರ್ಚಾ ನಗರ ಅಧ್ಯಕ್ಷ ಎಚ್. ಬಸವರಾಜ್ ವಾಟ್ಸಪ್ ನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಮಾದಿಗ ಸಮುದಾಯದ ಯುವಕರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಮ್ಮ ಹೊರಾಟಕ್ಕೆ ಸ್ಪಂದಿಸದವರಿಗೆ ನಾವು ಚುನಾವಣೆಯಲ್ಲಿ ಬುದ್ದಿ ಕಲಿಸೋಣ ಎಂದು ಕಿಡಿ ಕಾರುತ್ತಿದ್ದಾರೆ.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ವಾರ್ಷಿಕ ಸಭೆ
ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ 5ನೇ ವರ್ಷದ ರಕ್ತದಾನ ಶಿಬಿರ