
28th August 2025
ಕೊಪ್ಪಳ
ನಗರದಲ್ಲಿ ಒಂದು ವಾರಗಳ ಕಾಲ ಆಯೋಜಿಸಿರುವ ಖಾದಿ ಉತ್ಸವ ಪ್ರದರ್ಶನ ಮಾರಾಟ ಮಳಿಗೆಗಗಳಿಗೆ ಮೂರು ದಿನದಲ್ಲಿ ಸುಮಾರು ಏಳು ಸಾವಿರ ಜನ ಭೇಟಿ ನೀಡಿದ್ದು ಒಟ್ಟು 21.84 ಲಕ್ಷಕ್ಕೂ ಅಧಿಕ ವಸ್ತುಗಳು ಮಾರಾಟವಾಗಿವೆ.
ಸರಕಾರದ ಖಾದಿ ಗ್ರಾಮೋದ್ಯಗ ಮತ್ತು ಗ್ರಾಮೀಣ ಕೈಗಾರಿಕೆ ನಿಗಮದಿಂದ ಕಳೆದ ಆ.24 ರಂದು ನಗರದ ಶಾದಿ ಮಹಲ್ ನಲ್ಲಿ ಖಾದಿ ಉತ್ಸವ ಪ್ರಾರಂಭವಾಗಿದ್ದು, ಸೆ.2 ರವರೆಗೆ ನಡೆಯಲಿದೆ. ಉತ್ಸವಸಲದಲ್ಲಿ ಸುಮಾರು 50 ಕ್ಕು ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಜಿಲ್ಲೆಯ ಕುಕನೂರು, ಕುಷ್ಟಗಿ ಸೇರುದಂತೆ ರಾಜ್ಯದ ವಿವುಧ ಜಿಲ್ಲೆಗಳ ಖಾದಿ ಉತ್ಪಾದನಾ ಘಟಕಗಳು ತಾವುವತಯಾರಿಸುವ ಖಾದಿ ಬಟ್ಟೆಗಳಿಂದ ಮಾಡಿರುವ ಅಂಗಿ, ಪ್ಯಾಂಟ್, ಟವಲ್, ಸೀರೆ, ಬೆಡ್ ಸೀಟ್ ಸೇರಿದಂತೆ ಪುರಷ ಮತ್ತು ಮಹಿಳೆಯರ ಉಡುಪುಗಳು, ಬಗೆ ಬಗೆಯ ತಿನಿಸುಗಳು, ಅಗರ ಬತ್ತಿ, ಚಪ್ಪಲ್, ಶೂ ಸೇರಿದಂತೆ ಮನೆಗಳಿಗೆ ಉಪಯುಕ್ತವಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಗಣಪತಿ ಹಬ್ಬದ ಸಂಭ್ರಮದಲ್ಲೂ ಜನರು ಉತ್ಸವಕ್ಕೆ ಬಂದು ಭೇಟಿ ನೀಡುತ್ತಿದ್ದಾರೆ. ಪ್ರಾರಂಭದ ದಿನವಾದ ಆ.24 ರಂದು 2500 ಜನ ಭೇಟಿ ನೀಡಿದ್ದು, ರೂ. 7, 13,819.00, ಎರಡನೇ ದಿನವಾದ ಆ.25 ರಂದು 2100 ಜನ ಭೇಟಿ ನೀಡಿದ್ದು, ರೂ. 6,61,811.00 ಮತ್ತು ಆ.26 ರಂದು 2210 ಜನ ಪ್ರದರ್ಶನ ವೀಕ್ಷಣೆ ಮಾಡಿದ್ದು ರೂ. 8,09,104 ಸೇರಿ ಮೂರು ದಿನದಲ್ಲಿ ಒಟ್ಟು ರೂ. 21,84,734 ಗಳಷ್ಟು ವಸ್ತುಗಳು ಮಾರಾಟವಾಗಿವೆ ಎಂದು ಮಾಹಿತಿ ನೀಡಿರುವ ಜಿಲ್ಲಾ ಖಾದಿ ಗ್ರಾಮೋಧ್ಯಗ ನಿಗಮದ ಅಭಿವೃದ್ದಿ ಅಧಿಕಾರಿ ವಿರೇಶ ಅವರು ಮಾಹಿತಿ ನೀಡಿದ್ದಾರೆ.
ಬಾಕ್ಸ್
ಆ.2 ರವರೆಗೆ ಖಾದಿ ಉತ್ಸವ ನಡೆಯಲಿದೆ.
ನಗರದಲ್ಲಿ ರಾಜ್ಯಮಟ್ಟದ ಖಾದಿ ಉತ್ಸವ ಹಮ್ಮಿಕೊಂಡಿದ್ದು, ಕಳೆದ ಆ.24 ರಂದು ಪ್ರಾರಂಭವಾಗಿದ್ದು, ಸೆ.2 ರವರೆಗೆ ನಡೆಯಲಿದೆ. ನಿರಂತರ ಮಳೆ ಬರುತ್ತಿರುವುದರಿಂದ ಮತ್ತು ಗಣೇಶ ಹಬ್ಬದಿಂದಾಗಿ ಜನರ ಭೇಟಿ ಕಡಿಮೆ ಇದೆ. ಇಂದಿನಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಖಾದಿ ಬಟ್ಟೆ ಸೇರಿ ವಿವಿಧ ರೀತಿಯ ಗೃಹ ಉಪಯೋಗಿ ಸ್ವದೇಶಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಜನರು ಭೇಟಿ ನೀಡಿ ಖಾದಿ ವಸ್ತುಗಳಿಗೆ ಪ್ರೋತ್ಸಾಹ ನೀಡಬೇಕು.
ವಿರೇಶ, ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು, ಖಾದಿ ಗ್ರಾಮೋದ್ಯಗ ಇಲಾಖೆ,ಕೊಪ್ಪಳ.
ಬಾಕ್ಸ್
ಜನರ ಭೇಟಿ ಕಡಿಮೆ ಇದೆ. ಹೆಚ್ಚಿನ ಪ್ರಚಾರವಾಗಬೇಕು
ನಗರದಲ್ಲಿ ರಾಜ್ಯಮಟ್ಟದ ಖಾದಿ ಉತ್ಸವ ನಡೆಯುತ್ತಿದೆ. ಪ್ರಾರಂಭವಾಗಿ ಮೂರು ದಿನಗಳಾಗಿದ್ದು, ನಿರೀಕ್ಷೆಯಷ್ಟು ವ್ಯಾಪಾರವಾಗಿಲ್ಕ. ಮಳೆ ಮತ್ತು ಹಬ್ಬದ ಕಾರಣವಿರಬಹುದು. ಜನರು ಬರುವಂತೆ ಹೆಚ್ಚಿನ ಪ್ರಚಾರವಾಗಬೇಕು.
ಉತ್ಸವದ ಖಾದಿ ಮಳಿಗೆಯ ವ್ಯಾಪಾರಸ್ಥರು.
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ