
1st September 2025
ಗಂಗಾವತಿ.
ಕಳೆದ ಆ.26 ರಂದು ಗಂಗಾವತಿ ನಗರದಲ್ಲಿ ನಡೆದ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಮರೆಮಾಚಿದ್ದ ರೈಸ್ ಮಿಲ್ ಮಾಲೀಕ ಉಮೇಶ ಸಿಂಗನಾಳ ಮತ್ತು ಎಪ್ ಸಿ ಐ ಗೊದಾಮು ಸಹಾಕ ಮಹ್ಮದ್ ಜುಬೇರ್ ಭರಣಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಠಾಣೆಯಲ್ಲಿ ಕೊನೆಗೂ ಲಿಖಿತ ದೂರು ನೀಡಲಾಗಿದೆ.
ಅಕ್ಕಿ ಅಕ್ರಮ ದಂಧೆಯಲ್ಲಿ ರೈಸ್ ಮಿಲ್ ಹೆಸರು ಮಾತ್ರ ನಮೂದಿಸಿ ಮಾಲೀಕನ ಹೆಸರು ಕೈಬಿಟ್ಟು ದೂರು ದಾಖಲಿಸಿದ್ದ ಗೊಲ್ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿಗಳು ಮಾಲೀಕನ ಹೆಸರು ಸಮೇತ ದೂರು ನೀಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಗಂಗಾವತಿ ಆಹಾರ ನಾಗರಿಕ ಸರಬರಾಜು ಇಲಾಕೆಯ ಶಿರಸ್ತೇದಾರ ಸುಹಾಸ್ ಏರಿಸೀಮೆ ಅವರು ಕಳೆದ ದಿನ.ಆ.31 ರಂದು ಹೆಸರು ಸಮೇತ ಮತ್ತೊಂದು ದೂರು ಸಲ್ಲಿಸಿದ್ದಾರೆ. ಕಳದ ಆ.26 ರಂದು ನೀಡಿದ್ದ ದೂರಿನನ್ವಯ ಶಿರಸ್ತೇದಾರ ಸುಹಾಸ್ ನಗರಠಾಣೆ ಲಿಖಿತ ದೂರು ಸಲ್ಲಿಸಿದ್ದು, ಸದರಿ ಪ್ರಕರಣದಲ್ಲಿ ಪ್ರಥಮ ಹಂತವಾಗಿ ರೈಸ್ ಮಿಲ್ ಹೆಸರು ಮಾತ್ರ ನಮೂದು ಮಾಡಲಾಗಿತ್ತು. ಪ್ರಕರಣವನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಅಕ್ರಮದಲ್ಲಿ ಗೌರಿಶಂಕರ ಶ್ರೀ ಉಮಾಶಂಕರ ಆಗ್ರೋ ಪುಡ್ ಇದ್ದು ಇದರ ಮಾಲೀಕ ಉಮೇಶ ಸಿಂಗನಾಳ ಇದ್ದು, ಅವರ ವಿರುದ್ದ ಮತ್ತು ಗೊದಾಮು ಸಹಾಯಕ ಮಹ್ಮದ್ ಜುಬೇರ್ ಭರಣಿ ಅವರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆಯೋ ಕಾದು ನೋಡಬೇಕಿದೆ.
undefined
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ವಾರ್ಷಿಕ ಸಭೆ
ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ 5ನೇ ವರ್ಷದ ರಕ್ತದಾನ ಶಿಬಿರ