
10th September 2025
ಗಂಗಾವತಿ.
ನಿಗದಿತ ಶುಲ್ಕ ಪಾವತಿಸದೇ ವಿಳಂಬ ಮಾಡಿರುವ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿಯ ತಾಯಿ ಮಾಂಗಲ್ಯ ಸರ ಸೇರಿದಂತೆ ಮೈಮೇಲಿನ ಇನ್ನಿತರ ಬಂಗಾರದ ಒಡೆವೆಗಳನ್ನು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಡಾ|| ಸಿ.ಬಿ.ಚಿನಿವಾಲರ್ ಅವರು ಪಡೆದುಕೊಂಡಿದ್ದು, ಅವರ ಹಣದ ಹಪಹಪಿತನ ಬಹಿರಂಗವಾಗಿದ್ದು, ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಹೃದಯ ವಿದ್ರಾಹಕ ಘಟನೆ ನಡೆದಿದೆ.
ಶುಲ್ಕ ಪಾವತಿ ಮಾಡದ ಕಾರಣ ಮೈಮೇಲಿನ ತಾಳಿ ಮತ್ತಿತರ ಬಂಗಾರದ ಒಡೆವೆಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರ ಕೈಗೆ ಕೊಟ್ಟು ಬಂದಿರುವುದಾಗಿ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿರುವ ವಿದ್ಯಾರ್ಥಿನಿಯ ತಾಯಿ ಮತ್ತು ತಂದೆ ಆರೋಪಿಸಿ ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾರೆ. ತಮ್ಮ ಕಾಲೇಜಿನ ನಿಯಮಾನುಸಾರ ಬಾಕಿ ಶುಲ್ಕವನ್ನೇ ಪಡೆಯಬೇಕಿದ್ದ ವೈದ್ಯ ಪಾಲಕರಿಂದ ಬಂಗಾರದ ಒಡವೆಗಳನ್ನು ಪಡೆದುಕೊಂಡು ಈಗ ಇಕಟ್ಟಿನಲ್ಲಿ ಸಿಲುಕಿದ್ದಾರೆ.
ನಗರದ ರಾಯಚೂರು ರಸ್ತೆಯ ಮಾರ್ಗದಲ್ಲಿರುವ ಬಿಬಿಸಿ ಕಾಲೇಜು ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ಬಿಎಸ್ಸಿ ನರ್ಸಿಂಗ್ ಪ್ರಥಮ ಸೆಮೆಸ್ಟಿರ್ನಲ್ಲಿ ಮುಸಲಾಪುರ ಗ್ರಾಮದ ರೇಣುಕಮ್ಮ ಹನುಮಂತಪ್ಪ ವಾಲೇಕಾರ ಅವರ ಪುತ್ರಿ ಕಾವೇರಿ ತನಗೆ ಗದಗಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ದೊರೆತಿದ್ದರಿಂದ ಬಿಬಿಸಿ ಕಾಲೇಜಿಗೆ ಬಂದು ಪಾಲಕರೊಂದಿಗೆ ಮೂಲ ಪ್ರಮಾಣ ಪತ್ರಗಳನ್ನು ಹಿಂದಕ್ಕೆ ಕೊಡುವಂತೆ ಮನವಿ ಮಾಡಿದ್ದಾಳೆ. ಆದರೆ ಕಾಲೇಜಿನ ಚೇರಮನ್ ಡಾ|| ಸಿ.ಬಿ ಚಿನಿವಾಲರ್ ಅವರು ಕೇವಲ ರೂ.೧೦ ಸಾವಿರ ಮಾತ್ರ ಪಾವತಿಸಿದ್ದೀರಿ. ನಾಲ್ಕು ವರ್ಷದ ಶುಲ್ಕ ಪೂರ್ಣ ಪಾವತಿ ಮಾಡಿದರೆ ಮಾಡಿದರೆ ಮಾತ್ರ ನಿಮ್ಮ ಟಿಸಿ. ಮಾರ್ಕ್ಸ್ ಕಾರ್ಡು ಸೇರಿದಂತೆ ಪ್ರಮಾಣ ಪತ್ರ ನೀಡುತ್ತೇವೆ ಎಂದು ಪಾಲಕರಿಗೆ ತಿಳಿಸಿದ್ದಾರೆ. ತಮಗೆ ಸುಮಾರು ನಾಲ್ಕು ಲಕ್ಷ ಹಣ ಪಾವತಿಸಲು ಸಾಧ್ಯವಿಲ್ಲ. ನಮಗೆ ಪ್ರಮಾಣಪತ್ರಗಳನ್ನು ಕೊಡಿ ಎಂದು ಮನವಿ ಮಾಡಿದ್ದು, ಹಣ ಇಲ್ಲದ ಕಾರಣ ತಮ್ಮಲ್ಲಿರುವ ಒಡವೆಗಳನ್ನು ನೀಡುತ್ತೇವೆ ಎಂದು ಕೊರಿಕೊಂಡಿದ್ದಾರೆ. ಪಾಲಕರ ಮನವಿಗೆ ಹಿಂದೆ ಮುಂದೆ ನೋಡದ ಕಾಲೇಜ್ ಅಧ್ಯಕ್ಷ ಡಾ|| ಚಿನಿವಾಲ್ ವಿದ್ಯಾರ್ಥಿನಿಯ ತಾಯಿಯ ಕೊರಳಲ್ಲಿನ ಮಾಂಗಲ್ಯ, ಬೆಂಡವಾಲಿ ಮತ್ತಿತರ ಒಡೆವೆಗಳನ್ನು ಪಡೆದುಕೊಂಡಿದ್ದಾರೆ. ಪುತ್ರಿಯ ಶಿಕ್ಷಣದ ಶುಲ್ಕ ಪಾವತಿಸದ ಕಾರಣ ಪತಿ ಪಕ್ಕದಲ್ಲಿರುವಾಗಲೆ ಪತ್ನಿಯ ತಾಳಿಯನ್ನು ಚೇರಮನ್ ಬಿಚ್ಚಿಸಕೊಂಡಿದ್ದಾರೆ. ಮಗಳ ಶೈಕ್ಷಣಿಕ ಪ್ರಗತಿಗಾಗಿ ನಾವು ಹಣದ ಬದಲಾಗಿ ಮೇಮೇಲಿನ ಒಡವೆ ನೀಡಿದ್ದೇವೆ ಎಂದು ಪಾಲಕರು ತಿಳಿಸಿದ್ದಾರೆ.
ನಿಯಮಾನುಸಾರ ಶುಲ್ಕ ಪಾವತಿ ಮಾಡಿಕೊಳ್ಳುವುದು ಕಾಲೇಜ್ ಆಡಳಿತ ಮಂಡಳಿಯ ಜವಬ್ದಾರಿಯಾಗಿದೆ. ಆದರೆ ಪಾಲಕರು ಹಣದ ಬದಲಾಗಿ ಒಡವೆ ನೀಡಿದ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿ ಒಡವೆಗಳನ್ನು ಪಡೆದುಕೊಂಡಿರುವ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್ ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಆದರೆ ಶಿಕ್ಷಣ ಮುಂದುವರಿಸಬೇಕೆಂಬ ಕಾರಣಕ್ಕೆ ವಿದ್ಯಾರ್ಥಿನಿ ರೂ. ೧೦ ಸಾವಿರ ರು ಪಾವತಿಸಿ ಕಾಲೇಜು ಸೇರಿದ್ದರು. ಈಗ ಸರಕಾರಿ ಕಾಲೇಜು ದೊರೆತಿದ್ದರು ಸಹ ಪ್ರಮಾಣ ಪತ್ರ ಪಡೆಯವಾಗ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದಾರೆ. ಪತಿ ಪಕ್ಕದಲ್ಲಿಟ್ಟು ಕೊಂಡು ತಾಳಿ ಬಿಚ್ಚಿರುವದು ಸ್ತ್ರೀ ಕುಲಕ್ಕೆ ಅಪಮಾನವಾಗಿದೆ. ನಗರ ಸೇರಿದಂತೆ ರಾಜ್ಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿಸದಿದ್ದರೆ ದಂಡ, ಮನೆಗೆ ಕಳಿಸುವದು, ಬಿಸಿಲಲ್ಲಿ ನಿಲ್ಲಿಸುವದು, ಫಲಿತಾಂಶ ಪ್ರಕಟಿಸದೇ ಇರುವದು ಸಾಮಾನ್ಯ.
ಬಾಕ್ಸ್:
ಹಣ ಇಲ್ಲ ಎಂದಿದಕ್ಕೆ ಒಡವೆ ಪಡೆದುಕೊಂಡಿದ್ದಾರೆ
ಇಲ್ಲಿಯ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರಮನ್ ಅವರು ಮಗಳ ಶುಲ್ಕ ಪಾವತಿಸದ ಕಾರಣ ನನ್ನ ಕೊರಳಲ್ಲಿದ್ದ ತಾಳಿ ಸೇರಿದಂತೆ ಚಿನ್ನದ ಆಭರಣಗಳನ್ನು ಬಿಚ್ಚಿಸಿಕೊಂಡಿದ್ದಾರೆ. ನಿನಗೆ ಶುಲ್ಕ ಕಟ್ಟದು ಆಗದಿದ್ದರೆ ನಿನ್ನ ಕೊರಳಲ್ಲಿರುವ ತಾಳಿ ಬಿಟ್ಟಿಕೊಟ್ಟು ಹೋಗಿರಿ ಎಂದು ಡಾ. ಸಿ.ಬಿ ಚಿನಿವಾಲರ ಅವರು ತಮಗೆ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಕಾರಣಕ್ಕಾಗಿ ತಾಳಿ ಸೇರಿದಂತೆ ಚಿನ್ನದ ಆಭರಗಳನ್ನು ಬಿಚ್ಚಿಕೊಟ್ಟಿದ್ದೇನೆ.ಪತಿ ಇರುವಾಗಲೆ ತಾಳಿ ಬಿಚ್ಚಿಸಿಕೊಂಡಿರುವದು ಅಘಾತವಾಗಿದೆ.
ರೇಣುಕಮ್ಮ, ವಿದ್ಯಾರ್ಥಿನಿ ತಾಯಿ
ಬಾಕ್ಸ್:
ನಾವು ಕಾಲೇಜಿನ ಶುಲ್ಕ ಕಟ್ಟುವಂತೆ ಪದೇ ಪದೇ ಹೇಳುತ್ತಾ ಬಂದಿದ್ದೇನೆ. ಆದರೆ ಅವರು ಶುಲ್ಕ ಪಾವತಿಸಿಲ್ಲ. ಪ್ರಮಾಣ ಪತ್ರಗಳು ಬೇಕಾದರೆ ಶುಲ್ಕ ಪಾವತಿಸಿರಿ ಎಂದು ಸೂಚಿಸಿದ್ದೇನೆ. ನಾನು ಅವರಲ್ಲಿನ ಬಂಗಾರದ ಒಡೆವೆಗಳನ್ನು ಕೇಳಿಲ್ಲ. ತಾವೇ ತಕ್ಷಣ ಹಿಂದು ಮುಂದು ನೋಡದೇ ತಾಳಿ ಸೇರಿದಂತೆ ಚಿನ್ನದ ವಸ್ತುಗಳನ್ನು ಬಿಚ್ಚಿ ನಮ್ಮ ಮುಂದೆ ಇಟ್ಟು ಹೋಗಿ ಈಗ ಮಾಧ್ಯಮಗಳ ಮುಂದೆ ಸುಳ್ಳು ಆರೋಪ ಮಾಡಿದ್ದಾರೆ. ಪಾಲಕರು ಮಾಡುವ ಆರೋಪ ಸತ್ಯಕ್ಕೆ ದೂರಾಗಿದೆ. ಹಣವಿಲ್ಲದಿದ್ದರೂ ನಾವು ವಿದ್ಯಾರ್ಥಿನಿಗೆ ಪ್ರವೇಶ ನೀಡಿದ್ದೇವೆ. ಆದರೆ ನಮ್ಮ ಗಮನಕ್ಕೆ ತರದೇ ಏಕಾ ಏಕಿ ಪ್ರಮಾಣಪತ್ರಗಳನ್ನು ವಾಪಸ್ಸು ಕೊಡು ಎಂದರೆ ನಿಯಮಾನುಸಾರು ಕೊಡಬೇಕಾಗುತ್ತದೆ. ಇದಕ್ಕೆ ಅವರು ಸುಳ್ಳು ಆರೋಪ ಮಾಡಿದ್ದಾರೆ. ಇದರ ಹಿಂದೆ ಕೆಲವರ ಕುತಂತ್ರವಿದೆ.
ಡಾ|| ಸಿ.ಬಿ.ಚಿನಿವಾಲ್, ಚೇರಮನ್, ಬಿಬಿಸಿ ಕಾಲೇಜು ಆಫ್ ನರ್ಸಿಂಗ್, ಗಂಗಾವತಿ
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ