
10th September 2025
ಗಂಗಾವತಿ
ಇಂದಿನಿಂದ ಸೆ.20ರವರೆಗೆ ಹತ್ತು ದಿನಗಳ ಕಾಲ ನಗರದಲ್ಲಿ ಆಯೋಜಿಸಿರುವ ಹಾನಹಲ್ ಕುಮಾರ ಶಿವಯೋಗಿಗಳ 158 ನೇ ಜಯಂತೋತ್ವಕ್ಕೆ ಶ್ರೀಮಠದಿಂದ ಆಗಮಿಸಿದ್ದ ಸ್ವಾಮಿಗಳು ಗಂಗಾವತಿ ಪುರ ಪ್ರವೇಶ ಮಾಡಿದರು. ಸ್ವಾಮಿಗಳನ್ನು ಸ್ವಾಗತಿಸಿದ ಆಯೋಜಕರು ಮತ್ತು ಹಾಲಿ, ಮಾಜಿ ಶಾಸಕರು, ಮಾಜಿ ಸಂಸದರು ಗಣ್ಯರು ಜಲಾದ್ದೂರಿಯಾಗಿ ಜ್ಯೋತಿ ಮೆರವಣಿಗೆ ನಡೆಸಿದರು.
ಬುಧವಾರ ಸಂಜೆ ಕನಕಗಿರಿ ರಸ್ತೆಗೆ ಆಗಮಿಸುತ್ತಿಂದ ಸ್ವಾಮಿಗಳನ್ನು ಸ್ವಾಗತಿಸಿ ಚನ್ನಬಸವಸ್ವಾಮಿಗಳ ಮಠದವರೆಗೆ ಮೆರವಣಿಗೆ ಮೂಲಕ ಸ್ವಾಮಿಗಳನ್ನು ಕರೆದುಕೊಂಡು ಬಂದರು.
ಗಂಗಾವತಿಯ ಈರಣ್ಣ ದೇವಸ್ಥಾನದಿಂದ ಆರಂಭವಾದ ಉತ್ಸವ ಜ್ಯೋತಿಯ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಪುರಾಣ ಮಂಟಪಕ್ಕೆ ಆಗಮಿಸಿದರು.
ನಂತರ ಜಯಂತೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಂಡರಗಿ ಮಠದ ಅನ್ನದಾನ ಸ್ವಾಮಿಗಳು, ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅರಳಹಳ್ಳಿಯ ಗವಿಸಿದ್ದಯ್ಯ ತಾತನವರು, ಶಿವಕುಮಾರ ದೇವರು, ಚಂದ್ರಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಸಮಾಜದ ಮುಖಂಡರಾದ ತಿಪ್ಪೇರುದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್.ಗಿರಿಗೌಡ, ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್, ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಸಮಾಜದ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಸೋಮನಾಥ ಮಟ್ಟಣಶೆಟ್ಟಿ ಇದ್ದರು. ವೀರಶೈವ ಲಿಂಗಾಯತ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಮೆರವಣಿಗೆಯಲ್ಕಿ ಭಾಗವಹಿದ್ದರು.
ಹತ್ತು ದಿನಗಳ ಕಾಲ ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ನಡೆಯಲ್ಲಿದ್ದು, ನೂರಾರು ಸ್ವಾಮಿಗಳು ದುಶ್ಚಟ ಬಿಡುವಂತೆ ನಿತ್ಯ ಬೆಳೆಗ್ಗೆ ನಗರ ಮತ್ತು ಹಳ್ಳಿಗಳಲ್ಲಿ ಜೊಳಿಗೆ ಹಿಡಿದು ಪಾದಯಾತ್ರೆ ನಡೆಸಲಿದ್ದಾರೆ.
ಬಾಕ್ಸ್::::
ಕೆಲವರು ಹೆಸರಿಗೆ ಬಸವಣ್ಣನ ಅನುಯಾಯಿಗಳು
ಬಸವಣ್ಣ ಅವರು ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎಂದು ಹೇಳಿದ್ದಾರೆ. ಆದರೆ, ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕೆಲವರು ಕುಮಾರ ಶಿವಯೋಗಿಗಳ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ಬಸವಣ್ಣ ಅವರ ವಚನ ಹೆಚ್ಚು ಪ್ರಚಾರ ಮಾಡಿದ್ದು ಕುಮಾರೇಶ್ವರರು
ನಾಡೋಜ ಡಾ.ಅನ್ನದಾನ ಮಹಾ ಶಿವಯೋಗಿಗಳು, ಅನ್ನದಾನೇಶ್ವರ ಸಂಸ್ಥಾನಮಠ, ಮುಂಡರಗಿ
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ