
13th September 2025
ಹರೀಶ ಕುಲಕರ್ಣಿ
ಕೊಪ್ಪಳ.
ಮೌಲ್ಯಮಾಪನ(ಅರ್ದ ವಾರ್ಷಿಕ) ಪರೀಕ್ಷೆ ಮತ್ತು ದಸಾರ ಕ್ರೀಡಾಕೂಟಗಳನ್ನು ಒಂದೆ
ದಿನಾಂಕದಂದು ಆಯೋಜಿಸಿ ಶಾಲಾ ಶಿಕ್ಷಣ ಇಲಾಖೆಗಳ ಅಧಿಕಾರಿಗಳ ಎಡವಟ್ಟಿಗೆ ಪ್ರತ್ಯಕ್ಷ
ಸಾಕ್ಷಿಯಾಗಿದ್ದು, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳ ಅಧಿಕಾರಿಗಳ ಸಮನ್ವಯ
ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಮೂಡಿದೆ.
ಕೊಪ್ಪಳದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸರಕಾರದ ಆದೇಶನ್ವಯ ೨೦೨೫-೨೬ನೇ
ಸಾಲಿನ ೧ ರಿಂದ ೧೦ನೇ ತರಗತಿಯ ೧ನೇ ಸಂಕಲನ ಮೌಲ್ಯಮಾಪನ(ಅರ್ದ ವಾರ್ಷಿಕ)
ಪರೀಕ್ಷೆಯನ್ನು ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ
ಶಾಲೆಗಳಲ್ಲಿ ಸೆ.೧೨ ರಿಂದ ೧೯ರವರೆಗೆ ನಡೆಸಲು ಅಧಿಕೃತ ಆದೇಶ ಮಾಡಿದ್ದಾರೆ. ಇದೇ
ಸಂದರ್ಭದಲ್ಲಿ ಕೊಪ್ಪಳದ ಯುವ ಸಬಲೀಕರ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಗಳು
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ೨೦೨೫-೨೬ನೇ ಸಾಲಿನ ಕಲಬುರ್ಗಿ ವಿಭಾಗಮಟ್ಟದ
ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ರೀಡೆಗಳ
ಆಯೋಜನೆ ಕುರಿತು ಗುಂಪು ಮತ್ತು ವೈಯಕ್ತಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ
ಆಯ್ಕೆಯಾದ ಪ್ರಥಮ, ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು,
ಈ ವಿಭಾಗಮಟ್ಟದ ಕ್ರೀಡಾಕೂಗಳು ಸಹ ಸೆ.೧೫ರಂದು ವಿವಿಧ ಜಿಲ್ಲೆಗಳಲ್ಲಿ ನಡೆಸಲು ದಿನಾಂಕ
ನಿಗದಿಪಡಿಸಿದ್ದಾರೆ. ಪರೀಕ್ಷೆ ಮತ್ತು ಕ್ರೀಡಾಕೂಟಗಳು ಒಂದೇ ಸಮಯದಯಲ್ಲಿ
ಆಯೋಜಿಸಿರುವುದರಿಂದ ಮತ್ತು ಸೆ.೧೫ ರಂದು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ
ವಿದ್ಯಾರ್ಥಿಗಳಿಗೆ ಸೆ.೧೫ ರಂದು ನಡೆಯುವ ಪರೀಕ್ಷೆಗೆ ಹಾಜರಾಗಲು ಸಮಸ್ಯೆಯಾಗಿದೆ.
ಇಲಾಖೆಯ ಅಧಿಕಾರಿಗಳ ಯತಾವತ್ತ ಆದೇಶವನ್ನು ಆಯಾ ಶಾಲೆಗಳ ಶಿಕ್ಷಕರು ತಮ್ಮ
ವಿದ್ಯಾರ್ಥಿಗಳ ಪಾಲಕರಿಗೆ ರವಾನಿಸಿದ್ದಾರೆ. ಸೆ.೧೫ ರಂದು ಒಂದೇ ದಿನ ವಿಭಾಗಮಟ್ಟದ
ಕ್ರೀಡಾಕೂಟ ಮತ್ತು ಮೌಲ್ಯಮಾಪನ( ಅರ್ದವಾರ್ಷಿಕ) ಪರೀಕ್ಷೆಗಳು ನಡೆಯುತ್ತಿರುವುದರಿಂದ
ತಮ್ಮ ಕ್ರೀಡಾಶಕ್ತಿ ಇರುವ ಮತ್ತು ಈಗಾಗಲೇ ವಿವಿಧ ಕ್ರೀಡೆಯಲ್ಲಿ ಜಿಲ್ಲಾಮಟ್ಟದಲ್ಲಿ
ಜಯಗಳಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಯಾವುದು ಆಯ್ಕೆ ಮಾಡಿಕೊಳ್ಳಲು
ಸೂಚಿಸಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಾಗಿ ಮಕ್ಕಳಿಗೆ ಪರೀಕ್ಷೆ ಮುಖ್ಯವಾಗಿದ್ದು,
ಅದೇ ರೀತಿ ಕ್ರೀಡೆಯಲ್ಲೂ ಅವರ ಆಸಕ್ತಿ ಕ್ಷೀಣಿಸಬಾರದು ಎಂದು ಆತಂಕ
ವ್ಯಕ್ತಪಡಿಸಿದ್ದು, ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಈ ಕುರಿತು ಯೋಚನೆ
ಮಾಡಿ ಕ್ರೀಡೆಗಳನ್ನು ಪರೀಕ್ಷೆ ಇಲ್ಲದ ದಿನಾಂಕದಂದು ನಡೆಸಲಿ ಎಂದು ಅಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳಲ್ಲಿ ಸಮನ್ವಯ ಕೊರತೆ ಮೊದಲನಿಂದಲೂ
ಇದೆ. ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಇದಕ್ಕೆ ಪ್ರತ್ಯಕ್ಷ
ಸಾಕ್ಷಿಯಾಗಿದ್ದಾರೆ. ಈಗಲಾದರೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ರೀಡಾ
ಇಲಾಖೆಯ ಸಾಹಯಕ ನಿರ್ದೇಶಕರು ಒಮ್ಮತದ ನಿರ್ದಾರ ಕೈಗೊಂಡು ಈಗ ಸೃಷ್ಟಿಯಾಗಿರುವ
ಸಮಸ್ಯೆಗೆ ಮುಕ್ತಿ ಹಾಡಿ ಪರೀಕ್ಷೆ ಮತ್ತು ಕ್ರೀಡೆ ಎರಡರಲ್ಲೂ ಮಕ್ಕಳು
ಪಾಲ್ಗೊಳ್ಳುವಂತೆ ದಿನಾಂಕ ನಿಗದಿಪಡಿಸಿ ಅವಕಾಶ ಮಾಡಿಕೊಡಬೇಕೆಂಬುದು ಪತ್ರಿಕೆಯ
ಆಶಯವಾಗಿದೆ.
ಬಾಕ್ಸ್:
ಪರೀಕ್ಷೆ ದಿನ ಕ್ರೀಡಾಕೂಟ ಆಯೋಜನೆ ಗಮನಕ್ಕಿಲ್ಲ
ಸೆ.೧೨ ರಿಂದ ಸೆ.೧೯ರವರೆಗೆ ೨೦೨೫-೨೬ನೇ ಸಾಲಿ ಮೌಲ್ಯಮಾಪನ ಪರೀಕ್ಷೆಯನ್ನು ೧ರಿಂದ
೧೦ನೇ ತಗರತಿ ವಿದ್ಯಾರ್ಥಿಗಳಿಗೆ ನಿಗದಪಡಿಸಿದೆ. ಪರೀಕ್ಷೆ ನಡೆಯುವ ದಿನದಂದು
ಕ್ರೀಡಾಕೂಟ ಇರುವ ಮಾಹಿತಿ ನನ್ನ ಗಮನಕ್ಕೆ ಇಲ್ಲ. ಈ ಕುರಿತು ಮೇಲಾಧಿಕಾರಿಗಳ
ಗಮನಕ್ಕೆ ತಂದು ಕ್ರೀಡಾಕೂಟ ದಿನಾಂಕವನ್ನು ಬದಲಾಯಿಸುವ ಪ್ರಯತ್ನ ಮಾಡತ್ತೇನೆ.
ನಟೇಶ, ಹೆಚ್.ಬಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ.
ಬಾಕ್ಸ್:
ನನ್ನ ಮಗಳು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಯೋಗದಲ್ಲಿ ಆಯ್ಕೆಯಾಗಿದ್ದಾಳೆ.
ಬಿದರನಲ್ಲಿ ಸೆ.೧೫ ರಂದು ಯೋಗ ಮತ್ತು ವಾಲಿಬಾಲ್ ಕ್ರೀಡೆ ನಡೆಸಲಾಗುತ್ತಿದೆ. ಇದೇ
ಸಮಯದಲ್ಲಿ ಅವಳ ಪರೀಕ್ಷೆ ಸೆ.೧೫ರಂದು ನಡೆಸುವ ಕುರಿತು ಶಾಲೆಯಿಂದ ಮಾಹಿತಿ
ನೀಡಿದ್ದಾರೆ. ಇದರಿಂದ ನಮಗೆ ಆತಂಕವಾಗಿದೆ. ಮಗಳು ಶಿಕ್ಷಣದ ಪ್ರಗತಿಯೊಂದಿಗೆ ಅವಳ
ಆಯ್ಕೆ ಪ್ರಕಾರ ಅತ್ಯುತ್ತಮ ಯೋಗಪಟುವಾಗಲಿ ಎಂಬುದು ನಮ್ಮ ಆಪೇಕ್ಷೆ. ಈಗ ಒಂದೇ
ಸಮಯದಲ್ಲಿ ಪರೀಕ್ಷೆ ಮತ್ತು ಕ್ರೀಡಾಕೂಟ ನಡೆಸುತ್ತಿರುವುದರಿಂದ ನಮಗೆ ಸಮಸ್ಯೆಯಾಗಿದೆ.
ಭೀಮೇಶ, ವಿದ್ಯಾರ್ಥಿನಿ ಪಾಲಕ, ಗಂಗಾವತಿ.
undefined
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ