
13th September 2025
ಗಂಗಾವತಿ.
ಗಣಪತಿ ಮೆರವಣಿಗೆ ಡಿಜೆ ಹಾಕುವ ಸಂಬಂಧ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ ಕೆಲವು ಗಣಪತಿ ಸಮಿತಿ ಯುವಕರು ಡಿಜೆ ಸಂಗೀತ ಮುಂದುವರೆಸಿದ್ದರಿಂದ ಪೊಲೀಸರು
ಲಾಠಿ ಏಟು ನೀಡಿದ್ದರಿಂದ ಪೊಲೀಸರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ
ಗಂಗಾವತಿ ನಗರದಲ್ಲಿ ನಡೆದಿದೆ.
ಸೆ.೧೨ ರಂದು ೧೫ನೇ ದಿನದದ ಗಣಪತಿ ವಿಸರ್ಜನೆ ನಡೆಯಿತುತು. ಒಂದೇ ದಿನ ನಗರದ ವಿವಿಧ
ಕಡೆ ೧೫ಕ್ಕೂ ಹೆಚ್ಚು ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು. ಎಲ್ಲಾ ಗಣಪತಿ
ಮೆರವಣಿಗೆಯಲ್ಲೂ ಡಿಜೆಯೊಂದಿಗೆ ಯುವಕರು ಕುಣಿಯುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ.
ರಾತ್ರಿ ೧೧ ಗಂಟೆಗೆ ಎಲ್ಲಾ ಮೆರವಣಿಗೆ ಬಂದ್ ಮಾಡಬೇಕೆಂದು ಪೊಲೀಸರು ಮೊದಲೇ ಎಲ್ಲಾ
ಸಮಿತಿಯವರಿಗೆ ಸೂಚನೆ ನೀಡಿದ್ದಾರೆ. ಆದರೆ ಹತ್ತಾರು ಗಣಪತಿ ಮೆರವಣಿಗೆ ಒಂದೇ
ಸಮಯದಲ್ಲಿ ನಡೆಯುತ್ತಿರುವುದರಿಂದ ಗಾಂಧಿ ವೃತ್ತಕ್ಕೆ ಬರುವಷ್ಟರಲ್ಲಿ ರಾತ್ರಿ ೧
ಗಂಟೆಯಾಗಿದೆ. ಈ ಸಮಯದಲ್ಲಿ ಕೂಡಾ ಕೆಲ ಯುವಕರು ಡಿಜೆ ಸೌಂಡ್ ಹಾಕಲು ಮುಂದಾದಾಗ
ಪೊಲೀಸ್ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಆದರೆ ಯುವಕರು ಇದಕ್ಕೆ ಸೊಪ್ಪು ಹಾಕದ
ಪರಿಣಾಮ ಪೊಲೀಸರು ಲಾಠಿಯಿಂದ ಚದುರಿಸುವ ಕೆಲಸ ಮಾಡಿದ್ದಾರೆ. ಗಾಂಧಿವೃತ್ತದಲ್ಲಿ
ಪಂಪಾನಗರದಲ್ಲಿನ ಗಣಪತಿ ಸಮಿತಿ ಯುವಕನೊಬ್ಬನಿಗೆ ಲಾಠಿ ಏಟು ಜೋರಾಗಿ ಬಿದ್ದಿದ್ದು,
ಅದರ ಫೋಟೋ ಈಗ ಯುವಕರು ಹಂಚಿಕೊಳ್ಳುತ್ತಿದ್ದಾರೆ. ಮತ್ತು ಅದೇ ರೀತಿ ಇನ್ನೊಂದು
ಗಣಪತಿ ಸಮಿತಿಯ ಯುವಕ ದಲಿತ ಗಣಪತಿ ಮೆರವಣಿಗೆ ಎನ್ನುವ ಕಾರಣಕ್ಕೆ ನಮಗೆ
ಅಡ್ಡಿಪಡಿಸುತ್ತಿದ್ದಾರೆ ಎಂದು ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ರಾತ್ರಿ
ಯಾವುದೇ ಗೊಂದಲವಿಲ್ಲದೇ ಎಲ್ಲರು ಮನೆಗೆ ತೆರಳಿದ್ದಾರೆ. ಗಣಪತಿ ಮೆರವಣಿಗೆ ಶಾಂತವಾಗಿ
ನಡೆದಿದೆಯಾದರೂ ಕೆಲವೊಂದು ಕಡೆ ಪೊಲೀಸರು ಯುವಕರಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಗತಿ
ಶನಿವಾರ ಬೆಳೆಗ್ಗೆ ಸುದ್ದಿಯಾಗುತ್ತಿದೆ. ಈ ವಿಷಯ ಈಗ ಎಲ್ಲೆಡೆ ಹರಿದಾಡುತ್ತಿದೆ.
ಪೊಲೀಸರು ಗಣಪತಿ ಮೆರವಣಿಗೆ ಆಕ್ಷೇಪ ವ್ಯಕ್ತಪಡಿಸಿದರೂ ನಮ್ಮ ಪರವಾಗಿ ಯಾವುದೇ
ಜನನಾಯಕರು ಅಥವಾ ಹಿಂದುಪರ ಸಂಘಟನೆ ಮುಖಂಡರೊಂದು ಬಂದಿಲ್ಲ ಎಂದು ಕೆಲವು ಯುವಕರು
ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗಂಗಾವತಿಯಲ್ಲಿ ಗಣಪತಿ ವಿಸರ್ಜನೆ
ಮೆರವಣಿಗೆ ಶಾಂತತೆಯಿಂದ ನಡೆಸರು ಸಾಕಷ್ಟು ಶ್ರಮಿಸಿದ್ದಾರೆ. ಕೆಲವೊಂದು ಕಡೆ ಸಣ್ಣ
ಪುಟ್ಟ ಮಾತಿನ ಚಕಮಕಿ ನಡೆದಿದ್ದರೂ ಅದರ ಬಗ್ಗೆ ಯಾರು ಹೆಚ್ಚು ಆತಂಕಕ್ಕಿಡಾಗದೇ
ಗಣೇಶೋತ್ಸವದ ಯಶಸ್ವಿಗೆ ಎಲ್ಲರು ಸಂತಸ ವ್ಯಕ್ತಪಡಿಸಬೇಕು. ಕಳೆದ ಒಂದು ತಿಂಗಳಿಂದ
ಪೊಲೀಸರು ಸಹ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರೊಂದಿಗೆ
ಯುವಕರು ಸಹನೆಯಿಂದ ನಡೆದುಕೊಳ್ಳಬೇಕು ಎಂದು ಕೆಲವು ಸಮಾಜದ ಹಿರಿಯರು ಸಲಹೆ
ನೀಡಿದ್ದಾರೆ.
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ