

18th September 2025

ಗಂಗಾವತಿ.
ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿ ತಟದಲ್ಲಿರುವ ನವ ವೃಂದಾವನಗಡ್ಡೆಯಲ್ಲಿರುವ ಒಂಬತ್ತು ಯತಿಗಳ ವೃಂದಾವನಗಳಿಗೆ ಯತಿ ದ್ವಾದಶಿ ಕಾರ್ಯಕ್ರಮ ನಡೆಯಿತು.
ಗುರುವಾರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿ ಶ್ರೀ ಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರ ಆದೇಶದಂತೆ ಆನೆಗೊಂದಿ ರಾಯರ ಮಠದ ಪೂರ್ವೀಕ ಗುರುಗಳ ಮೂಲ ವೃಂದಾವನಗಳಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಾಲಾಯಿತು. ಮೂಲಬೃಂದಾವನಗಳಿಗೆ ನಿರ್ಮಲ್ಯ ಅಭಿಷೇಕ ಮಹಾಪಂಚಾಮೃತಾಭಿಷೇಕ, ವಿಶೇಷ ಪುಷ್ಪಾಲಂಕಾರ, ವಸ್ತ್ರಲಂಕಾರ ಹಸ್ತೋದಕ ನೆರವೇರಿದವು. ನಂತರ ಭಕ್ತರಿಗೆ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಂತ್ರಾಲಯ ಮಠದಿಂದ ವಿದ್ವಾಂಸ ಸುನಾದಿ ಹನುಮೇಶ ಆಚಾರ್ ನವೃಂದಾವನ ಯತಿಗಳ ಕುರಿತು ಮಾತನಾಡಿದರು. ಮಂತ್ರಾಲಯದ ರಾಘವೇಂದ್ರ ಆಚಾರ್, ಪ್ರಲ್ಲಾದಾಚಾರ್, ಲಕ್ಷ್ಮಿಕಾಂತ್ ಆಚಾರ್ , ಸಂಜೀವ್ ಕುಲಕರ್ಣಿ ಇಡುಪನೂರ್, ಆನೆಗುಂದಿ ಶ್ರೀ ಮಠದ ಶ್ರೀನಿವಾಸ್ ಆಚಾರ್, ಅರ್ಚಕ ನರಸಿಂಹಾಚಾರ್, ವಾದಿರಾಜ ದೇಸಾಯಿ ಗೋತಗಿ, ಅರವಿಂದ ಆಚರ್, ಆನೆಗುಂದಿ ಶ್ರೀಪಾದರಾಜ ಮಠದ ವ್ಯವಸ್ಥಾಪಕ ವಿಜಯ ದೇಸಾಯಿ, ಆನೆಗುಂದಿ ಶಾಖಾಮಠ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಮತ್ತಿತರು ಇದ್ದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ