

22nd September 2025

ಗಂಗಾವತಿ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತರದ ಭಾಗವಾಗಿ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ. ಹಿಂದೂ ಧರ್ಮದಲ್ಲಿನ ಬ್ರಾಹ್ಮಣ, ಲಿಂಗಾಯತ್, ಒಕ್ಕಲಿಗ, ಕುರುಬ ಮತ್ತಿತರ ವಿವಿಧ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೂ ಸೇರ್ಪಡೆ ಮಾಡಲು ಮುಂದಾಗಿದೆ. ಹಿಂದೂ ವಿರೋಧಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದೂ ಧರ್ಮದ ಜಾತಿಗಳಲ್ಲಿ ವೈಷಮ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಆಕ್ರೊಶ ವ್ಯಕ್ತಪಡಿಸಿದರು.
ಸೋಮವಾರ ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿ ಕಾಂಗ್ರೆಸ್ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಸರಕಾರದ ಜಾತಿ ಸಮೀಕ್ಷೆಯ ಕುತಂತ್ರವನ್ನು ಲಿಂಗಾಯತ್, ಒಕ್ಕಲಿಗ, ಬ್ರಾಹ್ಮಣ ಮತ್ತಿತರ ಸಮಾಜದ ಮಠಾಧೀಶರು, ಸಮಾಜದ ಮುಖಂಡರು ವಿರೋಧಿಸಿದ್ದಾರೆ. ಹೀಗಾಗಿ ಕ್ರೈಸ್ತ್ ಜಾತಿಗಳನ್ನು ಕೈಬಿಡುವುದಾಗಿ ಹೇಳಿಕೆ ನೀಡಿದ್ದಾರೆ ಹೊರತು ಅಧಿಕೃತವಾಗಿ ಆದೇಶ ಹೊರಡಿಸಿಲ್ಲ. ಹಿಂದುಳಿದ ಆಯೋಗದಿಂದ ಮಾಡಿರುವ ಈ ಜಾತಿ ಪಟ್ಟಿ ತಾವು ಮಾಡಿಲ್ಲ ಎಂದು ಹಿಂದುಳಿದ ವರ್ಗದ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ. ತಾವು ಮತ್ತು ಮುಖ್ಯಮಂತ್ರಿಗಳು ಸೂಚನೆ ನೀಡದಿದ್ದರೆ ಆಯೋಗ ಈ ರೀತಿಯ ಪಟ್ಟಿ ಮಾಡಲು ಸಾಧ್ಯವೇ. ತಮ್ಮ ಗಮನಕ್ಕೆ ಬಂದ ತಕ್ಷಣ ಇದನ್ನು ಯಾಕೆ ರದ್ದುಪಡಿಸಲಿಲ್ಲ. ಹಿಂದು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ನಾವು ಸಹಿಸುವುದಿಲ್ಲ. ಸರಕಾರವೇ ಬಲವಂತದ ಮತಾಂತರಕ್ಕೆ ಮುಂದಾಗಿರುವುದು ಹಿಂದೂ ವಿರೋಧಿ ಸರಕಾರ ಎಂಬುದು ಸಾಬೀತಾಗಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಏಕಾ ಏಕಿ ಸಮೀಕ್ಷೆ ಮಾಡುವ ಅವಶ್ಯಕತೆ ಎನಿತ್ತು. ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಕ್ರೈಸ್ತರನ್ನು ಓಲೈಸಿಕೊಳ್ಳುವ ಉದ್ದೇಶದಿಂದ ಈ ಸಮೀಕ್ಷೆ ಮಾಡಲು ಮುಂದಾಗಿದೆ ಎಂಬ ಅನುಮಾನ ರಾಜ್ಯದ ಜನತೆಗೆ ಮೂಡಿದೆ. ಸಾಮಾಜಿಕ ನ್ಯಾಯಕ್ಕಾಗಿ ಈ ಸಮೀಕ್ಷೆ ಎಂದು ಹೇಳುವ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಈಗ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕ್ರಿಶ್ಚಿಯನ್ ಕುರುಬ ಕ್ರಿಶ್ಚಿಯನ್ , ಲಿಂಗಾಯತ ಕ್ರಿಶ್ಚಿಯನ್ , ಒಕ್ಕಲಿಗ ಕ್ರಿಶ್ಚಿಯನ್ , ಬ್ರಾಹ್ಮಣ ಕ್ರಿಶ್ಚಿಯನ್ , ಮಡಿವಾಳ ಕ್ರಿಶ್ಚಿಯನ್ , ನೇಕಾರ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್ ಸೇರಿದಂತೆ ೪೮ ಅನಧಿಕೃತ ಕ್ರೈಸ್ತ ಜಾತಿಗಳನ್ನು ಪಟ್ಟಿ ಮಾಡಿ ಬಹಿರಂಗಪಡಿಸುವ ಕೆಲಸ ಮಾಡಿರುವುದು ಹಿಂದು ಸಮಾಜಕ್ಕೆ ಮಾಡಿದ ದ್ರೋಹವಾಗಿದೆ. ಈಗ ಹೊರಡಿಸಿರುವ ಪಟ್ಟಿಯನ್ನು ಅಧಿಕೃತವಾಗಿ ಹಿಂದುಳಿದ ಆಯೋಗದ ಮೂಲಕವೇ ಕೈಬಿಟ್ಟಿರುವುದಾಗಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದ ವಿರುಪಾಕ್ಷಪ್ಪ ಸಿಂಗನಾಳ ಅವರು ರಾಜ್ಯದ ಪ್ರತಿ ಕ್ಷೇತ್ರದಲ್ಲೂ ರಸ್ತೆಗಳು ಸಂಪೂರ್ಣ ಹದೆಗೆಟ್ಟಿವೆ. ಶಾಲಾ, ಕಾಲೇಜ್ಗಳಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರು, ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಿಂದ ವಂಚಿತರಾಗುತ್ತಿದ್ದಾರೆ. ಹಿಂದುಳಿದ, ಎಸ್ಸಿ. ಎಸ್ಟಿ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಸರಿಯಾದ ರೀತಿಯಲ್ಲಿ ಮೂಲ ಸೌಲಭ್ಯ ಒದಗಿಸುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲದೇ ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾಲ್ಕೂ ಕೋಟಿ ಹಣ ಖರ್ಚು ಮಾಡಿ ಕೇವಲ ಹದಿನೈದು ದಿನಗಳಲ್ಲಿ ಜಾತಿ ಸಮೀಕ್ಷೆ ಮಾಡಲು ಸಾಧ್ಯವೇ. ಸರಕಾರ ಮೊದಲು ರಾಜ್ಯದ ಅಭಿವೃದ್ಧಿಗೆ ಮುಂದಾಗಬೇಕು. ಜಾತಿ, ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುವ ಚಿಂತನೆ ಮತ್ತು ಯೋಜನೆಗಳನ್ನು ಕೈಬಿಡಬೇಕು ಎಂದು ವಿರುಪಾಕ್ಷಪ್ಪ ಸಿಂಗನಾಳ ಅಗ್ರಹಿಸಿದರು.

ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಯ್ಕೆ

ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ- ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ ಗೆಲುವು- ಉಪಾಧ್ಯಕ್ಷರಾಗಿ ಅಂದಾನಗೌಡ, ಜಂಟಿ ಕಾರ್ಯದರ್ಶಿಯಾಗಿ ಮೇಲುಸಕ್ಕರಿ, ಖಜಾಂಚಿಯಾಗಿ ಪುಷ್ಷಾ ಬೇವೂರಗೆ ಆಯ್ಕೆ