

22nd September 2025

ಕೊಪ್ಪಳ.
ಪರಿಸರಕ್ಕೆ ಮತ್ತು ಜನರ ಆರೋಗ್ಯಕ್ಕೆ ಹಾನಿಯುಂಟು ಮಾಡುವಂತ ಕೊಪ್ಪಳದ ಹತ್ತಿರ ಪ್ರಾರಂಭಿವಾಗಿರುವ ಎಂಎಸ್ಪಿಎಲ್ನ ಬಲ್ಡೋಟಾ ಕಾರ್ಖಾನೆಯನ್ನು ಬಂದ್ ಮಾಡಿಸಬೇಕೆಂಬ ಜನರ ಹೋರಾಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ದುರುಪಯೋಗಪಡೆಸಿಕೊಂಡಿದ್ದು, ರೂ.೫೬ ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿರುವ ಕಂಪನಿಯಿಂದ ಶೇ.೫ರಷ್ಟು ಹಣ ವಸೂಲಿ ಮಾಡಿ ಹೋರಾಟದ ನೇತೃತ್ವವಹಿಸಿಕೊಂಡಿದ್ದ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಮತ್ತು ಕಾರ್ಖಾನೆ ಬಂದ್ ಮಾಡಿಸುವ ಹುನ್ನಾರ್ ನಡೆಸಿ ಮುಖ್ಯಮಂತ್ರಿಗಳ ಬಳಿ ನಿಯೋಗದ ಕರೆದುಕೊಂಡು ಹೋಗಿ ಜಿಲ್ಲೆಯ ಬಿಜೆಪಿ ಮುಖಂಡರಿಗೂ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ ದಢೇಸೂಗೂರು ಸಚಿವ ಶಿವರಾಜ ತಂಗಡಗಿ ವಿರುದ್ಧ ಗಂಭೀರವಾಗಿ ಆರೋಪಿಸಿದರು.
ಸೋಮವಾರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ರಾಜ್ಯ ಸರಕಾರದ ಜಾತಿ ಸಮೀಕ್ಷೆ ವಿರೋಧಿಸಿ ಮತ್ತು ಜೆಎಸ್ಟಿಯಲ್ಲಿ ಕಡಿತ ಕುರಿತು ಅಹ್ವಾನಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾಧ್ಯಮಗಳ ಪ್ರತಿನಿಧಿಗಳಿಗೆ ನೇರವಾಗಿ ಸಚಿವ ತಂಗಡಗಿ ವಿರುದ್ಧ ಆರೋಪ ಮಾಡಿದರು. ಸಚಿವ ಶಿವರಾಜ ತಂಗಡಗಿ ಕೈಗಾರಿಕೆಗಳಿಂದ ಯಾವ ರೀತಿ ಹಣ ಲೂಟಿ ಮಾಡುತ್ತಾರೆ. ಮತ್ತು ಕನಕಗಿರಿ ಕ್ಷೇತ್ರದಲ್ಲಿ ಸರಕಾರದ ಅನುದಾನವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಜನರಿಗೆ ಅಷ್ಟು ಸುಲಭವಾಗಿ ಗೊತ್ತಾವುದಿಲ್ಲ. ಕೊಪ್ಪಳದ ಜನತೆ ಬಲ್ಡೋಟಾ ಕಾರ್ಖಾನೆ ಬೇಡ ಎಂದು ಹೋರಾಟ ನಡೆಸಿದರು. ಈ ಹೋರಾಟಕ್ಕೆ ಗವಿಶ್ರೀಗಳು ಭಾಗವಹಿಸಿದ್ದರಿಂದ ನಮ್ಮ ಜಿಲ್ಲೆಯ ಬಿಜೆಪಿ ಎಲ್ಲಾ ಮುಖಂಡರು ಸಾತ್ ನೀಡಿದ್ದರು. ಜನರ ಆರೋಗ್ಯಕ್ಕಾಗಿ ನಾವು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ವಿವಿಧ ಪಕ್ಷದ ಮುಖಂಡರ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳ ಮುಂದೆ ನಿಲ್ಲಿಸಿದರು. ಸಿಎಂ ಅವರು ಅಲ್ಲಿಂದಲೇ ಡಿಸಿಗೆ ಫೋನ್ ಮಾಡಿ ಫ್ಯಾಕ್ಟರಿ ಬಂದ್ ಮಾಡುವಂತೆ ಸೂಚನೆ ನೀಡಿದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ದುರುಪಯೋಗಪಡಿಸಿಕೊಂಡು ಕಾರ್ಖಾನೆ ಮಾಲೀಕರಿಂದ ಹಣ ವಸೂಲಿ ಮಾಡಿ ಕಾರ್ಖಾನೆ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡಿದ್ದಾರೆ. ಸಚಿವರು ತೆಗೆದುಕೊಂಡ ಕಾರ್ಖಾನೆ ಹಣದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರಿಗೂ ತಲುಪಿಸುವ ಕೆಲಸ ಮಾಡಿ ಕಾರ್ಖಾನೆ ವಿರೋಧದ ಕುರಿತು ಜಾಣ ಮೌನವಹಿಸಿದ್ದಾರೆ. ಮತ್ತು ಕನಕಗಿರಿ ಕ್ಷೇತ್ರದಲ್ಲೂ ಸಹ ಸರಕಾರದ ಅನುದಾನ ದುರುಪಯೋಗಪಡಿಸಿಕೊಂಡು ಕಾಮಗಾರಿ ಕಳಪೆ ಮಾಡುವ ಕೆಲಸ ಮಾಡಿದ್ದಾರೆ. ಸಚಿವರು ಪಡೆಯುವ ಕಮಿಷನ್ನಲ್ಲಿ ದಾಖಲೆಯಲ್ಲಿ ಆಧಾರ ಸಿಗಲ್ಲ. ಬಾಯಿ ಮಾತಿನಲ್ಲೇ ಎಲ್ಲ ವ್ಯವಹಾರ ಬಗೆಹರಿಸಿಕೊಳ್ಳುತ್ತಾರೆ. ನಾನು ಹೇಳುವ ಮಾತುಗಳಿಗೆ ನಿಮಿಗೆ ಪ್ರಮುಖ ಆಧಾರವಾಗಿದೆ ಎಂದು ದಢೇಸೂಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಶಿವರಾಜ ತಂಗಡಗಿ ಭ್ರಷ್ಟಾಚಾರದ ಕುರಿತು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ|| ಬಸವರಾಜ ಕ್ಯಾವಟರ್, ಮುಖಂಡ ಗಣೇಶ ಹೊರತಟ್ನಾಳ್ ಮತ್ತಿತರು ಇದ್ದರು.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*