

25th September 2025

ಕೊಪ್ಪಳ.
ರಾಜ್ಯ ಸರಕಾರ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಮನೆ ಬಂದವರಿಗೆ ಕುಕನೂರಿನ ಮಂಗಳೂರು ಗ್ರಾಮದ ಯುವಕ ರಾಮಣ್ಣ ನಿರಾಕರಿಸಿ ಪತ್ರ ಬರೆದು ಕೊಡುವ ಮೂಲಕ ಗಣತಿದಾರರಿಗೆ ಶಾಖ್ ನೀಡಿದ್ದಾರೆ ಮತ್ತು ಗಣತಿದಾರರು ಕೇಳುವ ೬೦ ಪ್ರಶ್ನೇಗಳಲ್ಲಿ ವೈಯಕ್ತಿ ವಿವರ, ಜಾತಿ ಮತ್ತಿತರ ಸಂಗತಿಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಘಟನೆ ನಡೆದಿದೆ. ಹಿಂದುಳಿದ ಆಯೋಗದಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಗಣತಿದಾರರು ಆಗಮಿಸಿದ್ದ ಸಂದರ್ಭದಲ್ಲಿ ಯುವಕ ರಾಮಣ್ಣ ಹಲವು ಪ್ರಶ್ನೇಗಳನ್ನು ಕೇಳುವುದಕ್ಕೆ ವಿರೋಧಿಸಿದ್ದಾರೆ. ಅನ್ಯ ವ್ಯಕ್ತಿಗಳು ಬಂದು ಜಾತಿ ಕೇಳುವುದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ಮತ್ತು ಮನೆಯಲ್ಲಿ ವಿಧವೆಯರು ಇದ್ದಾರೆಯೇ ಎಂಬ ಪ್ರಶ್ನೇಯಿಂದ ಮಹಿಳೆಯರಿಗೆ ತೀವ್ರ ಮುಜುಗರವಾಗುತ್ತಿದೆ. ರಾಜ್ಯ ಸರಕಾರ ಅವೈಜ್ಞಾನಿವಾಗಿ ಮತ್ತು ದೋಷಪೂರಿತವಾಗಿ ೬೦ ಪ್ರಶ್ನೇಗಳನ್ನು ಕೇಳುವುದು ಸರಿಯಲ್ಲ. ಕಾಲಂ ೧೨ರಲ್ಲಿ ಜಾತಿ ಮತ್ತು ಉಪ ಜಾತಿ ನೋಂದಣಿ ಮಾಡಬಾರದು. ಮನೆಗಳಲ್ಲಿ ಶೌಚಾಲಯ, ದೀಪಗಳು ಮತ್ತಿತರ ಅಸಂಬದ್ಧವಾದ ಪ್ರಶ್ನೇಗಳಿರುವುದರಿಂದ ನಾನು ಇದನ್ನು ವಿರೋಧಿಸಿ ಸಮೀಕ್ಷೆಯಲ್ಲಿ ಮಾಹಿತಿ ಕೊಡುವುದಿಲ್ಲ ಎಂದು ಸಮೀಕ್ಷೆಗೆ ಬಂದವರಿಗೆ ಪತ್ರ ನೀಡಿದ್ದೇನೆ. ರಾಜ್ಯ ಸರಕಾರ ಇದನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ