

28th September 2025

ಕಾರಟಗಿ
ಪಟ್ಟಣದ ಸೌಂದರ್ಯೀಕರಣಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಪುರಸಭೆಯ ಸಮಸ್ತ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ. 15 ಎಕರೆ ಭೂಮಿಯಲ್ಲಿ ಎರಡುವರೆ ಎಕರೆ ಭೂಮಿಯನ್ನು ಪೌರ ಕಾರ್ಮಿಕ ವಸತಿಗೆ ಮಿಸಲಿರಿಸುತ್ತೇನೆ. ಮತ್ತು ಕಾರಟಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಬೇಕೆಂಬ ಜನರ ಬೇಡಿಕೆಯ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ತರುತ್ತೇನೆ. ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಕೋಶ ಕೊಪ್ಪಳ, ಪುರಸಭೆ ಕಾರ್ಯಾಲಯ ಕಾರಟಗಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ಕಾರಟಗಿ ತಾಲ್ಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಪದ್ಮಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮೊದಕ ಭಾರಿ ಶಾಸಕನಾಗಿ ಸಚಿವನಾದ ನಂತರ ಗ್ರಾಪಂ ನಿಂದ ಕಾರಟಗಿ ಪುರಸಭೆಯನ್ನಾಗಿ ಮೇಲ್ದರ್ಜೆಗೆರಿಸಿದೆ. ಪುರಸಭೆ ನೌಕರರ ಖಾಯಾಂತಿಗೂ ನಾನು ವಿಶೇಷ ಪ್ರಯತ್ನ ಮಾಡಿದ್ದೇನೆ. ನೇಮಕಾತಿಯಲ್ಲು ಸಹ ಈಗಾಗಲೆ ಸಿಎಂರೊಂದಿಗೆ ಮಾತನಾಡಿದ್ದು, ಶೀರ್ಘ ಈ ಕೆಲಸವನ್ನು ಪೂರ್ಣಗೊಳಿಸು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಇಲ್ಲಿನ ಪುರಭೆ ನಗರಸಭೆ ಮಾಡಲು ನಾನು ಸಹ ಉತ್ಸುಕನಾಗಿದ್ದೇನೆ. ಪ್ರಸ್ತಾವನೆಯನ್ನು ಸರಕಾರದ ಸಚಿವ ಸಂಪುಟದಲ್ಲಿ ಅನುಮೊದನೆಗೆ ಮುಂದಾಗುತ್ತೇನೆ. ನಗರಸಭೆಯಾದರೆ ಕಾರಟಗಿ ಜಿಲ್ಲೆಯ ಸದೃಢ ತಾಲೂಕ ಆಗುತ್ತದೆ. ಜನರ ಆದಯ ಹೆಚ್ಚಳಕ್ಕೂ ಪೂರಕವಾಗುತ್ತದೆ. ಊರಿನ ಅಭಿವೃದ್ದಿಗಾಗಿ ಜನರು ಬದಲಾವಣೆಗೆ ಹೊಂದಿಕೊಳ್ಳಬೇಕು. ನಮ್ಮ ಸರಕಾರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತದೆ. ಕಾರಟಗಿ ತಾಲೂಕಿಗೆ ಹೊಸ ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷೆ ಅಧ್ಯಕ್ಷತೆ ರೇಖಾ ಆನೆಹೊಸರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಬಗ್ಗೆ ನಿವೃತ ಶಿಕ್ಷಕ ಗುರುಬಸಪ್ಪ ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ ಮಾತನಾಡಿ, ಪೌರಕಾರ್ಮಿಕರಾಗಿ ನಿವೇಶನ, ಪುರಸಭೆ ನೂತನ ಕಟ್ಟಡಕ್ಕಾಗಿ ಅನುಧಾನ ಹಾಗೂ ಪುರಸಭೆಗೆ ಅನುದಾನ ನೀಡುವಂತೆ ಸಚಿವರಲ್ಲು ಮನವಿ.ಮಾಡಿದರು.
ಪೌರ ಕಾರ್ಮಿಕ ಸೇವ ನೌಕರ ಸಂಘದ ಅದ್ಯಕ್ಷ ಸಣ್ಣ ಈರಪ್ಪ ಚೌಡ್ಕಿ ಮಾತನಾಡಿ ಪೌರ ಕಾರ್ಮುಕರ ಬೇಡಿಕೆ ಈಡೇರಿಸಬೇಕು ಎಂದು ಸಚಿವರಿಗೆ ಮನವಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ಹಿರೇಬಸಪ್ಪ ಸಜ್ಜನ, ಸೋಮಶೇಖರ್ ಬೇರಿಗ, ದೊಡ್ಡಬಸವರಾಜ ಬೂದಿ, ಮಂಜುನಾಥ್ ಮೇಗೂರು, ರಾಮಣ್ಣ, ಪಕೀರಪ್ಪ ನಾಯಕ, ಆನಂದ ಮ್ಯಾಗಲಮನಿ, ಹನುಮಂತರೆಡ್ಡಿ, ಪೌರ ಕಾರ್ಮಿಕರ ಸಂಘದ ಸಣ್ಣ ವೀರಪ್ಪ ಚೌಡ್ಕಿ,
ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜ ಅರಳಿ,
ರೈಸ್ ಮಿಲ್ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ್, ಮುಖಂಡರಾದ ಬಸವರಾಜ್ ಎತ್ತಿನಮನಿ, ಜಮಾದಗ್ನಿ ಚೌಡಕಿ, ನಾಗರಾಜ ಈಡಿಗೇರ್, ಶರಣಪ್ಪ ಪರಕಿ, ರಾಜು ದೇವಿಕ್ಯಾಂಪ್, ಮರಿಯಪ್ಪ ಸಾಲೋಣಿ, ಮಹಿಬೂಬ್ ಮೇಸ್ತ್ರಿ, ಧನಂಜಯ ಎಲಿಗಾರ್, ಶಕುಂತಲಾ, ರೇಣುಕಮ್ಮ ನಾಯಕ, ಗಾಯಕ ದ್ಯಾಮೇಶ್, ಡಾ. ಪ್ರಿಯಾಂಕ ಪಟ್ಟಣ ಶೆಟ್ಟಿ, ಡಾ. ನಾಗರಾಜ, ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ದ್ಯಾಮೇಶ್ ಸೇರಿ ಇನ್ನಿತರರು ಇದ್ದರು.
ಬಾಕ್ಸ್.
ಕಾರಟಗಿ ಪುರಸಭೆ ನಗರಸಭೆನ್ನಾಗಿಸಲು ಪ್ರಯತ್
ಕೊಪ್ಪಳ ಜಿಲ್ಲೆಯ ಪ್ರಮುಖ ಪಟ್ಟಣವಾಗಿರುವ ಕಾರಟಗಿಯ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಇಲ್ಲಿನ ಪುರಸಭೆಯನ್ನು ನಗರಸಭೆಯನ್ನಾಗಿಸುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ. ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅನುಮೊದನೆ ಪಡೆಯುವ ಕೆಲಸ ಮಾಡುತ್ತೇನೆ. ನಗರಸಭೆಯಾದರೆ ಆದಾಯ ಹೆಚ್ಚುತ್ತದಲ್ಲದೇ ಬೃಹತ್ ಯೋಜನೆಗಳು ಮಂಜೂರಾಗುತ್ತವೆ. ಅಭಿವೃದ್ದಿ ಕಾರ್ಯದಲ್ಲಿ ಜನರು ವೈಯಕ್ತಿಕ ಹಿತಾಶಕ್ತಿ ಬಿಡಬೇಕು. ಊರಿನ ಹಿತಕ್ಕಾಗಿ ಸಹಕಾರ ನೀಡಬೇಕು.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರು, ಕೊಪ್ಪಳ.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ