
14th October 2025
ಗಂಗಾವತಿ.
ನಗರದ ಗದ್ವಾಲ್ ಕ್ಯಾಂಪಿನ ಚರ್ಚಿನಲ್ಲಿ 2020ರಲ್ಲಿ ನಡೆದಿದ್ದ ಬಾಲ್ಯ ವಿವಾಹ ಪ್ರಕರಣದಲ್ಲಿ ಚರ್ಚ್ ಫಾದರ್ ಸೇರಿ ಆರು ಜನ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ತೀರ್ಪು ಪ್ರಕಟಿಸಿ ಆದೇಶಿಸಿದ್ದಾರೆ.
ಅ.14 ರಂದು ಮಂಗಳವಾರ ತೀರ್ಪು ಪ್ರಕಟಿಸಿರುವ ಕುರಿತು ಸರಕಾರಿ ಸಹಾಯಕ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಮಾಹಿತಿ ನಿ೮ಡಿದ್ದಾರೆ. ಪ್ರಕರಣದ 4ನೇ ಆರೋಪಿ ಶ್ರೀರಾಮನಗರದ ಯೇಸು ಮತ್ತು 5ನೇ ಆರೋಪಿ ಶ್ರೀರಾಮನಗರದ ಶಾಂತಮ್ಮ ಗಂಡ ಯೇಸು ಅವರು ತಮ್ಮಅಪ್ರಾಪ್ತ 14 ವಯಸ್ಸಿನ ಮಗಳ ಮದುವೆಯನ್ನು 2ನೇ ಆರೋಪಿ ಗಂಗಾವತಿ ತಾಲೂಕಿನ ಗದ್ವಾಲ್ ಕ್ಯಾಂಪಿನ ಆನಂದ ತಂದೆ ಏರುಮಿಚನೊಂದಿಗೆ 1ನೇ ಆರೋಪಿ ಗದ್ವಾಲ್ಕ್ಯಾಂಪಿನ ಕುರುಪಣ್ಣ ತಂದೆ ಆನಂದನೊಂದಿಗೆ ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುವ ಗದ್ವಾಲ್ ಕ್ಯಾಂಪ್ ಗ್ರಾಮದ ಚರ್ಚಿನಲ್ಲಿ ದಿನಾಂಕ 22-05-2020 ರಂದು ಚರ್ಚ್ ಫಾದರ್ 6ನೇ ಆರೋಪಿ ಅಬ್ರಾಹಿಂ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ನಡೆಸಿದ್ದಾರೆ. ಆರೋಪಿತರೆಲ್ಲರೂ ಕಲಂ 09,10,11 ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಅಪರಾಧ ಮಾಡಿರುವ ಕುರಿತು ಅಂದು ಕರ್ತವ್ಯದಲ್ಲಿದ್ದ ಗಂಗಾವತಿ ಠಾಣೆಯ ಎಸ್.ಐ ದೊಡ್ಡಪ್ಪ ಜೆ.ಪಿ ಅವರು ಸಾಕ್ಷಿ ಸಮೇತ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಪ್ರಕರಣದ ಆರೋಪಿ 1) ಕುರಪಣ್ಣ ತಂದೆ ಆನಂದ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ ಜಿಃ ಕೊಪ್ಪಳ 2) ಆನಂದ ತಂದೆ ಏರಮಿಚಿಯಾ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ ಜಿಃ ಕೊಪ್ಪಳ 3) ಆಶಿರ್ವಾದಮ್ಮ ಗಂಡ ಆನಂದ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ 4) ಯೇಸು ಸಾಃ ಶ್ರೀರಾಮನಗರ 5) ಶಾಂತಮ್ಮ ಗಂಡ ಯೇಸು ಸಾಃ ಶ್ರೀರಾಮನಗರ 6) ಅಂಬ್ರಾಹಿಂ ಡಿ. ತಂದೆ ಬಡಗಪ್ಪ ದಾದೆಪಾಲ್, ಸಾಃ ಗದ್ವಾಲ್ ಕ್ಯಾಂಪ್ ತಾಃ ಗಂಗಾವತಿ ಇವರನ್ನು ದೋಷಿಯೆಂದು ಪರಿಗಣಿ ತೀರ್ಪು ನೀಡಿದೆ. ಆರೋಪಿತರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 09,10 ಮತ್ತು 11ರ ಅಡಿಯಲ್ಲಿ ಆರೋಪಿತರಲ್ಲರಿಗೂ 2 ವರ್ಷಗಳ ಕಾಲ ಸೆರೆಮನೆವಾಸ ಶಿಕ್ಷೆ ಮತ್ತು ತಲಾ ರೂ.10,000 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಡಾ:ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಆಂಜನೇಯ, ವೆಂಕಟೇಶ, ಶ್ರೀಶೈಲ್ ಅವರುಗಳು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕಾರ ನೀಡಿದ್ದಾರೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಇದ್ದರು ಸಹ ಗಂಗಾವತಿ ತಾಲೂಕ ಸೇರಿದಂತೆ ಜಿಲ್ಲೆಯಾದ್ಯಂತ ಹೆಚ್ಚು ಬಾಲ್ಯ ವಿವಾಹಗಳು ನಿರಂತರವಾಗಿ ನಡೆಯುತ್ತವೆ. ಆದರೆ ಇಂದು ಹೊರಬಿದ್ದಿರುವ ನ್ಯಾಯಾಧೀಶರ ತೀರ್ಪು ಬಾಲ್ಯ ವಿವಾಹ ನಡೆಸುವ ಮತ್ತು ಅದರಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಅಪರಾಧಿಗಳಿಗೆ ತಡವಾದರೂ ಸಹ ನ್ಯಾಯಾಲಯದಿಂದ ಶಿಕ್ಷೆ ನಿಶ್ಚಿತ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಿದೆ. ಹೀಗಾಗಿ ಜಿಲ್ಲೆಯ ಜನರು ಬಾಲ್ಯ ವಿವಾಹಗಳ ಬಗ್ಗೆ ಈ ತೀರ್ಪಿನಿಂದ ಜಾಗೃತರಾಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬಡ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ : ಎಸ್. ದೇವಾನಂದ
ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ