

19th October 2025

ಗಂಗಾವತಿ.
ಭಾರತೀಯ ವೈದ್ಯಕೀಯ ಸಂಘದ ೯೧ನೇ ರಾಜ್ಯ ಸಮ್ಮೇಳನ ಅ.೨೪,೨೫ ಮತ್ತು ೨೬ ರಂದು ಗಂಗಾವತಿಯಲ್ಲಿ ಆಯೋಜಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತಿತರ ಗಣ್ಯರು ಉದ್ಘಾಟನೆ ಮಾಡಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಹಿರಿಯ ವೈದ್ಯ ವಿ.ವಿ.ಚಿನಿವಾಲ್ ಹೇಳಿದರು.
ಸಮ್ಮೇಳನ ಕುರಿತು ಭಾನುವಾರ ನಗರದ ಐಎಂಎ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಅವರು ಅಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಪ್ರತಿ ವರ್ಷವು P ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮಟ್ಟದ ಸಮ್ಮೇಳನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷದ ೯೧ನೇ ಸಮ್ಮೇಳನ ಗಂಗಾವತಿಯಲ್ಲಿ ಆಯೋಜಿಸಲಾಗಿದ್ದು, ಸ್ಥಳೀಯ ಐಎಂಎ ಘಟಕ ಸಮ್ಮೇಳನದ ಯಶಸ್ವಿಗೆ ಸಜ್ಜಾಗಿದೆ ಎಂದರು.
ಕಾರ್ಯಕ್ರಮ ಕುರಿತು ಐಎಂಎ ಗಂಗಾವತಿ ಘಟಕದ ಅಧ್ಯಕ್ಷ ಡಾ.ಎ.ವಿ.ಎನ್.ರಾಜು ಮತ್ತು ಕಾರ್ಯದರ್ಶಿ ಡಾ.ಅಮರೇಶ ಪಾಟೀಲ್ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ತನ್ನದೇ ಆದ ರೀತಿಯ ಕಾರ್ಯ ಚಟುವಟಿಕೆ ನಡೆಸುತ್ತದೆ. ಆರೋಗ್ಯ ಶಿಬಿರ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಗಂಗಾವತಿ ಐಎಂಎ ಸರ್ವ ಪದಾಧಿಕಾರಿಗಳು ಕ್ರೀಯಾಶೀಲರಾಗಿದ್ದು, ನಮ್ಮ ಗಂಗಾವತಿಯ ಹಿರಿಯ ವೈದ್ಯರು ರಾಜ್ಯಾಧ್ಯಕ್ಷರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ನಗರದ ರಾಯಚೂರು ರಸ್ತೆಯ ಅಮರ್ ಗಾರ್ಡನ್ ಸಭಾಂಗಣದಲ್ಲಿ ಅ.೨೪ ರಿಂದ ೨೬ರವರೆಗೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಹಿರಿಯ ವೈದ್ಯರು ಮತ್ತು ಐಎಂಎದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಅವರೆಲ್ಲರಿಗೂ ಆತಿಥ್ಯ ನೀಡುವುದು ನಮ್ಮ ಜವಬ್ದಾರಿಯಾಗಿದೆ. ರಾಜ್ಯ ಮಟ್ಟದ ಸಮ್ಮೇಳನ ನಮ್ಮ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಅ.೨೪ ರಂದು ಈ ಸಮ್ಮೇಳವನ್ನು ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ರಾಜ್ಯಾಧ್ಯರಾದ ಡಾ.ವಿ.ವಿ.ಚಿನಿವಾಲ ಅವರ ನೇತೃತ್ವದಲ್ಲಿ ಐಎಂಎ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ನವೀನ ತಂತ್ರಜ್ಞಾನದ ಚಿಕಿತ್ಸಾ ಪದ್ಧತಿ, ವೈದ್ಯರ ಸಮಸ್ಯೆಗಳು ಮತ್ತು ಐಎಂಎ ಮೂಲಕ ವಿವಿಧ ಸೇವಾ ಕಾರ್ಯಗಳು ಮತ್ತು ಆರೋಗ್ಯ ಮತ್ತಿತರ ಶಿಬಿರಗಳ ಆಯೋಜನೆ ಕುರಿತು ಚರ್ಚಿಸಲಾಗುತ್ತದೆ. ಗಂಗಾವತಿಯ ಸಮಸ್ಥ ವೈದ್ಯರು, ನಾಗರೀಕರು ಸಹಕಾರ ನೀಡಬೇಕು ಎಂದು ಕೊರಿದರು. ಈ ಸಂದರ್ಭದಲ್ಲಿ ಡಾ.ಮಲ್ಲನಗೌಡ, ಡಾ.ಮಧುಸೂದನ್, ಡಾ.ಸೂರಿರಾಜು ಮತ್ತಿತರು ಇದ್ದರು.

ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ "ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು...

ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ