

30th January 2026

ಕೊಪ್ಪಳ
ನಗರದ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಬಿ.ಕಲ್ಲೇಶ ಅವರು ಅಕ್ರಮ ಆಸ್ತಿ ಮತ್ತು ಹಣ ಸಂಪಾದನೆ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಲ್ಲೇಶ ಅವರಿಗೆ ಸಂಬಂಧಿಸಿದ ಭಾಗ್ಯನಗರದ ನವಚೇತನ ಕಾಲೇಜ್, ಅವರ ವಾಸದ ಮನೆ, ಕೀಮ್ಸ್ ಕಚೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಾಗ್ಯನಗರದಲ್ಲಿರು ನವಚೇತನ ಕಾಲೇಜಿನಲ್ಲಿ ಕಂಡು ಬಂದಿರುವ ಕಂತೆ ಕಂತೆ ಹಣವನ್ನು ಎಣಿಕೆ ಮಾಡಿದ್ದು, ದಾಖಲೆಗಳನ್ನು ಸರ್ಚ್ ಮಾಡಿದ್ದಾರೆ.
ಶುಕ್ರವಾರ ಬೆಳಂ ಬೆಳಗ್ಗೆ ರಾಯಚೂರು ಲೋಕಾಯುಕ್ತ ಎಸ್ ಪಿ ನೇತೃತ್ವದಲ್ಲಿ ಹಾವೇರಿ, ಗದಗ ಕೊಪ್ಪಳ ಸೇರಿದಂತೆ ಇನ್ನಿತರ ಕಡೆಗಳಿಂದ ಬಂದ 30 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ನಾಲ್ಕೈದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿನಡೆಸಿ ಪರಿಶೀಲಿಸಿದ್ದಾರೆ.
ಭಾಗ್ಯನಗರದ ನವಚೇತನ ಶಾಲೆ ಮತ್ತು ಕಾಲೇಜಿನ ಕಚೇರಿಗಳಲ್ಲಿ ಇಟ್ಟಿರುವ ಕಂ೫ಎ ಕಂತೆ ಹಣವನ್ನು ಮಷೀನ್ ನಲ್ಲಿ ಎಣಿಕೆ ಮಾಡಿದ್ದಾರೆ.
ಕೊಪ್ಪಳದ ಭಾಗ್ಯನಗರದ ನವಚೇತನ ಶಾಲೆ, ನವಚೇತನ ವಿಜ್ಞಾನ ಕಾಲೇಜು,ಬಿ ಕಲ್ಲೇಶ್ ಮನೆ ಹಾಗೂ ಅತ್ತೆಯ ಮನೆ, ಜೊತೆಗೆ ಕಲ್ಲೇಶ ಸ್ವಗ್ರಾಮ ಯಲಬುರ್ಗಾ ಚಿಕ್ಕಮನ್ನಾಪೂರ ಗ್ರಾಮದ ಮನೆಯಲ್ಲು ಸರ್ಚ್ ಮಾಡಿದ್ದಾರೆ.
ಕಳೆದ ಹತ್ತಾರು ವರ್ಷಗಳ ಕಾಲ ಕೊಪ್ಒಳದ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದಬಕಲ್ಯಾಣ ವರ್ಗಗಗಳ ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಬಿಡು ಬಿಟ್ಟಿದ್ದ ಕಲ್ಲೇಶ, ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರದ ಅವದಿಯಲ್ಲಿ ನಡೆದಿರುವ ವಾಲ್ಮಿಕಿ ನಿಗಮದ ಹಣ ಲೂಟಿ ಪ್ರಕರಣದಲ್ಲಿ ಇವರನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪ ಹೊರಿಸಿದ್ದರು. ವಾಲ್ಮಿಕಿ ಹಗರಣದಲ್ಲಿ ಅಮನಾತ್ತಾಗಿದ್ದ ಕಲ್ಲೇಶ ಮತ್ತೆ ಸರಕಾರದ ಮೇಲೆ ಪ್ರಭಾವ ಬಳಸಿ ಕೊಪ್ಪಳ ಕಿಮ್ಸ್ ಗೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಾಲ್ಮಿಕಿ ಹಗರಣ ಇನ್ನು ಜೀವಂತ ಇರುವಾಗಲೆ ಲೋಕಾಯುಕ್ತರು ಕೀಮ್ಸ್ ಆಡಳಿತಾಧಿಕಾರಿಯಾಗಿರುವ ಕಲ್ಲೇಶ ಅವರಿಗೆ ಸಂಬಂಧಿಸುದ ಮನೆ, ಕಾಲೇಜ್ ಮತ್ತು ಕೀಮ್ಸ್ ಸೇರಿ ಹಲವೆಡೆ ದಾಳಿ ಮಾಡಿರುವುದು ಸರಕಾರ ಮತ್ತು ಕೊಪ್ಪಳ ಜಿಲ್ಲೆಯ ಜನಪ್ರತಿಗಳಿಗೆ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಆಡಳಿತದಲ್ಲಿ ಗುಂಡಾ ರಾಜ್ಯ- ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು- ಗಣರಾಜ್ಯೋತ್ಸವದಲ್ಲಿ ಶಾಸಕ ರೆಡ್ಡಿ ಆರೋಪ

ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ- ಕಾಂಗ್ರೆಸ್ಸಿಗೆ ಸೋಲು: ಚಂದ್ರಶೇಖರ ನಾಲತ್ವಾಡ ವಿಷಾದ- ಸುಲಭ ಗೆಲುವ ಮರೆತ ನಾಯಕರು: ಕಾಂಗ್ರೆಸ್ಸಿಗೆ ಹಿನ್ನಡೆ

ಸ್ಥಳೀಯ ಸಂಸ್ಥೆಗಳ ಯೋಜನಾ ಸಮಿತಿ ಸದಸ್ಯರ ಚುನಾವಣೆ- ೬ ಸ್ಥಾನಕ್ಕೆ ೪ ಬಿಜೆಪಿ ೨ ಕಾಂಗ್ರೆಸ್ ಸದಸ್ಯರು ಆಯ್ಕೆ- ಬಿಜೆಪಿ ಮುಖಂಡರಿಗೆ ಹರ್ಷ: ಕಾಂಗ್ರೆಸ್ಸಿಗರಿಗೆ ಸೋಲಿನ ಮುಜುಗರ