

4th February 2026

ಗಂಗಾವತಿ.
ತಾಲೂಕಿನ ಬಸಾಪಟ್ಟಣ ಗ್ರಾಮದ ಹಿಂದು ಯುವಕನೊರ್ವನಿಗೆ ಗಂಗಾವತಿಯ ಮುಸ್ಲಿಂ ಸಮಾಜದ ಕೆಲವು ಯುವಕರು ರಾತ್ರಿ ಸಮಯದಲ್ಲಿ ನಗರದ ಹೊರ ಹೊಲಯದಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತರ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ.
ಈ ಕುರಿತು ಬುಧವಾರ ನಗರ ಪೊಲೀಸ್ ಠಾಣೆಯಲ್ಲಿ ಬಸಾಪಟ್ಟ ಗ್ರಾಮದ ಯುವಕ ವೆಂಕಟೇಶ ಮಡಿವಾಳ ನೀಡಿರುವ ದೂರಿನ ಆಧಾರದ ಮೇಲೆ ನಗರದ ಮುಸ್ಲಿಂ ಯುವಕರಾದ ಖಾಜಾಫೀರ್, ಅಮೀರ್, ಇಂದ್ರಾವಲಿ ಸೇರಿದಂತೆ ಇನ್ನಿತರರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ತಾಲೂಕಿನ ಬಸಾಪಟ್ಟಣ ಗ್ರಾಮದ ವೆಂಕಟೇಶ ತಂದೆ ಸಾಂಬಯ್ಯ ಎಂಬ ೨೭ ವರ್ಷದ ಹಿಂದು ಯುವಕ ಗಂಗಾವತಿ ನಗರದ ಬಸ್ ನಿಲ್ದಾಣದಲ್ಲಿ ತನಗೆ ಪರಿಚಿತವಿರುವ ಬಸಾಪಟ್ಟಣ ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿರುವ ಮುಸ್ಲಿಂ ಮಹಿಳೆ ಮತ್ತು ಅವರ ಮಕ್ಕಳನ್ನು ಊರಿಗೆ ಕಳುಹಿಸಲು ಗಂಗಾವತಿ ಬಸ್ ನಿಲ್ದಾಣಕ್ಕೆ ಬಂದ ಸಮಯದಲ್ಲಿ ಆರೋಪಿತ ಸುಮಾರು ಹತ್ತಿಪ್ಪತ್ತು ಮುಸ್ಲಿಂ ಯುವಕರ ಗುಂಪು ವೆಂಕಟೇಶ ಎಂಬ ಯುವಕನ್ನು ವಿಚಾರಣೆ ನಡೆಸಿ ಮುಸ್ಲಿಂ ಮಹಿಳೆಯೊಂದಿಗೆ ನೀನು ಏಕೆ ಬಂದಿದ್ದಿ. ಅವರ ಫೋಟೋ ಏಕೆ ಇಟ್ಟುಕೊಂಡಿದ್ದಿ ಎಂದು ತಗಾದೆ ತೆಗೆದಿದ್ದಾರೆ. ಈ ಸಮಯದಲ್ಲಿ ಮಹಿಳೆಯ ಯುವಕ ತನಗೆ ಪರಿಚಿತನೆಂದು ಹೇಳಿದರು ಕೇಳದ ಆರೋಪಿತ ಮುಸ್ಲಿಂ ಯುವಕರು ನಗರದಾದ್ಯಂತ ಸುತ್ತಾಡಿಸಿ ಕೊಪ್ಪಳ ರಸ್ತೆಯ ರೈಲ್ವೆ ಹಳಿಯ ಪಕ್ಕದಲ್ಲಿ ರಾತ್ರಿ ೧೧.೩೦ ಗಂಟೆ ಸುಮಾರಿಗೆ ಕರೆದುಕೊಂಡು ಹೋಗಿ ಮನಸೋ ಇಚ್ಚೆ ತಳಿಸಿ ಹಲ್ಲೆ ಮಾಡಿದ್ದಾರೆ. ಮತ್ತು ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಹೇಳಿಕೆ ನೀಡಲು ಹಿಂದೆಟು ಹಾಕಿದರೆ ರೈಲ್ವೆ ಹಳಿಗೆ ಹಾಕಿ ಸಾಯಿಸುತ್ತೇವೆ ಎಂದು ಧಮಕಿ ಹಾಕಿ ಒತ್ತಾಯಪೂರ್ವಕವಾಗಿ ವಿಡಿಯೋ ಮಾಡಿಕೊಂಡು, ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ನಂತರ ಯುವಕ ಅಲ್ಲಿಂದ ವಾಲ್ಮೀಕಿ ವೃತ್ತದ ಮೂಲಕ ಆಸ್ಪತ್ರೆಗೆ ದಾಖಲಾಗಿ ನಂತರ ಠಾಣೆಗೆ ದೂರು ನೀಡಿರುವುದಾಗಿ ಪೊಲೀಸ್ ಪ್ರಕರಣದಲ್ಲಿ ದಾಖಲಾಗಿದೆ.
ರಾತ್ರಿ ಸಮಯದಲ್ಲಿ ನಗರದ ಬಸ್ ನಿಲ್ದಾಣಕ್ಕೆ ಬಂದ ಮುಸ್ಲಿಂ ಯುವಕರು ಅನುಮಾನ ಬಂದರೆ ನೇರವಾಗಿ ಯುವಕನನ್ನು ಠಾಣೆಗೆ ಕೆರೆದುಕೊಂಡು ಬಂದು ದೂರು ನೀಡುವ ಬದಲು ತಾವೇ ಯುವಕನನ್ನು ಹೊರ ಹೊಲಯಕ್ಕೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗಂಗಾವತಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ಕೆಲವು ಯುವಕರ ಗುಂಪು ಗುಂಡಾ ಪ್ರವೃತ್ತಿ ಮೆರೆಯುತ್ತಿರುವುದು ಹೆಚ್ಚುತ್ತಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ವಿಷಯ ತಿಳಿದು ನಗರಕ್ಕೆ ಆಗಮಿಸಿದ್ದ ಎಸ್ಪಿ ಡಾ.ರಾಮ ಅರಸಿದ್ಧಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬಾಕ್ಸ್:
ವಿಚಿತ್ರಕಾರಿ ಘಟನೆ: ಎಸ್ಪಿ ದಿಡೀರ್ ಭೇಟಿ
ನಗರದಲ್ಲಿ ಕಳೆದ ದಿನ ರಾತ್ರಿ ಒಬ್ಬ ಯುವಕನನ್ನು ಹತ್ತು ಯುವಕರು ಬೈಕ್ ಮೇಲೆ ಕೂಡಿಸಿಕೊಂಡು ನಗರದಾದ್ಯಂತ ಸಂಚರಿಸಿ ಹೊರ ಹೊಲಯಕ್ಕೆ ಕರೆದುಕೊಂಡು ಹೋಗಿ ಕ್ಷುಲಕ ಕಾರಣಕ್ಕೆ ಮನ ಬಂದಂತೆ ತಳಿಸಿ ಹಲ್ಲೆ ಮಾಡಿರುವ ವಿಚಿತ್ರಕಾರಿ ಘಟನೆ ನಡೆದಿದ್ದು, ವಿಷಯ ತಿಳಿದು ಎಸ್ಪಿ ಡಾ.ರಾಮ ಅರಸಿದ್ಧಿ ಗಂಗಾವತಿ ಧಾವಿಸಿ ವಿಚಾರಣೆ ನಡೆಸಿದ್ದಾರಲ್ಲದೇ ಹಲ್ಲೆಗೆ ಕಾರಣರಾಗಿರುವ ನಾಲ್ವರು ಯುವಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ- ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ ಮನೆ ಹಾಗೂ ಕಾಲೇಜ್ ಗಳಲ್ಲಿ ಪರಿಶೀಲನೆ- ನವಚೇತನ ಕಾಲೇಜಿನಲ್ಲಿ ಕಂತೆ ಕಂತೆ ನೋಟು ಎಣಿಕೆ

ಕಾಂಗ್ರೆಸ್ ಆಡಳಿತದಲ್ಲಿ ಗುಂಡಾ ರಾಜ್ಯ- ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು- ಗಣರಾಜ್ಯೋತ್ಸವದಲ್ಲಿ ಶಾಸಕ ರೆಡ್ಡಿ ಆರೋಪ

ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ- ಕಾಂಗ್ರೆಸ್ಸಿಗೆ ಸೋಲು: ಚಂದ್ರಶೇಖರ ನಾಲತ್ವಾಡ ವಿಷಾದ- ಸುಲಭ ಗೆಲುವ ಮರೆತ ನಾಯಕರು: ಕಾಂಗ್ರೆಸ್ಸಿಗೆ ಹಿನ್ನಡೆ

ಸ್ಥಳೀಯ ಸಂಸ್ಥೆಗಳ ಯೋಜನಾ ಸಮಿತಿ ಸದಸ್ಯರ ಚುನಾವಣೆ- ೬ ಸ್ಥಾನಕ್ಕೆ ೪ ಬಿಜೆಪಿ ೨ ಕಾಂಗ್ರೆಸ್ ಸದಸ್ಯರು ಆಯ್ಕೆ- ಬಿಜೆಪಿ ಮುಖಂಡರಿಗೆ ಹರ್ಷ: ಕಾಂಗ್ರೆಸ್ಸಿಗರಿಗೆ ಸೋಲಿನ ಮುಜುಗರ