

4th February 2026
ಗಂಗಾವತಿ.
ತಾಲೂಕಿನ ಆನೆಗೊಂದಿ ಭಾಗದ ಸರ್ವೇ.ನಂ.193 ವ್ಯಾಪ್ತಿಯ ಸರಜಾರಿ ಗುಡ್ಡದಲ್ಲಿ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೇ ಅತೀಕ್ರಮ ಪ್ರವೇಶ ಮಾಡಿ ಉದ್ದನೆಯ ದಾಕ್ಷಿ ಕಲ್ಲು ಕಂಬಗಳನ್ನು ಸಾಗಾಟ ಮಾಡುವ ಪ್ರಕಣದದಲ್ಲಿ 7 ಆರೋಪಿತರಾದ ಅರುಣ ಚವ್ಹಾಣ, ಗುರಪ್ಪ ಶಿಳ್ಳಿ. ಕೃಷ್ಣಮೂರ್ತಿ@ಮೂರ್ತಿ, ಚನ್ನಬಸಪ್ಪ ಕೆ, ನಾಗರಾಜ @ ತಂಗರಾಜ, ಗೋಪಿಮತ್ತು ಕುಮಾರ ಎಂಬ ಆರೋಪಿತರನ್ನು ದೋಷಿಯೆಂದು ಪರಿಗಣಿಸಿ ಆರೋಪಿತರಿಗೆ ಭಾರತೀಯ ದಂಡ ಸಂಹಿತೆ ಕಲಂ 379 ಅಪರಾಧಕ್ಕೆ 3 ವರ್ಷ ಕಾಲ ಸಾದಾ ಸೆರೆಮನೆವಾಸ ಮತ್ಅತು 10 ಸಾವಿರ ದಂಡ ವಿಧಿಸಿದ್ದಾರೆ..
24.7.2021 ರಂದು ಜಾವ 5-45 ಗಂಟೆಯ ಸುಮಾರಿಗೆ ದಾಳಿ ಮಾಡಿ ಆನೇಗುಂದಿ ಗುಡ್ಡದಲ್ಲಿ ಆರೋಪಿತರು ಕಳ್ಳತನ ಮಾಡಿದ್ದ ಲಾರಿಯಲ್ಲಿದ್ದ ರೂ.24,00/ ಬೆಲೆ ಬಾಳುವ 15 ಟನ್ ದ್ರಾಕ್ಷಿ ಕಲ್ಲು ಕಂಬಗಳನ್ನು ಸಾಗಿಸುತ್ತಿರುವಾಗ ಅಂದಿನ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್ಐಪ್ರಕಾಶ ಉಮಚಗಿ ಜಪ್ತಿ ಮಾಡಿ. ಆರೋಪಿತರ ವಿರುದ್ಧ ಕಲಂ. 447, 379 ಐಪಿಸಿ ಅಡಿ ಪ್ರಕರಣ ದಾಖಲಿಸಿ ಸಾಕ್ಷ್ಯಾಧಾರಗಳ ಸಮೇತ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ ಐ ಪ್ರಕಾಶ ಉಮಚಗಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಆದೇಶಿಸಿದ್ದಾರೆ.
. ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಶ್ರೀಶೈಲ್, ವೆಂಕಟೇಶ, ಅಂಜಿನಿ ಅವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಲ್ಲುಸುವಲ್ಲಿ ಪ್ರಮುಖ ಪಾತ್ರವಹಿದ್ದರು.
undefined

ಬಸಾಪಟ್ಟಣ ಹಿಂದು ಯುವಕನಿಗೆ ಗಂಗಾವತಿ ಮುಸ್ಲಿಂ ಯುವಕರಿಂದ ಹಲ್ಲೆ- ಯುವಕನ ಬಗ್ಗೆ ಅಪಾರ್ಥ: ಮನಸ್ಸೋ ಇಚ್ಛೆ ತಳಿತ- ಮಾರಣಾಂತಿಕ ಹಲ್ಲೆ:ನಾಲ್ವರು ಆರೋಪಿಗಳ ಬಂಧನ

ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ- ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ ಮನೆ ಹಾಗೂ ಕಾಲೇಜ್ ಗಳಲ್ಲಿ ಪರಿಶೀಲನೆ- ನವಚೇತನ ಕಾಲೇಜಿನಲ್ಲಿ ಕಂತೆ ಕಂತೆ ನೋಟು ಎಣಿಕೆ

ಕಾಂಗ್ರೆಸ್ ಆಡಳಿತದಲ್ಲಿ ಗುಂಡಾ ರಾಜ್ಯ- ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು- ಗಣರಾಜ್ಯೋತ್ಸವದಲ್ಲಿ ಶಾಸಕ ರೆಡ್ಡಿ ಆರೋಪ

ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ- ಕಾಂಗ್ರೆಸ್ಸಿಗೆ ಸೋಲು: ಚಂದ್ರಶೇಖರ ನಾಲತ್ವಾಡ ವಿಷಾದ- ಸುಲಭ ಗೆಲುವ ಮರೆತ ನಾಯಕರು: ಕಾಂಗ್ರೆಸ್ಸಿಗೆ ಹಿನ್ನಡೆ

ಸ್ಥಳೀಯ ಸಂಸ್ಥೆಗಳ ಯೋಜನಾ ಸಮಿತಿ ಸದಸ್ಯರ ಚುನಾವಣೆ- ೬ ಸ್ಥಾನಕ್ಕೆ ೪ ಬಿಜೆಪಿ ೨ ಕಾಂಗ್ರೆಸ್ ಸದಸ್ಯರು ಆಯ್ಕೆ- ಬಿಜೆಪಿ ಮುಖಂಡರಿಗೆ ಹರ್ಷ: ಕಾಂಗ್ರೆಸ್ಸಿಗರಿಗೆ ಸೋಲಿನ ಮುಜುಗರ