

16th February 2026

ಗಂಗಾವತಿ.
ಕಳೆದ ಹನ್ನೊಂದು ತಿಂಗಳ ಹಿಂದೆ ತಾಲೂಕಿನ ಸಾಣಾಪುರ ಬಳಿ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಮತ್ತು ಒಬ್ಬ ವಿದೇಶಿ ಪ್ರಜೆಯನ್ನು ಕೊಲೆ ಮಾಡಿರುವ ಪ್ರಕರಣ ಸಾಬೀತಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂರು ಜನ ಆರೋಪಿಗಳು ದೋಷಿ ಎಂದು ಪರಿಗಣಿಸಿ ಮೂರು ಜನ ಆರೋಪಿಗಳಿಗೆ ಗಂಗಾವತಿಯ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಅವರು ಮರಣ ದಂಡನೆಯ ತೀರ್ಪು ನೀಡಿದ್ದಾರೆ. ನ್ಯಾಯಾಲಯದ ಐತಿಹಾಸಿಕ ತೀರ್ಪಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸುತ್ತಿದ್ದಾರೆ.
ಸೋಮವಾರ ಮದ್ಯಾಹ್ನ ಮೂರು ಗಂಟೆಗೆ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ಕಟಕಟೆಯಲ್ಲಿ ನಿಂತಿದ್ದ ಅಪರಾಧಿಗಳು ನ್ಯಾಯಾಧೀಶರ ಆದೇಶ ಹೊರ ಬರುತ್ತಿದ್ದಂತೆ ಅಘಾತಗೊಂಡರಲ್ಲದೇ ಬಿಕ್ಕಿ ಬಿಕ್ಕಿ ಅಳಲು ಸುರು ಮಾಡಿದರು. ಮರಣ ದಂಡನೆ ತೀರ್ಪಿ ನೀಡಿದ ನ್ಯಾಯಾಧೀಶರು ಹೈಕೋರ್ಟ್ಗೆ ಹೋಗುವ ಅವಕಾಶ ಒದಗಿಸಿಕೊಟ್ಟಿದ್ದಾರೆ.
ಗಂಗಾವತಿ ತಾಲೂಕಿನ ಅಂಜನಾದ್ರಿ ಹತ್ತಿರದ ಸಣಾಪುರ ಬಳಿ ವಿದೇಶಿ ಮಹಿಳೆ ಮೇಳೆ ಸಾಮೂಹಿಕ ಅತ್ಯಾಚಾರ ಹಾಗೂ ಒಡಿಶಾದ ಬಿಬಾಸ್ ಕುಮಾರ್ ನಾಯಕ್ ಎಂಬುವವರನ್ನು ೨೧ ವರ್ಷದ ಮಲ್ಲೇಶ ಅಲಿಯಾಸ್ ಹಂದಿ ಮಲ್ಲ, ಸಾಯಿ ಅಲಿಯಾಸ್ ಚೈತನ್ಯ ಸಾಯಿ, ೨೭ ವರ್ಷದ ಶರಣಪ್ಪ ಅಲಿಯಾಸ್ ಶರಣಬಸವರಾಜ ಎಂಬ ಆರೋಪಿಗಳು ವಿದೇಶಿಗರೊಂದಿಗೆ ಹಣಕ್ಕಾಗಿ ಜಗಳ ಮಾಡಿ ಮಹಿಳೆಯ ರಕ್ಷಣೆಗೆ ಬಂದವರನ್ನ ಹತ್ತಿರದ ಕಾಲುವೆಗೆ ತಳ್ಳಿ ವಿದೇಶಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಕಾಲುವೆಗೆ ಬಿದ್ದವರಲ್ಲಿ ಒಡಿಶಾದ ಬಿಭಾಸ್ ಕುಮಾರ್ ನಾಯಕ್ ಸಾವಿಗೀಡಾಗಿದ್ದನು. ಗ್ಯಾಂಗ್ ರೇಪ್, ರಾಬರಿ ಘಟನೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಕೂಲಂಕುಷವಾಗಿ ಪರಿಶೀಲಿಸಿ ಆರೋಪಿಗಳನ್ನು ದೋಷಿ ಎಂದು ಪರಿಗಣಿಸಿ ಮೂರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ ಎಂದು ಸರಕಾರಿ ವಕೀಲೆ ನಾಗಲಕ್ಷ್ಮಿ ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಮಾತನಾಡಿ, ಕಳೆದ ವರ್ಷ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಕಳೆದ ೨೦೨೫ರ ಮಾರ್ಚ್ನಲ್ಲಿ ಘಟನೆಗೆ ಸಂಬಂಧಿಸಿದಂತೆ ಮರ್ಡರ್, ಗ್ಯಾಂಗ್ ರೇಪ್, ರಾಬರಿ ಹಾಗೂ ಅಟೆಂಪ್ಟ್ಟು ಮರ್ಡರ್ ಕೇಸ್ ದಾಖಲಾಗಿತ್ತು. ನಂತರ ೨೪ ಗಂಟೆಗಳಲ್ಲಿ ಇಬ್ಬರನ್ಮು ಅರೆಸ್ಟ್ ಬಂಧಿಸಲಾಗಿತ್ತು. ಮತ್ತು ಒಬ್ಬನನ್ನು ಚೆನ್ನೈ ರೇಲ್ವೆ ಸ್ಟೇಶನ್ನಲ್ಲಿ ಬಂಧಿಸಲಾಗಿತ್ತು. ಮೂರು ಜನ ಆರೋಪಿಗಳ ವಿರುದ್ಧ ೭೫೦ ಪುಟಗಳ ಚಾರ್ಜ್ ಸೀಟ್ನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಧೀಶರು ಮೂರು ಜನ ಆರೋಪವನ್ನು ಸಾಬೀತುಪಡಿಸಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿದ್ದಾರೆ. ಅಂಜನಾದ್ರಿಯಂತಹ ಪವಿತ್ರ ಕ್ಷೇತ್ರದ ಹತ್ತಿರ ಇಂತಹ ಹೀನ ಕೃತ್ಯ ಎಸಗುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ೯ ತಿಂಗಳಲ್ಲಿ ಗಲ್ಲು ಶಿಕ್ಷೆಯ ಆದೇಶ ಹೊರಬಿದ್ದಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿಸಿದೆ ಎಂದರು.
ಬಾಕ್ಸ್:
ನ್ಯಾಯಾಧೀಶರ ತೀರ್ಪು ಸ್ವಾಗತಾರ್ಹ
ನನ್ನ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಐತಿಹಾಸಿಕ ಅಂಜನಾದ್ರಿ ದೇವಸ್ಥಾನವಿದೆ. ಮತ್ತು ಆನೆಗೊಂದಿ, ಹಂಪಿ ಪವಿತ್ರ ಕ್ಷೇತ್ರಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಕಳೆದ ಹನ್ನೊಂದು ತಿಂಗಳ ಹಿಂದೆ ವಿದೇಶಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ಘಟನೆಗೆ ನಮಗೆ ಶಾಖ್ ನೀಡುತ್ತು ಮತ್ತು ಇದು ಅಂತರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿತ್ತು. ಆರೋಪಿಗಳನ್ನು ಬಂಧಿಸಿ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರು ಕೊಲೆಗಾರರ ವಿರುದ್ಧ ಮರಣ ದಂಡನೆ ತೀರ್ಪು ನೀಡಿರುವುದು ಸ್ವಾಗತಿಸುತ್ತೇನೆ. ಇದು ಪ್ರತಿಯೊಬ್ಬ ದುಷ್ಕರ್ಮಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಐತಿಹಾಸಿಕ ಆನೆಗೊಂದಿ ಸುತ್ತ ಇಂತಹ ಘಟನೆ ಮರುಕಳಿಸದಂತೆ ಸರಕಾರ ಎಚ್ಚರಿಕೆವಹಿಸಬೇಕು. ಇಲ್ಲಿ ಖಾಯಂ ಪೊಲೀಸ್ ಠಾಣೆ ಪ್ರಾರಂಭಿಸಲು ನಾನು ಸರಕಾರಕ್ಕೆ ಒತ್ತಾಯಿಸುತ್ತೇನೆ.
ಗಾಲಿ ಜನಾರ್ಧನರೆಡ್ಡಿ, ಶಾಸಕರು, ಗಂಗಾವತಿ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ