

25th February 2026

ಗಂಗಾವತಿ.
ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರ ಕಡಕ್ ವಾರ್ನಿಂಗ್ ಗೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಸಾಣಾಪುರ ಗ್ರಾಮದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಅಕ್ರಮ ರೇಸಾರ್ಟ್ ಗಳನ್ನು ನೆಲಸಮ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ಅನಧಿಕೃತ ರೇಸಾರ್ಟ್ ಗಳನ್ನು ತೆರವು ಮಾಡುವಂತೆ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದ ಹಿನ್ನೆಲ್ಲೆಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಲಾಗಿದೆ.
ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, , ಸಹಾಯಕ ಅರಣ್ಯ ಸಂರಕ್ಷಣ ಅಧಿಕಾರಿ ಅಬ್ದುಲ್ ಖಾದರ್ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಗಂಗಾವತಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಬಸವರಾಜ ಪೂಜಾರ, ನೇತೃತ್ವದಲ್ಲಿ ಸಣಾಪುರ ಗ್ರಾಮದ ಸರ್ವೆ ನಂಬರ್ - 13 ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಮೂರು ರೆಸಾರ್ಟ್ ಗಳನ್ನು ತೆರವು ಮಾಡಿ ಅರಣ್ಯ ಪ್ರದೇಶದ ಭಾಗವನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಗುಂಡಪ್ಪ, ಚಂದ್ರಶೇಖರ, ಜಾವೆದ್ ಬಾಷ, ದೇವಪ್ಪ ಉಮೇಶ್ವರ, ಗಸ್ತು ಅರಣ್ಯ ಪಾಲಕರಾದ ಶಿವಾನಂದ, ಜ್ಞಾನಗೌಡ, ಶಿವಶರಣ ಕೋಳಿ, ಮಹಾಂತೇಶ್, ಲವ ಕುಂಬಾರ ಮಂಜುನಾಥ್ ನರೇದ್ ಶಿವುಕುಮಾರ್ ವಾಲಿ ಶಿವರಡ್ಡಿ ಮತ್ತು ಅರಣ್ಯ ವೀಕ್ಷಕರು ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ.ವಿಜಯ ಕುಮಾರ ಇವರಿಗೆ ‘ಕನ್ನಡ ಕಟ್ಟಾಳು ವಿಶೇಷ ಪ್ರಶಸ್ತಿ ಪ್ರಧಾನ

ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಭಾರತೀಯ ಸೇನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್)

ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಹಾಗೂ ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಬೆಳಗಾವಿ ಲೋಕಾರ್ಪಣೆ

ಕಾಸರಗೋಡು ಕನ್ನಡ ಭವನದಲ್ಲಿ ಈ 22ಭಾನುವಾರ ನಡೆಯಲಿರುವ "ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಎಡನೀರು ಶ್ರೀಗಳಿಂದ ಬಿಡುಗಡೆ.