

26th February 2026

ಕೊಪ್ಪಳ.
ಇದವರೆಗೂ ಕೇವಲ ಗಂಗಾವತಿ ತಾಲೂಕಿನ ಆನೆಗೊಂದಿ, ಸಾಣಾಪುರ ಭಾಗಗಳಲ್ಲಿ ಇರುವ ಅನಧಿಕೃತ ರೇಸಾರ್ಟ್ಗಳಿಗೆ ಮಾತ್ರ ದಾಳಿ ಮಾಡಿ ತೆರವು ಮಾಡುತ್ತಿದ್ದ ಅಧಿಕಾರಿಗಳು ಈಗ ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ, ನಾರಾಯಣಪೇಟೆ ಮತ್ತು ರಾಜಾರಾಮಪೇಟೆ ಹಾಗೂ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಮತ್ತು ಅಯೋಧ್ಯ ಗ್ರಾಮಗಳಲ್ಲಿ ತಲೆ ಎತ್ತಿರುವ ಅನಧಿಕೃತ ರೇಸಾರ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ರೇಸಾರ್ಟ್ಗಳಿಗೆ ನೀಡಿರುವ ಗ್ರಾಪಂ ಪರವಾನಿಗೆ ರದ್ದುಪಡಿಸಿ ಮತ್ತು ವಿದ್ಯುತ್ ಸಂಪರ್ಕ ಕಟ್ ಮಾಡಿ, ಜಿಲ್ಲಾಧಿಕಾರಿಗಳ ಕಡಕ್ ವಾರ್ನಿಂಗ್ ಪಾಲನೆ ಮಾಡಿದ್ದಾರೆ.
ಬುಧವಾರ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ಇರುವ ಅನಧಿಕೃತ ರೇಸಾರ್ಟ್ಗಲನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದರು. ಅದೇ ಗುರುವಾರ ಕೊಪ್ಪಳ ತಾಲೂಕಿನ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಜೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡು ರೆಸಾರ್ಟ್ ಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ, ರೆಸಾರ್ಟ್ಗಳನ್ನು ಬಂದ್ ಮಾಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಜಿಲ್ಲೆ ಮತ್ತು ತಾಲೂಕಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ತಲೆ ಎತ್ತಿರುವ ಅನಧಿಕೃತ ರೇಸಾರ್ಟ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದನ್ನು ಈಗ ಜೆಸ್ಕಾಂ, ಕಂದಾಯ, ಅರಣ್ಯ, ಪ್ರವಾಸೋಧ್ಯಮ ಮತ್ತಿತರ ಇಲಾಖೆ ಅಧಿಕಾರಿಗಳು ಪಾಲನೆ ಮಾಡಿದ್ದಾರೆ. ಆದರೆ ಇದು ಮೇಲಾಧಿಕಾರಿಗಳ ಸೂಚನೆಗೆ ಮಾತ್ರ ಕಣ್ಣೊರೆಸುವ ತಂತ್ರವಾಗದೇ ಜಿಲ್ಲೆಯಲ್ಲಿ ಗಾಂಜಾ, ಅಕ್ರಮ ಮದ್ಯ ಮಾರಾಟ ಮತ್ತಿತರ ಅಕ್ರಮಗಳಿಗೆ ಅತ್ಯಂತ ಪ್ರಸಕ್ರ ಸ್ಥಳವಾಗಿರುವ ಅನಧಿಕೃತ ರೇಸಾರ್ಟ್ಗಳನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಬಲಿಯಾಗದೇ ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಿ ಜಿಲ್ಲೆಯ ಐತಿಹಾಸಿಕ ಚರಿತ್ರೆಯನ್ನು ಜಗತ್ತಿಗೆ ಉಳಿಯುವಂತೆ ಮಾಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ಬಾಕ್ಸ್:
ನ್ಯಾಯಾಲಯಕ್ಕೆ ಕಣ್ಣೊರೆಸುವ ತಂತ್ರವಾಗದಿರಲಿ
ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಪರ್ವತದ ಸುತ್ತ ಆನೆಗೊಂದಿ, ಸಾಣಾಪುರ ಮತ್ತಿತರ ಗ್ರಾಮಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಅನಧಿಕೃತ ರೇಸಾರ್ಟ್ಗಳು ತಲೆ ಎತ್ತಿ ವಿದೇಶಿ ಮತ್ತು ದೇಶದ ಅನೇಕ ನಗರಗಳ ಯುವ ಸಮುದಾಯಕ್ಕೆ ಮೋಜು, ಮಸ್ತಿ ಮಾಡುವ ತಾಣವಾಗಿವೆ. ಈ ರೇಸಾರ್ಟ್ ನಿರ್ಮಿಸಲು ಸರಕಾರದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತದೆ. ಅಧಿಕಾರಿಗಳು ಕೂಡಾ ಇದಕ್ಕೆ ಮೌನ ಸಮ್ಮತಿ ನೀಡುತ್ತಾರೆ. ರೇಸಾರ್ಟ್ ಲಾಭಿಯಲ್ಲಿ ಜನಪ್ರತಿನಿಧಿಗಳ ಮತಬ್ಯಾಂಕ್ ಮತ್ತು ಖ್ಯಾತ ವೈದ್ಯರು, ಪರಿಸರ ಪ್ರೇಮಿಗಳೆಂದು ಬಿಂಬಿಸಿಕೊಂಡವರು, ರಾಜಕೀಯ ಪಕ್ಷಗಳ ಬೆಂಬಲಿಗರೆ ಹೆಚ್ಚು ಇಲ್ಲಿ ರೇಸಾರ್ಟ್ ನಡೆಸುತ್ತಿದ್ದಾರೆ. ಈಗ ಆನೆಗೊಂದಿ ಭಾಗದಲ್ಲಿ ತೊಂದರೆಯಾಗುತ್ತಿರುವುದನ್ನು ಮನಗಂಡ ರೇಸಾರ್ಟ್ ಮಾಲೀಕರು ಕೊಪ್ಪಳ ತಾಲೂಕಿನ ಬಸಾಪುರ, ಶಿವಪುರ ಮತ್ತಿತರ ಗ್ರಾಮಗಳ ಸುತ್ತ ಪ್ರಾರಂಭಿಸಿದ್ದಾರೆ. ಇದರ ಹಿಂದೆ ಗಂಗಾವತಿ ಮತ್ತು ಕೊಪ್ಪಳದ ಎಲ್ಲಾ ರಾಜಕೀಯ ಜನಪ್ರತಿನಿಧಿಗಳ ಭಾಹ್ಯ ಬೆಂಬಲವು ಇದೆ. ಆದರೆ ಕೆಲವು ಪರಿಸರ ವಾದಿಗಳು, ಸ್ವಾಮಿಗಳು ಮತ್ತು ಸಾರ್ವಜನಿಕ ಹಿತಾಶಕ್ತಿಯೊಂದಿಗೆ ನ್ಯಾಯಾಲಯಕ್ಕೆ ಹೋಗಿ ರೇಸಾರ್ಟ್ಗಳ ಕಳ್ಳಾಟದ ಚಿತ್ರವನ್ನು ಬಹಿರಂಗಪಡಿಸಿದ್ದರಿಂದ ನ್ಯಾಯಾಲಯದ ರೇಸಾರ್ಟ್ಗಳನ್ನು ತೆರವು ಮಾಡುವಂತೆ ಸೂಚನೆ ನೀಡುತ್ತದೆ. ಹೀಗಾಗಿ ಅಧಿಕಾರಿಗಳು ನ್ಯಾಯಾಲಯ ಸೂಚನೆ ನೀಡಿದಾಗೊಮ್ಮೆ ಹೋಗಿ ರೇಸಾರ್ಟ್ಗಳ ದಾಳಿ ಮಾಡಿ ಫೋಟೋ ತೆಗೆಸಿಕೊಂಡು ವರದಿ ನೀಡುವುದು ವಾಡಿಕೆಯಾಗಿದೆ. ಆದರೆ ಈಗ ಇರುವ ಜಿಲ್ಲಾಧಿಕಾರಿಗಳು ಇದಕ್ಕೆ ಆಸ್ಪದೆ ಕೊಡದೇ ನ್ಯಾಯಾಲಯಕ್ಕೆ ಕಣ್ಣೊರೆಸುವ ತಂತ್ರವಾಗದೇ ಅನಧಿಕೃತ ರೇಸಾರ್ಟ್ಗಳನ್ನು ಶಾಸ್ವತವಾಗಿ ತೆರವು ಮಾಡಿಸುವಲ್ಲಿ ಮುತುವರ್ಜಿವಹಿಸಬೇಕಿದೆ ಎಂಬುದು ಜನರ ಅಗ್ರಹವಾಗಿದೆ.

ಜಿಲ್ಲಾಧಿಕಾರಿಗಳ ಸೂಚನೆಗೆ ಎಚ್ಚೆತ್ತ ಅರಣ್ಯಾಧಿಕಾರಿಗಳು- ಸಾಣಾಪುರ ಗ್ರಾಮದ ಅಕ್ರಮ ರೇಸಾರ್ಟ್ ಗಳ ನೆಲಸಮ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ.ವಿಜಯ ಕುಮಾರ ಇವರಿಗೆ ‘ಕನ್ನಡ ಕಟ್ಟಾಳು ವಿಶೇಷ ಪ್ರಶಸ್ತಿ ಪ್ರಧಾನ