

27th February 2026
ಗಂಗಾವತಿ.
ಕಳೆದ 2022 ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಆರೋಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಕಾರಟಗಿ ಪಟ್ಟಣದ ಜೆಒಇ ನಗರದ ಮಹ್ಮದ್ ಅಜುರುದ್ದೀನ್ ತಂದೆ ಅಬ್ದುಲ್ ಹಮೀದ್ ಗೆ ಜೀವಿತಾವಧಿ ಶಿಕ್ಷೆ ವಿಧಿಸಿಲಾಗಿದೆ.
ಈ ಕುರಿತು ಶುಕ್ರವಾರ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ತೀರ್ಪು ನೀಡಿದ್ದಾರೆ. ಐಪಿಸಿ ಭಾರತೀಯ ದಂಡ ಸಂಹಿತೆ ರಲ್ಲಿ ಅಪರಾಧ ಪ್ರಕರಣದ ಆರೋಪಿಯಾದ ಮೊಹ್ಮದ್ ಅಜುರುದ್ದೀನ್ ಈತನು ಘಟನೆಯ ಸಮಯದಲ್ಲಿ ಸಿಂಧನೂರ ತಾಲೂಕಿನ ಸಿಂಗಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಆ ಸಮಯಲ್ಲಿ ನೊಂದ ಮಹಿಳೆಗೆ ಪರಿಚಯಾಗಿದ್ದು ಆಕೆಯ ಅಂಗವಿಕಲ ಮಗಳಿಗೆ ಮನೆ ಪಾಠ ಮಾಡಿ ಹೆಚ್ಚಿನ ವಿದ್ಯಾಭಾಸ ಕೊಡುಸುತ್ತೇನೆ. ಸರಕಾರಿ ಸವಲತ್ತುಗಳನ್ನು ಕೊಡುಸುತ್ತೇನೆ ಎಂದು ಹೇಳಿ ಆಕೆಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದು ಅಲ್ಲದೆ ಅದನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅದನ್ನು ಆಕೆಗೆ ತೋರಿಸಿ ಆಕೆ ತನಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಆ ವಿಡಿಯೋವನ್ನು ವೈರಲ್ ಮಾಡುವುದಾಗಿ ಹೆದರಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಆಕೆಯ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಸೀರೆ ಮತ್ತು ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಿದ್ದಲ್ಲದೆ. ನೊಂದ ಮಹಿಳೆಯ ಮೇಲೆ ತಾನು ಪಠ ಸಂಭೋಗದ ವಿಡಿಯೋ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು.
ಆರೋಪಿತನ ವಿರುದ್ಧ ಕಲಂ 376(2) (2) 354, 355, 323, 504, 506, 2 66(E) IT ACT 2000 ಐಪಿಸಿ ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವೆಸಗಿದ್ದು ತನಿಖೆಯಿಂದ ಮತ್ತು ಸಾಕ್ಷಾಧಾರಗಳಿಂದ ದೃಡಪಟ್ಟಿದ್ದರುವ ದೋಷಾರೋಪ ಪಟ್ಟಿಯನ್ನು ಅಂದಿನ ತನಿಖಾಧಿಕಾರಿಯಾಗಿದ್ದ ಕಾರಟಗಿ ಪಿಐ ವಿ.ಎಸ್ ಹಿರೇಮಠ, ಪಿ,ಐ ಕಾರಟಗಿ ಪೊಲೀಸ್ ಠಾಣೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರುಬ ವಿಚಾರಣೆ ನಡೆಸಿ ಪ್ರಕರಣದ ಸಾಕ್ಷಿದಾರರ ಸಾಕ್ಷ್ಯ ಮತ್ತು ದಾಖಲೆಗಳನ್ನು ಪರಿಶೀಲಿಸಿ ಆರೋಪಿಯು ತಪ್ಪಿಸ್ಥ ಎಂದು ತೀರ್ಪು ನೀಡಿ, ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ. 376(2)(ಎನ್) ಐಪಿಸಿ ಅಪರಾಧಕ್ಕೆ ಜೀವಿತಾವಧಿ ಶಿಕ್ಷೆ ಹಾಗೂ 3,00,000=00 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಮತ್ತು ಆರೋಪಿಯು ಸಂತ್ರಸ್ಥ ಮಹಿಳೆಗೆ ರೂ.5.50 ಲಕ್ಷ ಮತ್ತು ಸರಕಾರಕ್ಕೆ ರೂ.50 ಸಾವಿರ ಭರಿಸುವಂತೆ ಆದೇಶ ಮಾಡಿದ್ದಾರೆ.
ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಕಿ ನಾಗಲಕ್ಷ್ಮೀ ಎಸ್ ಅವರು ವಾದ ಮಂಡಿಸಿದ್ದಾರೆ.. ಕಾರಟಗಿ ಪೊಲೀಸ್ ಠಾಣೆಯ ಪೊಲೀಸ್ ಎಎಸ್ ಐ ಅತೀಕ್ ಅಹಮ್ಮದ್, ಸುಬ್ಬಂದಿವಮುತ್ತುರಾಜ ಅವರು ತನಿಖೆಯ ಕಾಲಕ್ಕೆ ತನಿಖಾಧಿಕಾರಿಗೆ ಸಹಕರಿಸಿದ್ದು, ಕಾರಟಗಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಕಾರ್ತಿಕ, ಅಕ್ಷರಸಾಬ್ ಮತ್ತು ವಿಜಯರವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕಷ್ಟು ಸಹಕಾರ ನೀಡಿದ್ದಾರೆ.

ಕೊಪ್ಪಳ ತಾಲೂಕಿನಲ್ಲೂ ಅನಧಿಕೃತ ರೇಸಾರ್ಟ್ಗಳಿಗೆ- ಅಧಿಕಾರಿಗಳ ತಂಡ ದಾಳಿ: ವಿದ್ಯುತ್ ಸಂಪರ್ಕ ಕಟ್- ಜಿಲ್ಲಾಧಿಕಾರಿಗಳ ಆದೇಶ: ಗ್ರಾಪಂ ಪರವಾನಿಗೆ ರದ್ದು