

6th March 2026

ಕೊಪ್ಪಳ.
ಕಳೆದ ಒಂದು ವರ್ಷದ ಹಿಂದೆ ಕಾಡಿ ಬೇಡಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದ ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಪಕ್ಷ ಸಂಘಟನೆಯಲ್ಲಿ ವಿಫಲರಾಗಿದ್ದರಿಂದ ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿದ್ದ ಯಲಬುರ್ಗಾ ತಾಲೂಕಿನ ಯುವ ಮುಖಂಡ ನವೀನ್ಕುಮಾರ ಗುಳಗಣ್ಣನವರ್ಗೆ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಿಡೀರ್ ಬದಲಾವಣೆ ಮಾಡಿ ಶುಕ್ರವಾರ ಆದೇಶ ಮಾಡಿ, ಕೊಪ್ಪಳ ಜಿಲ್ಲೆಯ ಬಿಜೆಪಿ ವಲಯದಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ನವೀನ್ ಗುಳಗಣ್ಣನವರನ್ನು ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಕಳೆದ ವರ್ಷ ಫೇಬ್ರುವರಿಯಲ್ಲಿ ಗುಳಗಣ್ಣನವರನ್ನು ತೆಗೆದು ಬಸವರಾಜ ದಢೇಸೂಗೂರು ಅವರಿಗೆ ಅವಕಾಶ ಕಲ್ಪಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಒಂದು ವರ್ಷವಾದರೂ ದಢೇಸೂಗೂರು ಅವರು ಕೇವಲ ಕನಕಗಿರಿ ಶಾಸಕ ಶಿವರಾಜ ತಂಗಡಗಿ ವಿರುದ್ಧ ಮಾತನಾಡುವುದನ್ನು ಬಿಟ್ಟರೆ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯ ಮಾಡದೇ ಮತ್ತು ಸಂಘಟನೆಗೆ ತಂಡ ಕಟ್ಟದೇ ಮೌನವಹಿಸಿದ್ದರು. ಮತ್ತು ಜಿಲ್ಲೆಯ ಎಲ್ಲಾ ಮಂಡಲ ಅಧ್ಯಕ್ಷರು, ಮುಖಂಡರೊಂದಿಗೆ ಪಕ್ಷ ಸಂಘಟನೆ ಕುರಿತು ಚರ್ಚಿಸದೇ ನಿರ್ಲಕ್ಷವಹಿಸಿದ್ದರು. ಇದನ್ನು ಮನಗಂಡ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಳೆದ ಹದಿನೈದು ದಿನಗಳ ಹಿಂದೆ ರಾಜ್ಯ ಕಾರ್ಯದರ್ಶಿ ಮಾಜಿ ಶಾಸಕ ರಾಜು ಕುಡುಚಿ ಅವರನ್ನು ಕೊಪ್ಪಳಕ್ಕೆ ಕಳುಹಿಸಿ ಸಂಘಟನಾತ್ಮಕ ಸಭೆ ನಡೆಸಿ ಪರಾಮರ್ಶಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದಢೇಸೂಗೂರ ಬಗ್ಗೆ ಜಿಲ್ಲೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಸಂಗತಿಯನ್ನು ಮನಗಂಡು ಮತ್ತು ಮುಂದಿನ ಸ್ಥಳೀಯ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಲಗೊಳಿಸುವುದಕ್ಕಾಗಿ ಯುವ ಮತ್ತು ಕ್ರೀಯಾಶೀಲರಾಗಿರುವ ನವೀನ್ಕುಮಾರ ಗುಳಗಣ್ಣನವರಿಗೆ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ.
ನವೀನ್ಕುಮಾರ ಗುಳಗಣ್ಣನವರನ್ನು ಪುನಃ ಜಿಲ್ಲಾಧ್ಕ್ಷ ಸ್ಥಾ ನೀಡಿರುವುದಕ್ಕೆ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಜಿಲ್ಲಾಧ್ಯಕ್ಷರಾಗಿದ್ದ ಬಸವರಾಜ ದಢೇಸೂಗೂರು ಅವರಿಗೆ ಪಕ್ಷದ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಬಾಕ್ಸ್:
ದಢೇಸೂಗೂರಗೆ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸ್ಥಾನ
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿರುವ ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರಿಗೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಕಳೆದ ಫೇಬ್ರುವರಿಯಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ನವೀನ್ ಗುಳಗಣ್ಣನ್ವರ ಅವರನ್ನು ತೆಗೆದು ದಢೇಸೂಗೂರಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಪಕ್ಷ ಸಂಘಟನೆಯಲ್ಲಿ ದಢೇಸೂಗೂರ ಅಷ್ಟೊಂದು ಸಕ್ರೀಯರಾಗದಿರುವುದು ಮತ್ತು ಅವರು ಕಾರ್ಯಕರ್ತರೊಂದಿಗೆ ಸಂಬಂಧ ಹೊಂದದಿರುವುದರಿಂದ ಈಗ ಪುನಃ ನವೀನ್ ಗುಳಗಣ್ಣ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಬಸವರಾಜ ದಢೇಸೂಗೂರ ಅವರಿಗೆ ರಾಜ್ಯಮಟ್ಟದ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಮಾತು ಈಗ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಸತ್ವ, ತತ್ವ ಆಧಾರಿತ ಆಡಳಿತ ನಮ್ಮದು, ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಹೊರೆಯಲ್ಲ : ಎಚ್ ಕೆ ಪಾಟೀಲ

ಬಸಾಪಟ್ಟಣ ಹಿಂದು ಯುವಕನಿಗೆ ಗಂಗಾವತಿ ಮುಸ್ಲಿಂ ಯುವಕರಿಂದ ಹಲ್ಲೆ- ಯುವಕನ ಬಗ್ಗೆ ಅಪಾರ್ಥ: ಮನಸ್ಸೋ ಇಚ್ಛೆ ತಳಿತ- ಮಾರಣಾಂತಿಕ ಹಲ್ಲೆ:ನಾಲ್ವರು ಆರೋಪಿಗಳ ಬಂಧನ