

10th March 2026

ಗಂಗಾವತಿ.
ನಗರದ ಹಿರಿಯ ನ್ಯಾಯವಾದಿ ಪ್ರಭಾಜರ ಹೊಸಕೇರಿ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂ ಯುವಕರು ಹಲ್ಲೆ ಮಾಡಿರುವ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ. ಹಲ್ಲೆ ಖಂಡಿಸಿ ಮತ್ತು ಹಲ್ಲೆಕೊರರನ್ನು ತಕ್ಷಣ ಬಂಧಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ ಸೇರಿದಂತೆ ನಗರದ ಹಲವು ಗಣ್ಯರು, ವೀರಶೈವ ಸಮಾಜದ ಯುವಕರು, ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ದೌಡಾಯಿಸಿ ಅಹ್ರಹಿಸುತ್ತಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಗರದ ಬಂಬು ಬಜಾರದಲ್ಲಿರುವ ತಮ್ಮ ಪುತ್ರನ ಆಸ್ಪತ್ರೆಯಿಂದ ನ್ಯಾಯವಾದಿ ಪ್ರಭಾಕರ ಹೊಸಕೇರಿ ಅವರು ತಮ್ಮ ಧರ್ಮಪತ್ನಿಯೊಂದಿಗೆ ಹತ್ತಿರವಿರುವ ತಮ್ಮ ಮನೆಗೆ ನಡೆದುಕೊಂಡು ಹೊರಟಿದ್ದ ಸಂರರ್ಭದಲ್ಲಿ ಜನರು ಓಡಾಡುವ ರಸ್ತೆ ಬದಿ ನಿಂತು ಮೂತ್ರ ಮಾಡುತ್ತಿದ್ದ ಯುವಕನಿಗೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ತಿಳಿ ಹೇಳಲು ಹೊದ ಸಂದರ್ಭದಲ್ಲಿ ಯುವಕ ಏಕಾ ಏಕಿ ಪ್ರಭಾಕರ ವಕೀಲರು ಮತ್ತು ಅವರ ಧರ್ಮಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಯುವಕನೊಂದಿಗೆ ಇನ್ನು ಕೆಲವು ಮುಸ್ಲಿಂ ಯುವಕರ ಗುಂಪು ಸೇರಿಕೊಂಡು ಭಯ ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಹಲ್ಲೆಗೊಳಗಾದ ವಕೀಲರು ದೂರು ನೀಡಲು ಠಾಣೆಗೆ ಆಗಮಿಸಿದ್ದಾರೆ. ವಿಷಯ ತಿಳಿದು ರಾತ್ರಿ ಮುಖಂಡರು, ವಕೀಲರ ಬೆಂಬಲಿಗರು ಹಲ್ಲೆಕೊರರ ವಿರುದ್ದ ಕ್ರಮ ಕೈಗೊಳ್ಳುವಂತೆ ಠಾಣೆಯಲ್ಲಿ ಜಮಾಯಿಸಿ ಧರಣಿ ನಡೆಸುತ್ತಿದ್ದಾರೆ. ಪ್ರಕರಣ ಕುರಿತಂತೆ ಪೊಲೀಸರು ಹಲ್ಲೆ ಮಾಡಿರುವ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಾಸ್ತಮರ್ಡಿಗ್ರಾಮದಲ್ಲಿ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ನೂತನ ದ್ವಾರಬಾಗಿಲ ಉದ್ಘಾಟನೆ