

14th March 2026

ಗಂಗಾವತಿ.
ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಗಂಗಾವತಿ ನಾಲ್ಕು ನ್ಯಾಯಾಲಯಗಳ ಅದಾಲತ್ ನಲ್ಲಿ 617 ಪ್ರಕರಣ ಇತ್ಯರ್ಥಹೊಂಡಿದ್ದು, ರೂ. 8.48 ಕೋಟಿ ಸರಕಾರಕ್ಕೆ ಜಮೆಯಾಗಿದೆ. ಮೂವರು ದಂಪತಿಗಳು ಮನಸ್ಥಾಪ ಬಿಟ್ಟು ಒಂದಾಗಿರುವುದು ಇಂದಿನ ಲೋಕ ಅದಾಲತ್ ನ ವಿಶೇಷವಾಗಿದೆ.
ಈ ಕುರಿತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯಿಂದ ಮಾಹಿತಿ ನೀಡಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಅಧ್ಯಕ್ಷರು ಆಗಿರುವ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಸಿವಿಲ್ ನ್ಯಾಯಾಧೀಶ ಗುಡದಪ್ಪ ಬಸವಣೆಪ್ಪ ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಒಟ್ಟು 10884 ಬಾಕಿ ಪ್ರಕರಣಗಳಿದ್ದು ಸದರಿ ರಾಷ್ಟ್ರೀಯ ಲೋಕ ಅದಾಲತನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ, ಜನನ ಮರಣ, ಮತ್ತು ಕ್ರಿಮಿನಲ್ ಕೇಸಸ್ ಗಳನ್ನು ಸೇರಿ 1438 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 51 ಮೋಟಾರು ವಾಹನ ಇತರೆ ಪ್ರಕರಣಗಳು 60 ಒಟ್ಟು 111 ಪ್ರಕರಣಗಳು ಇತ್ಯರ್ಥ. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 20 ಮೋಟಾರು ವಾಹನ 02 ವೈವಾಹಿಕ ಪ್ರಕರಣ 03 ಬ್ಯಾಂಕ ಪ್ರಕರಣ 10 ಚೆಕ್ ಬೌನ್ಸ್ 04 ಇನ್ನಿತರ ಪ್ರಕರಣಗಳು ಸೇತಿ ಒಟ್ಟು 39 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 21 ಚೆಕ್ ಬೌನ್ಸ್ 01 ಕೌಟಂಬಿಕ ದೌರ್ಜನ್ಯ 182 ಜನನ ಮರಣ 86 ಕ್ರೀಮಿನಲ್ ಸೇರಿ ಇನ್ನಿತರ 16 ಪ್ರಕರಣಗಳು ಒಟ್ಟು 306 ಪ್ರಕರಣಗಳು ಇತ್ಯರ್ಥಪಡಿಸಿದೆ. ಮತಗತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 04 ಚೆಕ್ ಬೌನ್ಸ 0 ಕೌಟಂಬಿಕ ದೌರ್ಜನ್ಯ 101 ಜನನ ಮರಣ 33 ಕ್ರೀಮಿನಲ್ ಕೇಸಸ್ ಇನ್ನಿತರ 23 ಪ್ರಕರಣಗಳು ಸೇರಿ ಒಟ್ಟು 161 ಪ್ರಕರಣಗಳು ಇತ್ಯರ್ಥಪಡಿಸಿದ್ದು, ನಾಲ್ಕು ನ್ಯಾಯಾಲಯಗಳು ಸೇರಿ ಲೋಕದ ಅದಾಲತನಲ್ಲಿ ಒಟ್ಟು 617 ಪ್ರಕರಣಗಳು ಇತ್ಯರ್ಥಗೊಂಡಿರುತ್ತದಲವೆ. ಹಾಗೂ ನಾಲ್ಕು ನ್ಯಾಯಾಲಯದಲ್ಲಿ ಸೇರಿ ರೂ. 8,48,25,621.00 ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಸದರಿ ಲೋಕ ಅದಾಲತನಲ್ಲಿ ವಕೀಲರು ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸಂಘದ ಸದಸ್ಯರು ಮತ್ತು ಸರ್ವ ಹಿರಿಯ ಮತ್ತು ಕಿರಿಯ ವಕೀಲರಗಳು ಲೋಕ ಅದಾಲತನಲ್ಲಿ ಭಾಗವಹಿಸಿ ಲೋಕ ಯಶಸ್ವಿಗೊಳಿಸಿದ್ದಾರೆ.
ಬಾಕ್ಸ್
ಅಪಘಾತ ವಿಮೆರೂ.90.00 ಲಕ್ಷ ಪರಿಹಾರ ವಿತರಣೆ
ವ್ಯಾಜ್ಯ ಪೂರ್ವ 1739 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿದೆ. ಸದರಿ ಲೋಕದ ಅದಾಲತನಲ್ಲಿ ಒಟ್ಟು 30 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 25,97,642.00 ಸರ್ಕಾರಕ್ಕೆ ಜಮಾ ಮಾಡಲಾಗಿದೆ. MVC 557/25 ರ ಪ್ರಕರಣದಲ್ಲಿ ಬಿ. ಅಂಜಿನಪ್ಪ ಮತ್ತು ಶ ಸಿದ್ರಾಮಸ್ವಾಮಿ ಆರ್ ಹಿರೇಮಠ ವಕೀಲರು ಇವರು HDFC ERGO Insurance ಕಂಪನಿಯ ಪರವಾಗಿ ಈ ಪ್ರಕರಣದ ಅರ್ಜಿದಾರರು ವಾಯು ವಿವಾಹರಕ್ಕೆ ಹೋಗುವಾಗ ಹಿಂದುಗಡೆಯಿಂದ ಮೋಟರ್ ಸೈಕಲ್ ವಾಹನ ಬಂದು ಅಪಘಾತ ಮಾಡಿದು ಅರ್ಜಿದಾರರು ಗುತ್ತಿಗೆದಾರರಾಗಿದ್ದು ಸದರಿ ಅರ್ಜಿದಾರ ಹುಲುಗಪ್ಪ ತಂದೆ ಸುಬಾಸ್ ಕಂದಕುರರು ಮೃತ ಪಟ್ಟಿರುತ್ತಾರೆ. ಮೃತರ ವಾರಸ್ತುದಾರರಿಗೆ ರಾಷ್ಟ್ರೀಯ ಲೋಕ ಅದಾಲತನಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ರೂ. 90,00,ಲಕ್ಷ ರೂಪಾಯಿಗಳನ್ನು ಪರಿಹಾರ ಧನವಾಗಿ ನೀಡಲಾಯಿತು

ಗಂಗಾವತಿ ಫ್ಯಾನ್ಸಿ ಸ್ಟೋರ್ ನಲ್ಲಿ ನಶೆ ಬರುವ ಟ್ಯಾಬ್ಲೆಟ್ ಮಾರಾಟ: ಪ್ರಕರಣ ದಾಖಲು- ಯುವಕರಿಗೂ ಲಿಂಕ್: ವ್ಯಕ್ತಿಯೋರ್ವನ ಹೇಳಿಕೆ

ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ ಅದಾಲತ್- ರೂ.44.44 ಕೋಟಿ ಮೌಲ್ಯದ 49953 ಪ್ರಕರಣಗಳು ಇತ್ಯರ್ಥ- ಮನಸ್ಥಾಪ ಬಿಟ್ಟು ಒಂದಾದ ಏಳು ದಂಪತಿಗಳು
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಿರುಳ್ಗನ್ನಡ ನಾಡಿನ ಕೀರ್ತಿ ಕೋಟಗಿಗೆ ಅಭಿನಂದನೆಗಳ ಮಹಾಪೂರ

ಹಿರಿಯ ವಕೀಲ ಪ್ರಭಾಕರ ಹೊಸಕೇರಿ ಮೇಲೆ ಮುಸ್ಲಿಂ ಯುವನಿಂದ ಹಲ್ಲೆ÷ಮುಖಂಡರು ಠಾಣೆಗೆ ದೌಡು: ಹಲ್ಲೆಕೊರನನ್ನು ಬಂಧಿಸುವಂತೆ ಅಗ್ರಹ