

14th March 2026

ಗಂಗಾವತಿ.
ನಗರದ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ನಶೆ ಬರುವ ಟ್ಯಾಬ್ಲೆಟ್ ಖರೀದಿಸಿ ಇಂಜಕ್ಷನ್ ರೂಪದಲ್ಲಿ ನಿತ್ಯ ನರಕ್ಕೆ ತೆಗೆದುಕೊಳ್ಳುತ್ತಿರುವ ಕುರಿತು ಶ್ಯಾಮಿಯಾನ್ ಕೆಲಸ ಮಾಡುವ ಕಾರ್ಮಿಕ ಬಹಿರಂಗಪಡಿಸಿದ್ದಾನೆ. ವ್ಯಕ್ತಿಯೋರ್ವನಿಂದ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದ ಹಿಂದೆ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು ಇರುವ ಕುರಿತು ಮಾಹಿತಿ ಲಭ್ಯವಾಗಿದೆ. ಗಂಗಾವತಿಯ ಕೆಲ ಯುವಕರು ಈ ಪ್ಯಾನ್ಸಿ ಸ್ಟೋರ್ ಲ್ಲಿ ನಶೆ ಬರುವ ಟ್ಯಾಬ್ಲೆಟ್ ಖರೀದಿಸುವ ಲಿಂಕ್ ಇದೆ ಎಂಬ ಸಂಗತಿ ಹೊರಬಿದ್ದಿದೆ.
ಶನಿವಾರ ಫಿರ್ಯಾದುದಾರ ನಗರದ ಲಕ್ಷ್ಮಿ ಕ್ಯಾಂಪಿನ ಸಂಗನಗೌಡ ಎಂಬ ವ್ಯಕ್ತಿ ನೀಡಿರುವ ಮಾಹಿತಿ ಆಧರಿಸಿ ಫ್ಯಾನ್ಸಿ ಸ್ಟೋರ್ ಗೆ ದಾಳಿ ಮಾಡಿದ ಪಿಐ ಪ್ರಕಾಶ ಮಾಳಿ ಫ್ಯಾನ್ಸಿ ಸ್ಟೋರ್ ನ ಕಿಶನಕುಮಾರ ಎಂಬ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ, ತನಿಖೆ ಕೈಗೊಂಡಿದ್ದಾರೆ.
ಶಾಮಿಯಾನ ಕಾರ್ಮಿಕನಾಗಿರುವ ಸಂಗನಗೌಡ ಎಂಬ ವ್ಯಕ್ತಿ ನಿತಗಯ ಭಾರವಾದ ಕೆಲಸ ಮಾಡುತ್ತಿದ್ದರಿಂದ ಮೈಕೈ ನೋವು ಬರುತ್ತಿದೆ. ಇದರ ನಿವಾರಣಗೆ ಸ್ನೇಹಿತ ಸೋಹೆಲ್ ನ ಸಲಹೆಯಂತೆ ಫ್ಯಾನ್ಸಿ ಸ್ಟೋರ್ ನಲ್ಲಿ ಮೂರು ನೂರು ರೂಪಾಯಿಗೆ ಎರಡು ಮಾತ್ರೆ ಖರೀದಿಸಿ ಸೇವನೆ ಮಾಡುತ್ತಿದ್ದು, ಇದು ನಿಧಾನವಾಗಿ ಮಾತ್ರೆಗೆ ದಾಸನಾಗಿ ಹೆಚ್ಚಿನ ಕಿಕ್ ಪಡೆಯಲು ಅದನ್ನು ಪುಡಿ ಮಾಡಿ ನೀರಿನಲ್ಲಿ ಕಲಸಿ ನೇರವಾಗಿ ನರಕ್ಕೆ ಸಿರೆಂಜ್ ಮೂಲಕ ತೆಗೆದುಕೊಳ್ಳುತ್ತಿದ್ದು, ಇತ್ತೀಚಿಗೆ ಆಯಾಸವಾಗುವ ಕುರಿತು ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ.
ನಗರದ ದುರ್ಗಾದೇವಿ ಗುಡಿ ಸಮೀಪದ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ನ ಕಿಶನ್ ಕುಮಾರ್ ಎಂಬಾತ 300 ರೂ.ಗೆ 2 ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಷಕಾರಿ ಚಟದಿಂದಾಗಿ ಯುವಕರ ಆರೋಗ್ಯ ಹದಗೆಟ್ಟಿದ್ದು, ಹಣಕ್ಕಾಗಿ ಮನೆಯಲ್ಲೇ ಕಳ್ಳತನ ಮಾಡುವ ಮಟ್ಟಕ್ಕೆ ಇಳಿದಿರುವ ಸಂಗತಿ ಫಿರ್ಯಾದಿದಾರನಿಂದ ಬಹಿರಂಗಗೊಂಡಿದೆ.
ನಗರದ ಸಾಹಿಲ್, ಸೋಹೇಬ್ ಸೇರಿದಂತೆ ಹಲವು ಯುವಕರು ಈ ಮಾತ್ರೆ ಮಾಫಿಯಾ ಜಾಲದಲ್ಲಿ ಸಿಲುಕಿರುವುದು ಪತ್ತೆಯಾಗಿದೆ.
ಬಾಕ್ಸ್
ಮತ್ತು ಬರುವ ಟ್ಯಾಬ್ಲೆಟ್ ಫ್ಯಾನ್ಸಿ ಸ್ಟೋರನಲ್ಲಿ ಇರುವ ವ್ಯಕ್ತಿ ಯುವಕರಿಗೆ ಹಣ ಪಡೆದು ವಿತರಿಸುತ್ತಿರುವ ಸಂಗತಿ ಗಂಭಿರ ಸ್ವರೂಪ ಪಡೆದುಕೊಂಡಿದೆ. ಇದರ ಹಿಂದೆ ಮೆಡಿಕಲ್ ಶಾಫ್ ನ ಮಾಲೀಕರೊಬ್ಬರು ಇರುವ ಶಂಕೆ ಇದೆ. ಈ ಪ್ರಕರಣದಲ್ಲಿ ಮೆಡಿಕಲ್ ಶಾಫಿನ ವ್ಯಕ್ತಿಯನ್ನು ವಿಚಾರಣೆ ನಡೆದಿರುವುದು ತಿಳಿದು ಬಂದಿದೆ. ಆದರೆ ಎಪ್ ಐಆರ್ ನಲ್ಲಿ ಆ ವ್ಯಕ್ತಿಯ ಹೆಸರು ನಮೂದಿಸಿರುವುದು ಅನುಮಾನಕ್ಕೆಡೆ ಮಾಡಿದೆ. ಫ್ಯಾನ್ಸಿ ಸ್ಟೋರ್ ನ ಕಿಶನಕುಮಾರನಿಂದ ಈ ಜಾಲವನ್ನು ಬೇಧಿಸಿ ಬಹಿರಂಗಪಡಿಸಬೇಕಾಗಿದೆ.

ಗಂಗಾವತಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಪ್ರಕರಣ ಇತ್ಯರ್ಥ: ರೂ. 8.48 ಕೋಟಿ ಸರಕಾರಕ್ಕೆ ಜಮೆ- ಮನಸ್ಥಾಪ ಬಿಟ್ಟು ಒಂದಾದ ಮೂವ್ವರು ದಂಪತಿಗಳು

ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ ಅದಾಲತ್- ರೂ.44.44 ಕೋಟಿ ಮೌಲ್ಯದ 49953 ಪ್ರಕರಣಗಳು ಇತ್ಯರ್ಥ- ಮನಸ್ಥಾಪ ಬಿಟ್ಟು ಒಂದಾದ ಏಳು ದಂಪತಿಗಳು
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಿರುಳ್ಗನ್ನಡ ನಾಡಿನ ಕೀರ್ತಿ ಕೋಟಗಿಗೆ ಅಭಿನಂದನೆಗಳ ಮಹಾಪೂರ

ಹಿರಿಯ ವಕೀಲ ಪ್ರಭಾಕರ ಹೊಸಕೇರಿ ಮೇಲೆ ಮುಸ್ಲಿಂ ಯುವನಿಂದ ಹಲ್ಲೆ÷ಮುಖಂಡರು ಠಾಣೆಗೆ ದೌಡು: ಹಲ್ಲೆಕೊರನನ್ನು ಬಂಧಿಸುವಂತೆ ಅಗ್ರಹ