

23rd March 2026

undefined
ಗಂಗಾವತಿ.
ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ ನಿಧನರಾಗಿದ್ದಾರೆ.
63 ವರ್ಷದ ಸಂಕಟಿ ಅವರು, ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಂಗಟಿ ಸೋಮವಾರ ಬೆಳಗಿನ ಜಾವ ಮೂರು ಗಂಟೆಗೆ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರಿಗೆ ಪತ್ನಿ ರುದ್ರಮ್ಮ ಸಂಗಟಿ, ಪುತ್ರರಾದ ಬೆಟ್ಟದೇಶ, ಲಿಂಗೇಶ, ಮಹಾಂತೇಶ, ಪುತ್ರಿಯರಾದ ಕವಿತಾ, ನಂದಿನಿ, ಲಕ್ಷ್ಮಿ ಸೇರಿದಂತೆ ಅಪಾರ ಬಂಧು-ಬಳಗವಿದ್ದಾರೆ.
ಕೊಪ್ಪಳ ತಾಲೂಕಿನವರಾದ ಸಂಗಟಿ ಕಾಂಗ್ರೆಸ್ ಪಕ್ಷದಿಂದ ಎಂಎಲ್ ಸಿಯಾಗಿದ್ದರು. ನಂತರ 2018 ರಲ್ಲಿ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 2023 ರಲ್ಲಿ ಜನಾರ್ಧರೆಡ್ಡಿಗೆ ಬೆಂಬಲಿಸುವ ಮೂಲಕ ಮಾಜಿ ಸಚಿವ ಅನ್ಸಾರಿ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಸರಳ ವ್ಯಕ್ತಿಯಾಗಿದ್ದ ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ಅವರ ನಿಧನಕ್ಕೆ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು ಮತ್ತಿತರು ಸಂತಾಪ ವ್ಯಕ್ತಪಡಿಸಿದ್ದಾರೆ.

ಗಂಗಾವತಿ ಫ್ಯಾನ್ಸಿ ಸ್ಟೋರ್ ನಲ್ಲಿ ನಶೆ ಬರುವ ಟ್ಯಾಬ್ಲೆಟ್ ಮಾರಾಟ: ಪ್ರಕರಣ ದಾಖಲು- ಯುವಕರಿಗೂ ಲಿಂಕ್: ವ್ಯಕ್ತಿಯೋರ್ವನ ಹೇಳಿಕೆ