

26th March 2026

ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನದ ಹುಂಡಿ ಹಣ ಎಣಿಜೆ ಮಾಡಿದ್ದು, 51 ದಿನದಲ್ಲಿ ರೂ.31.30 ಲಕ್ಷ ಸಂಗ್ರಹವಾಗಿದೆ.
ಗುರುವಾರ ದೇವದ್ಥಾನದಲ್ಲಿ ಗಂಗಾವತಿ ತಹಶೀಲ್ದಾರ ಹಾಗೂ ಅಂಜನಾದ್ರಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿಶ್ವನಾಥ ಮುರಡಿ ಅವರ ಆದೇಶದಂತೆ ಹುಂಡಿ ತೆರೆಯಲಾಗಿದ್ದು. (ದಿ.03/02/2026 ರಿಂದ 26/03/2026 ರವರೆಗೆ ಒಟ್ಟು 51 ದಿನಗಳ ಅವಧಿಯಲ್ಲಿ) ಒಟ್ಟು ರೂ.31,30,730/- ಸಂಗ್ರಹವಾಗಿರುತ್ತದೆ. ವಿದೇಶಿ ನೋಟುಗಳು, ನಾಣ್ಯಗಳು (ನೇಪಾಳ,ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾ,ದುಬೈ)ಹುಂಡಿಯಲ್ಲಿ ಸಂಗ್ರವಾಗಿರುವುದು ವಿಶೇಷವಾಗಿದೆ.
ಎಣಿಕೆ ಸಂದರ್ಭದಲ್ಲಿ ತಹಶೀಲ್ದಾರ ವಿಶ್ವನಾಥ್ ಮುರುಡಿ, ಗ್ರೇಡ್-2 ತಹಶೀಲ್ದಾರ ಮಹಾಂತಗೌಡ, ಶಿರಸ್ತೇದಾರ ಪ್ರಕಾಶ್ ನಾಯಕ್, ಕಂದಾಯ ನೀರಿಕ್ಷಕ ಮರಳಿ ಹಾಲೇಶ್, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗಾಯಿತ್ರಿ , ಸುಧಾ, ಕವಿತಾ ಎಸ್, ಕವಿತಾ, ಮೊಹಮ್ಮದ್ ರಫೀಕ್, ಶ್ರೀರಾಮ ಜೋಶಿ, ಮಹಾಲಕ್ಷ್ಮೀ ಮಂಜುನಾಥ್ ದುಮ್ಮಡಿ, ಚೆನ್ನಪ್ಪ, ವೀರಯ್ಯ, ರಾಜು ಭಜಂತ್ರಿ, ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ, ಸಾಣಾಪುರ ಮ್ಯಾನೇಜರ್ ನವೀನ್ ಕುಮಾರ ಮತ್ತು ಸಿಬ್ಬಂದಿಗಳು, ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು, ಗಂಗಾವತಿ ಗ್ರಾಮ ಸಹಾಯಕರು ಇದ್ದರು.
ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ಎಣಿಕೆ ನಡೆದಿದೆ.
ಕಳೆದ ಫೆ. 3 ರಂದು ಹುಂಡಿ ತೆಗೆದಾಗ ರೂ 68,85,965/- ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ದೇಶನೂರಿನ ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ನೀಡಿದ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿಗೆ ಸತ್ಕಾರ

ಮಾಜಿ ಶಾಸಕನ ಪುತ್ರನ ಹತ್ಯೆಗೆ ಅನೈತಿಕ ಸಂಬಂಧ ಕಾರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ

ಪ್ರಣವಾನಂದ ಶ್ರೀಗಳ ಹೇಳಿಕೆಗೆ ರೆಡ್ಡಿ ಶ್ರೀನಿವಾಸ ಆಕ್ರೋಶ- ಸಚಿವ ತಂಗಡಿವರಿಂದ ಅನ್ಯಾಯವಾಗಿಲ್ಲ-ಸಚಿವರ ಮನೆ ಮುಂದೆ ಪ್ರತಿಭಟನೆ ನಿರ್ಧಾರಕ್ಕೆ ಖಂಡನೆ