

10th April 2026

ಯಲಬುರ್ಗಾ.
ಪಟ್ಟಣದಲ್ಲಿ ಆಯೋಜಿಸಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಸುವರ್ಣ ಮಹೋತ್ಸ ಆಚರಣೆ ನಿಮಿತ್ಯ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧೀಶ ಶ್ರೀ ಸುಬುದೇಂದ್ರತೀರ್ಥ ಶ್ರೀ ಪಾದಂಗಳವರು ಆಗಮಿಸಿದ್ದು, ಭವ್ಯ ಶೋಭಾಯಾತ್ರೆ ಮೂಲಕ ಪಟ್ಟದ ಭಕ್ತರು ಮತ್ತು ರಾಯರ ಮಠದ ಸೇವಾ ಸಮಿತಿ ಪದಾಧಿಕಾರಿಗಳು ಭವ್ಯ ಸ್ವಾಗತ ನೀಡಿದರು.
ಗುರುವಾರ ಸಂಜೆ ಮಂತ್ರಾಲಯದಿಂದ ಕುಷ್ಟಗಿ ಮಾರ್ಗವಾಗಿ ಯಲಬುರ್ಗಾ ಪಟ್ಟಕ್ಕೆ ಆಗಮಿಸಿದ ಶ್ರೀಗಳನ್ನು ಜೋಶಿ ಗಲ್ಲಿಯ ಪಾಂಡುರಂಗ ದೇವಸ್ಥಾನದಿಂದ ಸಾರೋಟನಲ್ಲಿ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಿಂದ ಅಪ್ಪು ವೃತ್ತ, ಚನ್ನಮ್ಮ ವೃತ್ತದ ಮೂಲಕ ರಾಯರ ಮಠದವರೆಗೆ ಕರೆ ತರಲಾಯಿತು. ದಾರಿಯುದ್ದಕ್ಕು ಶ್ರೀಗಳು ಸಾರೋಟದಿಂದಲೇ ಭಕ್ತರಿಗೆ ಆಶೀರ್ವದಿಸಿದರು.
ಮೆರವಣಿಗೆಯ ನಂತರ ಶ್ರೀಗಳು ಮಠದ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಠದ ಸೇವಾ ಸಮಿತಿ ಮತ್ತು ಭಕ್ತರಿಂದ ತುಲಾಭಾರ ನಡೆಸಲಾಯಿತು. ಪಂಡಿತರಿಂದ ಉಪನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಯಲಬುರ್ಗಾ ಶ್ರೀ ರಾಘವೇಂದ್ರಸ್ವಾಮಿ ಮಠದ ಸೇವಾ ಸಮಿತಿ ಅಧ್ಯಕ್ಷ ಸುನಿಲ್ ಕುಲಕರ್ಣಿ, ವಸಂತರಾವ್ ಕುಲಕರ್ಣಿ, ಸುಧೀರ ಕೊರ್ಲಳ್ಳಿ, ರಾಘವೇಂದ್ರಾಚಾರ ಗುನ್ನಾಳ, ಜಗನ್ನಾಥರಾವ್ ದೇಸಾಯಿ, ಅಪ್ಪಣ್ಣ ಜೋಶಿ ಗುನ್ನಾಳ, ಗೋವಿಂದಾಚಾರ, ಗುರುರಾಜಾಚಾರ ಪುರೋಹಿತ, ಶೇಷಗಿರಿ ಪಠವಾರಿ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕ ಅಧ್ಯಕ್ಷೆ ಸಂತೋಷಿಮಾ ಜೋಶಿ, ಕೊಪ್ಪಳದ ಪವಮಾನ ಭಜನಾ ಮಂಡಳಿ, ಸತ್ಯಧಾನ ಭಜನಾ ಮಂಡಳಿ, ಮಾರುತಿ ಭಜನಾ ಮಂಡಳಿ, ಪಾಂಡುರಂಗ ಭಜನಾ ಮಂಡಳಿ, ಶಾರದಾ ಶಂಕರ ಭಜನಾ ಮಂಡಳಿ, ರಮಾ ಭಜನಾ ಮಂಡಳಿ ಕುಷ್ಟಗಿ, ಅಡವಿ ಮುಖ್ಯಪ್ರಾಣ ಭಜನಾ ಮಂಡಳಿ ಕುಷ್ಟಗಿ, ಭಾರತಿ ಭಜನಾ ಮಂಡಳಿ ಯಲಬುರ್ಗಾ, ಶಾರದಾ ಭಜನಾ ಮಂಡಳಿ ಕುಕನೂರ ಸೇರಿದಂತೆ ವಿಬಿಧ ಭಸಜಾ ಭಜಂತ್ರಿ, ಬ್ರಾಹ್ಮಣ ಮತ್ತು ವಿವಿಧ ಸಮಾಜದ ಮುಖಂಡರು, ಯುವಕರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. . ನಂತರ ಶ್ರೀಗಳು ಶ್ರೀಮಠದ ಸುವರ್ಣ ಮಹೋತ್ಸವ ಉದ್ಘಾಟಿಸಿ, ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.
ಶುಕ್ರವಾರ ಬೆಳೆಗ್ಗೆ ಶ್ರೀಗಳಿಗೆ ಸಾಮೂಹಿಕ ಪಾದಪೂಜೆ ನಡೆಯಲಿದ್ದು, ನಂತರ ಶ್ರೀಗಳು ಮೂಲ ರಾಮದೇವರ ಸಂಸ್ಥಾನ ಪೂಜೆ ನೇರವೆರಿಸಿ ಭಕ್ತರಿಗೆ ಆಶೀರ್ವದಿಸಲಿದ್ದಾರೆ.

ಪಿಯುಸಿ ಫಲಿತಾಂಶ ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳಕ್ಕೆ ಮೊದಲನೇ ಸ್ಥಾನ:12,189 ವಿದ್ಯಾರ್ಥಿಗಳು ಪಾಸ್- ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅಭಿನಂದನೆ