

10th April 2026

undefined
ಯಲಬುರ್ಗಾ
ರಾಯರ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರುವ ಮಂತ್ರಾಲಯ ಶ್ರೀ ಸುಬುಧೇಂದ್ರ ಸ್ವಾಮಿಗಳನ್ನು ಪಟ್ಟಣದ ಮುರಡಿ ಶ್ರೀಧರ ಮಠದ ಹಿರೇಮಠ ಸ್ವಾಮಿಗಳು ಸ್ವಾಗತಿಸಿ ಗೌರವ ಸಮರ್ಪಣೆ ಮಾಡಿದರು.
ಶುಕ್ರವಾರ ಸಂಜೆ ಪಾಂಡುರಂಗ ದೇವಸ್ಥಾನದಿಂದ ಮಂತ್ರಾಲಯ ಶ್ರೀಗಳನ್ನು ಭವ್ಯ ಶೋಭಾಯಾತ್ರೆ ಮೂಲಕ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಗಮಿಸಿದ ಮುರಡಿಮಠದ ಸ್ವಾಮಿಗಳು ಮಂತ್ರಾಲಯ ಶ್ರೀಗಳಿಗೆ ಫಲ ಪುಷ್ಪ ನೀಡಿ ಗೌರವಿಸಿದರು. ಕುಶಲೋಪರಿ ವಿಚಾರಿಸಿದ ಸುಬುಧೇಂದ್ರ ಶ್ರೀಗಳು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಲು ಅಹ್ವಾನ ನೀಡಿದರು.

ಬಾಲ್ಯ ವಿವಾಹ ಪ್ರಕರಣ: ಮೂವ್ವರಿಗೆ ಜೈಲು ಶಿಕ್ಷೆ- ಗಂಗಾವತಿ ನ್ಯಾಯಾಲಯದಲ್ಲಿ ತೀರ್ಪು ಪ್ರಕಟ