

10th April 2026

ಯಲಬುರ್ಗಾ
ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧೀಪತಿ ಶ್ರಿ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ತುಲಾಭಾರ ಸೇವೆ ಸಲ್ಲಿಸಿದರು.
ಗುರುವಾರ ರಾತ್ರಿ ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಬಸವರಾಯರೆಡ್ಡಿ ಅವರು ಮಂತ್ರಾಲಯ ಸ್ವಾಮಿಗಳಿಗೆ ತುಲಾಭಾರ ಸೇವೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ರಾಯರ ಮಠದ ಸೇವಾ ಸಮಿತಿ ಅಧ್ಯಕ್ಷ ಸುನಿಲ್ ಕುಲಕರ್ಣಿ, ಸುವರ್ಣ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರಾಚಾರ ಗುನ್ನಾಳ ದಂಪತಿಗಳು, ಗೋವಿಂದಾಚಾರ, ಮುಖಂಡ ಸುಧೀರ ಕೊರ್ಲಹಳ್ಳಿ, ಅಪ್ಪಣ್ಣ ಗುನ್ನಾಳ ಮತ್ತಿತರರು ಇದ್ದರು. ನಂತರ ಮಂತ್ರಾಲಯ ಮಠದ ಪಂಡಿತರಾದ ವಾದಿರಾಜ ಆಚಾರ ಉಪನ್ಯಾಸ ನೀಡಿ, ರಾಯರನ್ನು ಸ್ತೋತ್ರದ ಮೂಲಕ ನಿತ್ಯ ಪಠಿಸಿ ಸ್ಮರಿಸುವ ಮೂಲಕ ಭಕ್ತರನ್ನು ಗುರುಗಳು ಸದಾ ಕಾಯುತ್ತಾರೆ. ಭಕ್ತರಿಗೆ ವೆಂಕಟೇಶಸ್ವಾಮಿ ತಂದೆ ಇದ್ದಂತೆ. ರಾಯರ ತಾಯಿಯಿದ್ದಂತೆ. ರಾಯರು ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಅಂತ ರಾಯರು ಯಲಬುರ್ಗಾ ವೃಂದಾವನದಲ್ಲಿ ಐವತ್ತು ವರ್ಷಗಳಿಂದ ನೆಲೆಸಿದ್ದಾರೆ. ಐವತ್ತು ವರ್ಷದ ಈ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶ್ರೀ ಸುಬುಧೇಂದ್ರ ಶ್ರೀಗಳು ಸಾಕ್ಷಿಕರಿಸಿದ್ದಾರೆ ಎಂದರು.

ಯಲಬುರ್ಗಾ ಪಟ್ಟಣಕ್ಕೆ ಮಂತ್ರಾಲಯ ಶ್ರೀಗಳ ಆಗಮನ- ಶೋಭಾಯಾತ್ರೆ ಮೂಲಕ ಶ್ರೀಗಳಿಗೆ ಭವ್ಯ ಸ್ವಾಗತ

ಪಿಯುಸಿ ಫಲಿತಾಂಶ ಕಲ್ಯಾಣ ಕರ್ನಾಟಕದಲ್ಲಿ ಕೊಪ್ಪಳಕ್ಕೆ ಮೊದಲನೇ ಸ್ಥಾನ:12,189 ವಿದ್ಯಾರ್ಥಿಗಳು ಪಾಸ್- ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅಭಿನಂದನೆ