

18th April 2026

ಕೊಪ್ಪಳ.
ದೇಶದ ಹಿಂದುಳಿದ ಮಹಿಳೆಯರು ಸಹ ಸಂಸದರಾಗಿ ದೇಹಲಿ ಸಂಸತ್ ಭವನಕ್ಕೆ ಹೋಗುವಂತಹ ಮಹತ್ತರವಾದ ಮಹಿಳಾ ಮೀಸಲಾತಿ ಕಾನೂನುನ್ನು ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಸಾಂವಿಧಾನಿಕವಾಗಿ ಕಾಯ್ದೆಯನ್ನು ತರಲು ಮುಂದಾಗಿತ್ತು. ಆದರೆ ರಾಹುಲ್ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ಕಾಯ್ದೆ ವಿರುದ್ಧವಾಗಿ ಮತ ಹಾಕಿ ಅಡ್ಡಿಪಡಿಸಿ ಸಾಮಾನ್ಯ ಮಹಿಳೆಯರು ಅಧಿಕಾರಕ್ಕೆ ಬರುವುದಕ್ಕೆ ಅಡ್ಡಿಪಡಿಸಿದೆ. ಕಾಂಗ್ರೆಸ್ ಪಕ್ಷ ದೇಹಲಿಯಲ್ಲಿ ಗಾಂಧಿ ಕುಟುಂಬದ ಮಹಿಳೆಯರು ಇರಬೇಕು ಮತ್ತು ಕೊಪ್ಪಳದಲ್ಲಿ ಹಿಟ್ನಾಳ್ ಕುಟುಂಬದ ಮಹಿಳೆಯರು ಮಾತ್ರ ರಾಜಕೀಯ ಅಧಿಕಾರಕ್ಕೆರಬೇಕೆಂದು ಬಯಸುತ್ತಿದೆ. ಇದು ಖಂಡನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕಿ ಹೇಮಲತಾ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸಂಸತ್ತಿನಲ್ಲಿ ಮಹಿಳಾ ಮಿಸಲಾತಿ ಕಾಯ್ದೆ ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಮತ ಹಾಕಿ ಕಾಯ್ದೆಯನ್ನು ಸೋಲಿಸಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮುಂಬರುವ ೨೦೨೯ರ ಲೋಕಸಭೆ ಚುನಾವಣೆ ಹೊತ್ತಿಗೆ ಶೇ.೩೩ ರಷ್ಟು ಮಹಿಳೆಯರು ದೇಶದ ಸಂಸತ್ತಿನಲ್ಲಿ ಕುಳಿತು ಅಧಿಕಾರ ನಡೆಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರಧಾನಿ ಮೋದಿ ಅವರು ನಾರಿಶಕ್ತಿ ವಂದನಾ ಕಾಯ್ದೆಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಲು ಹೊರಟಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯ ದಿನ ದೇಶದ ಐತಿಹಾಸಿಕ ಮಹಿಳಾ ಮೀಸಲಾತಿ ಜಾರಿಯಾಗುವುದನ್ನು ದೇಶದ ಸಾಮಾನ್ಯ ಮಹಿಳೆಯರು ಅತ್ಯಂತ ಸಂಭ್ರಮದಿಂದ ಕಾಯುತ್ತಿದ್ದರು. ಆದರೆ ಮಹಿಳೆಯರ ಸಂಭ್ರಮಕ್ಕೆ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬದ ನಾಯಕರು ಮತ್ತು ಇಂಡಿಯಾ ಕೂಟದ ವಿರೋಧ ಪಕ್ಷ ಇದರ ವಿರುದ್ಧವಾಗಿ ನಡೆದುಕೊಂಡು ಕಾಯ್ದೆಗೆ ಸೋಲುಂಟು ಮಾಡಿದ್ದಾರೆ. ಇದರಿಂದ ನಮ್ಮಂತಹ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಅತ್ಯಂತ ನೋವ್ವಾಗಿದೆ. ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಬರುತ್ತಿದೆ. ಕಾಂಗ್ರೆಸ್ ಪಕ್ಷ ಮಹಿಳೆಯ ವಿರೋಧಿ ಪಕ್ಷವೆಂಬುದು ಸಾಭೀತಾಗಿದೆ. ಹೀಗಾಗಿ ಕಾಂಗ್ರೆಸ್ಸಿನ ಕರಳಾ ಮುಖ ಈಗ ಬಹಿರಂಗವಾಗಿದೆ ಎಂದು ಹೇಮಲತಾ ನಾಯಕ ಕಿಡಿ ಕಾರಿದರು.
ಮುಂದುವರೆದು ಮಾತನಾಡಿದ ಅವರು ನಾರಿಶಕ್ತಿ ವಂದನ್ ಕಾಯ್ದೆ ಜಾರಿಯಾಗಿದ್ದರೆ ದೇಶದುದ್ದಕ್ಕೂ ಸಾಮಾನ್ಯ ಕುಟುಂಬದ ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರುತ್ತಿದ್ದರು. ಮೋದಿ ಅವರು ಪ್ರಧಾನಿಯಾದಾಗಿನಿಂದ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡುವ ಕೆಲಸ ಮಾಡಿದ್ದಾರೆ. ಉದಾಹರಣೆಗೆ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ, ಸುಖನ್ಯಾ ಸಮೃದ್ಧಿ ಯೋಜನೆ, ಮಹಿಳೆಯರಿಗಾಗಿ ಉಜ್ವಲ್ ಯೋಜನೆ, ಜನ್ಧನ್ ಖಾತೆ ಮಾಡಿಸಿ ಮಹಿಳೆಯರು ಸ್ವಾವಲಂಬಿಗಳಾಗಿ ಬ್ಯಾಂಕ್ ಮೂಲಕ ಹಣಕಾಸು ವ್ಯವಹಾರ ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ. ದೇಶದ ಪ್ರತಿಯೊಬ್ಬ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಬರಬೇಕೆಂಬುದು ಬಿಜೆಪಿಯ ಪ್ರಮುಖ ಉದ್ದೇಶವಾಗಿದೆ. ಈಗ ರಾಜಕೀಯದಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕೆಂಬ ಕಾನೂನು ಅಧಿಕೃತವಾಗಿ ಜಾರಿ ಮಾಡಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಇದನ್ನು ವಿರೋಧಿಸಿ ಮಹಿಳೆಯರ ಬಗ್ಗೆ ನಿಷ್ಕಾಳಜಿ ಇರುವುದನ್ನು ತೊರಿಸಿಕೊಟ್ಟಿದೆ. ಸಾಮಾನ್ಯ ಕುಟುಂಬದ ಮಹಿಳೆಯಾಗಿದ್ದ ನನ್ನನ್ನು ಬಿಜೆಪಿ ಎಂಎಲ್ಸಿಯಂತಹ ಉನ್ನತ ಸ್ಥಾನ ನೀಡಿ ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಕಾಂಗ್ರೆಸ್ ಪಕ್ಷ ಕೇವಲ ಒಂದೇ ಕುಟುಂಬದ ಮಹಿಳೆಯರು ಇರಬೇಕೆಂಬ ಉದ್ದೇಶ ಹೊಂದಿದೆ. ಇದಕ್ಕೆ ಸಂಸದ ರಾಜಶೇಖರ ಹಿಟ್ನಾಳ್ ಪ್ರಮುಖ ಸಾಕ್ಷಿಯಾಗಿದ್ದು, ತಮ್ಮ ಪತ್ನಿಗೆ ಮಾತ್ರ ರಾಜಕೀಯಕ್ಕೆ ತರುವ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಆದರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಾಮಾನ್ಯ ಮಹಿಳೆಯರನ್ನು ದೂರ ಮಾಡುತ್ತಿದ್ದಾರೆ. ಹೀಗಾಗಿ ಅವರು ಸಹ ನಿನ್ನೆ ಸಂಸತ್ತಿನಲ್ಲಿ ಮಹಿಳಾ ಮಿಸಲಾತಿ ಕಾಯ್ದೆ ವಿರುದ್ಧ ಮತ ಹಾಕಿ ಜಿಲ್ಲೆಯ ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಕೇವಲ ಮಹಿಳೆಯರಿಗೆ ಮಾತ್ರವಲ್ಲ ದೇಶಕ್ಕೆ ಅಪಮಾನ ಮಾಡಿದೆ. ಇಂತಹ ಪಕ್ಷದ ನೀತಿಯನ್ನು ನಾನು ಖಂಡಿಸುತ್ತೇನೆ ಎಂದು ಗುಡುಗಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ವಿರೇಶ ಸಜ್ಜನ್, ನಗರ ಅಧ್ಯಕ್ಷ ಅಮರೇಶ ಇದ್ದರು.
ಬಾಕ್ಸ್:
ಕಾಂಗ್ರೆಸ್ಸಿನ ಕರಾಳ ಮುಖ ಬಹಿರಂಗ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರ ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ಮಾಡಲು ಮುಂದಾದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಸದಾ ವಿರೋಧಿಸುತ್ತಾ ಬರುತ್ತಿದ್ದು, ನಿನ್ನೆಯ ಮಹತ್ವವಾಗಿದ್ದ ಮಹಿಳಾ ಮೀಸಲಾತಿ ಕಾಯ್ದೆಯನ್ನು ವಿರೋಧಿಸಿ ಕಾಂಗ್ರೆಸ್ ತನ್ನ ಕರಾಳ ಮುಖವನ್ನು ಬಹಿರಂಗಪಡಿಸಿದೆ.
ಹೇಮಲತಾ ನಾಯಕ, ಎಂಎಲ್ಸಿ, ಕೊಪ್ಪಳ.

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ

ಕಾಂಗ್ರೆಸ್ ಮಹಿಳೆಯರನ್ನು ಗ್ಯಾರಂಟಿಗೆ ಸಿಮೀತಗೊಳಿಸಿದೆ- ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಆರೋಪ

2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಎಚ್.ಕೆ. ಪಾಟೀಲ

ನವೀನ್ ಗುಳಗಣ್ಣನಗೆ ಮತ್ತೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ- ಪಕ್ಷ ಸಂಘಟನೆಯಲ್ಲಿ ವಿಫಲ: ದಢೇಸೂಗೂರಗೆ ಕೊಕ್