

18th April 2026

ಕೊಪ್ಪಳ.
ಮಹಿಳೆಯರು ಈ ದೇಶದ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಬೇಕೆಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಾರಿಶಕ್ತಿ ವಂದನ್ ಬಿಲ್ ತರಲು ಹೊರಟಿದ್ದರು. ಆದರೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಬಿಲ್ ವಿರುದ್ಧ ಮತ ಹಾಕಿ ಮಹತ್ವಾಕಾಂಕ್ಷಿ ಕಾಯ್ದೆ ವಿರುದ್ಧ ನಡೆದುಕೊಂಡು ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಸಾಮಾನ್ಯ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ವಿರೋಧಿಸಿದೆ. ಕೇವಲ ಮಹಿಳೆಯರಿಗೆ ರೂ.೨೦೦೦, ಉಚಿತ ಬಸ್ ಪ್ರಯಾಣದ ಗ್ಯಾರಂಟಿಗೆ ಸಿಮೀತಗೊಳಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕಕೇರಿ ಆರೋಪಿಸಿದರು.
ಸಂಸತ್ತಿನಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಮಹಿಳಾ ಮಸೂಧೆ ವಿರೋಧಿಸಿರುವ ಕುರಿತು ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಮತದಾನಕ್ಕೆ ಮಾತ್ರ ಬಳಸಿಕೊಳ್ಳುವ ಛಾಳಿ ಈಗಲು ಮುಂದುವರೆಸುತ್ತಿದೆ. ಆರ್ಥಿಕವಾಗಿ ಬಲವಿಲ್ಲದ ಮಹಿಳೆಯರು ಸಹ ಮೀಸಲಾತಿಯಿಂದ ಪ್ರಮುಖ ರಾಜಕೀಯ ಸ್ಥಾನ ಪಡೆಯಲು ನಾರಿಶಕ್ತಿ ವಂದನ್ ಕಾಯ್ದೆ ಅನುಕೂಲವಾಗುತ್ತಿತ್ತು. ರಾಜಕೀಯವಾಗಿ ಮಹಿಳೆಯರು ಮುಂದೆ ಬರಲು ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಅಧಿಕಾರ ನಡೆಸಿದ ಎಪತ್ತು ವರ್ಷದಲ್ಲಿ ಮಹಿಳಾ ಮೀಸಲಾತಿ ಜಾರಿ ಮಾಡದ ಕಾಂಗ್ರೆಸ್ ಈಗ ಬಿಜೆಪಿಯ ಕೇಂದ್ರ ಸರಕಾರದ ಮೀಸಲಾತಿಯನ್ನು ವಿರೋಧಿಸಿದೆ. ಕಾಂಗ್ರೆಸ್ ಪಕ್ಷದವರು ತಮ್ಮ ಕುಟುಂಬದ ಮಹಿಳೆಯರನ್ನು ಮಾತ್ರ ರಾಜಕಾರಣದಲ್ಲಿ ತರುವ ಕೆಲಸ ಮಾಡುತ್ತಿದೆ. ಉದಾಹರಣೆಗೆ ದೆಹಲಿಯಲ್ಲಿ ಗಾಂಧಿ ಕುಟುಂಬದ ಮಹಿಳೆಯರು ಮಾತ್ರ ಅವಕಾಶ ನೀಡಿದೆ. ಅದೇ ರೀತಿ ಕೊಪ್ಪಳದಲ್ಲು ಹಿಟ್ನಾಳ್ ಕುಟುಂಬದ ಮಹಿಳೆಯರು ಮಾತ್ರ ರಾಜಕೀಯಕ್ಕೆ ಬರಬೇಕೆಂಬ ಉದ್ದೇಶ ಹೊಂದಿರುವುದು ಈಗಾಗಲೇ ಸಾಬೀತಾಗಿದೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಶರಣು ತಳ್ಳಿಕೇರಿ ಅವರು ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದೆ ಗವಿಸಿದ್ಧಪ್ಪನ ಕೊಲೆಯಾದಾಗ ಮೌನವಹಿಸಿದ್ದ ಸಂಸದ, ಶಾಸಕರು ಈಗ ಲವ್ ಜೀಹಾದ್ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ವಿರೇಶ ಸಜ್ಜನ್, ನಗರ ಅಧ್ಯಕ್ಷ ಅಮರೇಶ ಇದ್ದರು.
ಬಾಕ್ಸ್:
ಮಹಿಳಾ ಮೀಸಲಾತಿ ವಿರೋಧ ಕಾಂಗ್ರೆಸ್ಗೆ ಇತಿಹಾಸ
ಮಹಿಳೆಯರು ಈ ದೇಶದಲ್ಲಿ ರಾಜಕೀಯವಾಗಿ ಮುಂದೆ ಬರಲು ಕಾಂಗ್ರೆಸ್ ಪಕ್ಷ ಬಯಸುತ್ತಿಲ್ಲ. ಈ ಹಿಂದೆಯೂ ಮಹಿಳೆಯರಿಗಾಗಿ ಜಾರಿ ಮಾಡಿದ್ದ ಹಲವು ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿತ್ತು. ಸಾಮಾನ್ಯ ಕುಟುಂಬದ ಮಹಿಳೆ ಜನ್ಧನ್ ಖಾತೆ ಹೊಂದಬೇಕೆಂಬ ಉದ್ದೇಶವನ್ನು ವಿರೋಧಿಸಿತ್ತು. ಮತ್ತು ಮಹಿಳಾ ಮೀಸಲಾತಿ ಕಾಯ್ದೆಯನ್ನು ಈ ಹಿಂದೆಯೂ ವಿರೋಧಿಸುತ್ತು. ಈಗಲು ವಿರೋಧ ಮಾಡಿ ಕಾಯ್ದೆ ಸೋಲುವಂತೆ ಮಾಡಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷವಾಗಿದೆ. ಪ್ರತಿಯೊಬ್ಬ ಮಹಿಳೆಯರು ಕಾಂಗ್ರೆಸ್ ಪಕ್ಷದ ನಡೆಯನ್ನು ಖಂಡಿಸಬೇಕು.
ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಮುಖಂಡರು, ಕೊಪ್ಪಳ.

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ

ಮಹಿಳಾ ಮೀಸಲಾತಿಗೆ ವಿರೋಧ: ಹೇಮಲತಾ ನಾಯಕ ಆಕ್ರೋಶ- ಸಾಮಾನ್ಯ ಮಹಿಳೆಯರಿಗೆ ಅಧಿಕಾರ:ಕಾಂಗ್ರೆಸ್ ಅಡ್ಡಿಪಡಿಸಿದೆ

2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಎಚ್.ಕೆ. ಪಾಟೀಲ

ನವೀನ್ ಗುಳಗಣ್ಣನಗೆ ಮತ್ತೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ- ಪಕ್ಷ ಸಂಘಟನೆಯಲ್ಲಿ ವಿಫಲ: ದಢೇಸೂಗೂರಗೆ ಕೊಕ್