

20th April 2026

undefined
ಕೊಪ್ಪಳ.
ರಣ ಬಿಸಲು ಮತ್ತು ಮಳೆ, ಗಾಳಿಯ ಅಬ್ಬರದ ಮೇ ತಿಂಗಳಲ್ಲಿ ಐತಿಹಾಸಿಕ ಕನಕಗಿರಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗುವುದು ಸೂಕ್ತವೇ ಎಂಬ ಚರ್ಚೆ ನಡೆದಿದ್ದು, ಈಗ ಉತ್ಸವ ಆಚರಿಸುವ ಜಿಲ್ಲಾ ಸಚಿವರು ಮತ್ತು ಜಿಲ್ಲಾಡಳಿತದ ನಡೆಗೆ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.
ಮೇ.9 ಮತ್ತು 10 ನೇ ದಿನಾಂಕದಂದು ಕನಕಗಿರಿ ಉತ್ಸವ ಘೋಷಣೆ ಮಾಡಿರುವ ಸಚಿವ ಶಿವರಾಜ್ ತಂಗಡಗಿ ಅವರು ಉತ್ಸವ ಸಿದ್ದತೆಗಾಗಿ ಕನಕಗಿರಿಯಲ್ಲಿ ಏ.21 ರಂದು ಪೂರ್ವಭಾವಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಜಾತ್ರೆ ಉತ್ಸವಗಳು ನವೆಂಬರ್ ತಿಂಗಳಿಂದ ಫೇಬ್ರುವರಿಯ ಅವಧಿಯಲ್ಲಿ ಆಚರಿಸುವುದು ಸೂಕ್ತ. ಈ ಸಮಯದಲ್ಲಿ ಪರಿಸರದಲ್ಲಿ ಮಳೆ, ಗಾಳಿ ಇರುವುದಿಲ್ಲ. ಪುರಾತನ ಕಾಲದಿಂದಲೂ ಜಾತ್ರೆಗಳು ನವೆಂಬರ್ ಮಾರ್ಚ್ ತಿಂಗಳ ಸಮಯದಲ್ಲಿ ನಡೆಯುತ್ತಿರುವುದು ವಾಡಿಕೆ. ಈ ಹಿಂದೆ ಸರಕಾರ ಕೂಡ ನವೆಂಬರ್ ತಿಂಗಳಿಂದ ಮಾರ್ಚ್ ಅಂತ್ಯದ ಅವಧಿಯಲ್ಲಿ ಉತ್ಸವ ಆಚರಿಸಿ ಜನೋತ್ಸವ ಆಚರಿಸುತ್ತಾ ಬರಿತ್ತಿತ್ತು. ಆದರೆ ಇತ್ತಿಚಿಗೆ ಸರಕಾರದ ಸಚಿವರು ಮತ್ತು ಜಿಲ್ಲಾಡಳಿತ ಕನಕಗಿರಿ ಮತ್ತು ಆನೆಗೊಂದಿ ಉತ್ಸವ ಆಚರಿಸಲು ಅಷ್ಟೊಂದು ಉತ್ಸಾಹ ತೊರುತ್ತಿಲ್ಲ. ಆದರೆ ಕೆಲವು ಸಂಘಟನೆಗಳು ಮತ್ತು ಪತ್ರಕರ್ತರು ಪದೇ ಪದೇ ಉತ್ಸವ ಯಾವಾಗ ಮಾಡುತ್ತಿರಿ ಎಂಬ ಪ್ರಶ್ನೆಗೆ ಮತ್ತು ಒತ್ತಾಯಕ್ಕೊಳಗಾಗಿ ಉತ್ಸವ ಆಚರಿಸಲು ಸಚಿವರು ಮುಂದಾಗುತ್ತಿದ್ದಾರೆ ಹೊರತು ಸ್ವಂತ ಆಸಕ್ತಿಯಿಂದ ಅಲ್ಲ ಎನ್ನುವುದಕ್ಕೆ ಸಚಿವರು ಮೇ ತಿಂಗಳಲ್ಲಿ ಉತ್ಸವ ಆಚರಿಸಲು ಮುಂದಾಗಿರುವುದೇ ಸಾಕ್ಷಿಯಾಗಿದೆ. ಈಗಾಗಲೆ ಬಿಸಲಿನ ಬೆಗೆಗೆ ಜನ ಬಳಲುತ್ತಿದ್ದಾರೆ. ರಣ ಬಿಸಿಲಿನ ನಡುವೆ ಮಳೆ ಮತ್ತು ಗಾಕಲಿ ಅಬ್ಬರ ಪ್ರಾರಂಭವಾಗಿದೆ. ಮೊನ್ನೆ ಸುರಿದ ಮಳೆಯಲ್ಲಿ ಸಿಡಿಲಿಗೆ ಜಾನುವಾರುಗಳು ಸಾವಪ್ಪಿವೆ. ಈಗ ದಿನಾಲು ಮೊಡ ಕವಿದು ಬಂದ ರುಗಾಳಿ ಮಳೆಗೆ ಅಲ್ಲಲ್ಲಿ ಹಾನಿಯಾಗುತ್ತಿರುವ ಸಂಗತಿ ವರದಿಯಾಗುತ್ತಿದೆ. ಮೇ.9 ಮತ್ತು 10 ರಂದು ಉತ್ಸವ ನಡೆಯುವ ಸಮಯದಲ್ಲಿ ಗಾಳಿ, ಬಂದರೆ ಹೇಗೆ ಎಂಬ ಯೊಇಚನೆಯೂ ಜಿಲ್ಲಾಡಳಿತ ಮಾಡಬೇಕಿದೆ. ಇಂತಹ ಸಂಗತಿಯನ್ನು ಯೋಚನೆ ಮಾಡದೇ ಜಿಲ್ಲಾ ಉತ್ಸುವಾರಿ ಸಚಿವರು ಉತ್ಸವ ಆಚರಿಸಲು ಮುಂದಾಗಿರುವುದು ಯಾವ ಕಾರಣಕ್ಕೆ ಎಂಬುದು ಅವರೇ ಉತ್ತರಿಸಬೇಕು. ಹಿಂದೆ ಇಕ್ಬಾಲ್ ಅನ್ಸಾರಿಯವರು ಶಾಸಕರಾಗಿದ್ದಾಗ 2016 ರಲ್ಲಿ ಎಪ್ರೇಲ್ ತಿಂಗಳಲ್ಲಿ ಆನೆಗೊಂದಿ ಉತ್ಸವ ಆಯೋಜಿಸಿದ್ದರು. ಮೊದಲನೆ ದಿನ ಉತ್ಸವ ಯಶಸ್ವಿಯಾಗಿ ಪ್ರಾರಂಭವಾಗಿತ್ತು. ಆದರೆ ಎರಡನೇ ದಿನ ಸಂಜೆಯಾಗುತ್ತಿದ್ದಂತೆ ಬಿರುಗಾಳಿ, ಮಳೆ ಜೊರಾಗಿ ಬಂದಿದ್ದರಿಂದ ಸಾಕಷ್ಟು ಅಲ್ಲೊಲ್ಲ ಕಲ್ಲೊಲವಾಗಿತ್ತು. ಜನರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಜಿಲ್ಲಾಡಳಿತ ಹರ ಸಾಹಸ ಪಟ್ಟಿದ್ದನ್ನು ನೆನಪಿಸಿಕೊಳ್ಲಕಬೇಕು.
ಹೀಗಾಗಿ ಜಿಲ್ಲಾಡಳಿತ ಸಚಿವರ ಗಮನಕ್ಕೆ ಇಂತಹ ಸಂಗತಿ ತರುವುದು ಸೂಕ್ತ. ಕನಕಗಿರಿ ಉತ್ಸವ ಆಚರಿಸುವುದು ಜನರನ್ನು ಸಂತೋಷಗೊಳಿಸಲು. ಕೇವಕ ಕಾಟಾಚಾರಕ್ಕೆ ಅಲ್ಕ ಎಂಬುದನ್ನು ಮನಗಾಣಬೇಕುದೆ. ಸಚುವ ಶಿವರಾಜ ತಂಗಡಗಿ ಇಂತಹ ಸಂಗತಿಗಳನ್ನು ಗಮನ ಹರಿಸಿ ಉತ್ಸವ ದಿನಾಂಕ ನಿಗದಿಗೊಳಿಸುವುದು ಸೂಕ್ತ ಎಂಬುದು ಜನರ ಅಭಿಪ್ರಾಯವಾಗಿದೆ. ಜನರ ಮನಸ್ಸಿನ ಅಭಿಪ್ರಾಯವನ್ನು ಜಿಲ್ಲೆಯ ಜನರ ಧ್ವನಿಯಾಗಿ ಸಮರ್ಥವಾಣಿ ಪತ್ರಿಕೆ ಈ ವಿಷಯವನ್ನು ವಿಶ್ಲೇಷಣೆ ಮಾಡಿದೆ ಅಷ್ಟೆ.

ಗಂಗಾವತಿಗೆ ತಹಶೀಲ್ದಾರರಾಗಿ ಯು.ವಸಂತಕುಮಾರಿ ವರ್ಗ ರಾಜ್ಯ ಸರಕಾರದ ಆದೇಶ: ಏ.15ರಂದು ಕರ್ತವ್ಯಕ್ಕೆ